'ಅಮ್ಮಾ ಸಿಮೆಂಟ್'ಯೋಜನೆ ಆರಂಭಿಸಿದ ಜಯಲಲಿತಾ

ಚೆನ್ನೈ, ಸೆ. 26 : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣದ ತೀರ್ಪು ಹೊರಬೀಳಲು ಒಂದು ದಿನ ಬಾಕಿ ಉಳಿದಿದೆ. ಈ ನಡುವೆಯೇ ಶುಕ್ರವಾರ ಅವರು ರಾಜ್ಯದ ಜನರಿಗಾಗಿ ಅಮ್ಮಾ ಸಿಮೆಂಟ್ ಯೋಜನೆ ಘೋಷಣೆ ಮಾಡಿದ್ದಾರೆ. ಈ ಯೋಜನೆ ಅನ್ವಯ 190 ರೂ.ಗೆ ಜನರಿಗೆ ಸಿಮೆಂಟ್ ದೊರೆಯಲಿದೆ.

ಈಗಾಗಲೇ ಅಮ್ಮಾ ಸರಣಿ ಕಾರ್ಯಕ್ರಮಗಳ ಅಡಿ ಬಂದ ಅಮ್ಮಾ ಕ್ಯಾಂಟೀನ್‌, ಅಮ್ಮಾ ಮಿನರಲ್‌ ವಾಟರ್‌ ಮುಂತಾದ ಯೋಜನೆಗಳು ತಮಿಳುನಾಡಿನಲ್ಲಿ ಭಾರೀ ಮೆಚ್ಚುಗೆಗಳಿಸಿವೆ. ಸದ್ಯ ಇದಕ್ಕೆ ಅಮ್ಮಾ ಸಿಮೆಂಟ್‌ ಹೊಸ ಸೇರ್ಪಡೆಯಾಗಿದ್ದು, ಶುಕ್ರವಾರ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. [ಬೆಂಗಳೂರಲ್ಲಿ ಜಯಾ 'ಅಮ್ಮ' ಪಡೆಗೆ ನೋ ಎಂಟ್ರಿ?]

Jayalalithaa

ಅಮ್ಮಾ ಸಿಮೆಂಟ್ ಯೋಜನೆಯಡಿ ಜನರಿಗೆ 190 ರೂ.ಗೆ ಒಂದು ಚೀಲ ಸಿಮೆಂಟ್ ದೊರೆಯಲಿದೆ. ತಮಿಳುನಾಡು ಸರ್ಕಾರ ಖಾಸಗಿ ಕಂಪನಿಗಳಿಂದ ಸಿಮೆಂಟ್‌ಅನ್ನು ಖರೀದಿ ಮಾಡಿ ಅಮ್ಮಾ ಸಿಮೆಂಟ್‌ ಯೋಜನೆಯಡಿ ಜನರಿಗೆ 190 ರೂ.ಗೆ ಪೂರೈಕೆ ಮಾಡುತ್ತದೆ. ಸಿಮೆಂಟ್ ಬೆಲೆಗಳಲ್ಲಿ ಸದಾ ಏರಿಳಿತವಾಗುವುದರಿಂದ ಈ ಯೋಜನೆ ಜನರಿಗೆ ಸಹಕಾರಿಯಾಗಲಿವೆ. [ತಮಿಳುನಾಡು ಜನರಿಗೆ ಅಮ್ಮಾ ಮಿನರಲ್‌ ವಾಟರ್]

ಸದ್ಯ, ತಮಿಳುನಾಡು ರಾಜ್ಯಕ್ಕೆ ಆಂಧ್ರಪ್ರದೇಶದಿಂದ ತಿಂಗಳಿಗೆ ಸರಾಸರಿ 4ರಿಂದ 4.5 ಲಕ್ಷ ಟನ್‌ ಸಿಮೆಂಟ್‌ ಪೂರೈಕೆಯಾಗುತ್ತಿದೆ. ಆದರೆ, ತಮಿಳುನಾಡಿನ ತಿಂಗಳಿಗೆ 17ರಿಂದ 18 ಲಕ್ಷ ಟನ್‌ ಸಿಮೆಂಟ್‌ ಬೇಡಿಕೆ ಇದೆ. ಆದ್ದರಿಂದ ಸಿಮೆಂಟ್‌ ದುಬಾರಿ ವಸ್ತುವಾಗಿತ್ತು. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಯೋಜನೆ ಅವರ ಪಾಲಿಗೆ ವರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+