ಜಯಲಲಿತಾ ಹುಟ್ಟುಹಬ್ಬದ ಉಡುಗೊರೆಯೂ ಕಾನೂನು ಬಾಹಿರ – ಸುಪ್ರಿಂ!

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಫೆಬ್ರವರಿ 14: ದಿವಂಗತ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾರಿಗೆ ತಮ್ಮ ಹುಟ್ಟು ಹಬ್ಬದ ದಿನ ಪಡೆದ ಉಡುಗೊರೆಗಳೂ ಕಾನೂನು ಬಾಹಿರ ಎಂದು ಸುಪ್ರಿಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಜಯಲಲಿತಾ ಹುಟ್ಟುಹಬ್ಬದಂದು 1.5 ಕೋಟಿ ರೂಪಾಯಿ ಮೌಲ್ಯದ ಉಡುಗೊರೆಗಳಳು ಪಕ್ಷ ಕಾರ್ಯಕರ್ತರಿಂದ ಅವರಿಗೆ ಸಿಕ್ಕಿತ್ತು. ಇದನ್ನು ಕಾನೂನಾತ್ಮಕ ಆದಾಯ ಎಂದು ಜಯಲಲಿತಾ ವಕೀಲರು ವಾದಿಸಿದ್ದರು. ಇದಕ್ಕೆ ಪ್ರತಿಯಾಗಿ, "ಒಂದೊಮ್ಮೆ ಉಡುಗೊರೆಗಳನ್ನು ಕಾನೂನಾತ್ಮಕ ಆದಾಯ ಎಂದು ಪರಿಗಣಿಸಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಭ್ರಷ್ಟ ರಾಜಕಾರಣಿಗಳು ತಮ್ಮ ಭ್ರಷ್ಟಾಚಾರ ಮುಚ್ಚಿ ಹಾಕಲು ಉಡುಗೊರೆಗಳ ತಂತ್ರ ಅನುಸರಿಸುತ್ತಾರೆ," ಎಂದು ಕರ್ನಾಟಕದ ವಕೀಲ ದುಶ್ಯಂತ್ ದವೆ ವಾದಿಸಿದ್ದರು. ಇದೊಂದು ವಿಚಾರದ ಬಗ್ಗೆಯೇ ಕಳೆದ ಹಲವು ವರ್ಷಗಳಿಂದ ವಾದ ವಿವಾದ ನಡೆದು ಬಂದಿತ್ತು.[ಚಿನ್ನಮ್ಮ ಮುಂದಿರುವ ಅಂತಿಮ 4 ಆಯ್ಕೆಗಳಿವು..]

Jayalalithaa's birthday gifts not a lawful source of income: SC

ಕೊನೆಗೆ ಕರ್ನಾಟಕ ವಾದ ಪುರಸ್ಕರಿಸಿದ ಸುಪ್ರಿಂ ಕೊರ್ಟ್ ಸಾರ್ವಜನಿಕ ಸೇವೆಯಲ್ಲಿರುವವರು ಸ್ವೀಕರಿಸುವ ಉಡುಗೊರೆಯೂ ಕಾನೂನು ಬಾಹಿರ ಎಂದು ಮಹತ್ವದ ತೀರ್ಪು ನೀಡಿದೆ. ಈ ಕುರಿತು ಆದೇಶದಲ್ಲಿ ಉಲ್ಲೇಖಿಸಿರುವ ನ್ಯಾಯಮೂರ್ತಿಗಳು "ಒಂದೊಮ್ಮೆ ಉಡುಗೊರೆ ಸ್ವೀಕರಿಸಲು ಅನುವು ಮಾಡಿಕೊಟ್ಟರೆ, ಅದೇ ರೂಪದಲ್ಲಿ ಲಂಚವೂ ಸಂದಾಯವಾಗುತ್ತದೆ," ಎಂದು ಹೇಳಿದೆ.[ಅಕ್ರಮ ಆಸ್ತಿ ಲೆಕ್ಕ ಹಾಕುವಾಗ ಕರ್ನಾಟಕ ಹೈಕೋರ್ಟ್ ಎಡವಿದ್ದೆಲ್ಲಿ?]

'1992ರ ನಂತರ ಸಾರ್ವಜನಿಕ ಸೇವೆಯಲ್ಲಿರುವವರು ಉಡುಗೊರೆಗಳನ್ನು ಸ್ವೀಕರಿಸಲು ಅವಕಾಶ ಇಲ್ಲ. ಒಂದೊಮ್ಮೆ ಜಯಲಲಿತಾ ಅಧಿಕಾರದಲ್ಲಿ ಇಲ್ಲದೇ ಇದ್ದಲ್ಲಿ ಈ ಎಲ್ಲಾ ಉಡುಗೊರೆಗಳನ್ನು ಕೊಡುತ್ತಲೇ ಇರಲಿಲ್ಲ,' ಎಂದು ಹೇಳಿದ್ದ ವಿಚಾರಣಾ ನ್ಯಾಯಾಲಯ ಉಡುಗೊರೆಗಳು ಕಾನೂನಾತ್ಮಕ ಆದಾಯ ಎಂಬ ವಾದವನ್ನು ತಳ್ಳಿ ಹಾಕಿತ್ತು. ಇದಕ್ಕಾಗಿ 1988ರಲ್ಲಿ ನೀಡಿದ ಆದೇಶವನ್ನು ಉಲ್ಲೇಖಿಸಿತ್ತು. ಈ ಆದೇಶದಲ್ಲಿ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳನ್ನು ಭ್ರಷ್ಟಾಚಾರ ದಿಂದ ಮುಕ್ತ ಮಾಡಿ ಸಾರ್ವಜನಿಕ ಜೀವನದಲ್ಲಿ ಕಳಂಕರಹಿತರಾಗಿ ಕಾಪಾಡಬೇಕು ಎಂದು ಹೇಳಲಾಗಿದೆ.

ಆದರೆ ಕರ್ನಾಟಕ ಹೈಕೋರ್ಟ್ ಮಾತ್ರ ಉಡುಗೊರೆಗಳನ್ನು ಸಾರಾಸಗಟಾಗಿ ಆದಾಯ ತೆರಿಗೆಗೆ ಸೇರಿಸಿ ಆದೇಶ ನೀಡಿತ್ತು. ಅಂದರೆ ಈ ಉಡುಗೊರೆಗಳನ್ನು ಕಾನೂನಾತ್ಮಕ ಎಂದು ಪರಿಗಣಿಸಿತ್ತು. ಹೀಗಿದ್ದೂ ಇದಕ್ಕೆ ಸ್ಪಷ್ಟ ಕಾರಣಗಳನ್ನೇನೂ ನೀಡಿರಲಿಲ್ಲ. ಇದೀಗ ಕರ್ನಾಟಕ ಹೈಕೋರ್ಟಿನ ಆದೇಶವನ್ನು ತಳ್ಳಿಹಾಕಿ, ವಿಚಾರಣಾ ನ್ಯಾಯಾಲಯ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Can Rs 1.5 crore received from party cadres as gifts on birthdays be said to be a lawful source of income, Karnataka had asked while arguing the Jayalalithaa disproportionate assets case in the Supreme Court.
Please Wait while comments are loading...