ಜಯಾ ಟಿವಿಯಿಂದಲೇ ಮೊದಲಿಗೆ ಗಾಳಿ ಸುದ್ದಿ ಹಬ್ಬಿದ್ದು!

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 05: ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರು ನಿಧನರಾದ ಸುದ್ದಿ ಜಯಾ ಟಿವಿಯ ಅಧೀನದ ಜಯಾ ಪ್ಲಸ್ ವಾಹಿನಿಯಿಂದ ಸೋಮವಾರ ಸಂಜೆ ಪ್ರಸಾರವಾಗಿ ಭಾರಿ ಗೊಂದಲಕ್ಕೆ ಕಾರಣವಾಯಿತು.

ಇದರಿಂದ ಸಾಮಾಜಿಕ ಜಾಲ ತಾಣಗಳಲ್ಲಿ ನಿಧನದ ಗಾಳಿ ಸುದ್ದಿ ಹರಿದಾಡತೊಡಗಿತು.ಎಐಎಡಿಎಂಕೆ ಕಾರ್ಯಕರ್ತರು ಕೂಡಾ ಶೋಕಾಚಾರಣೆಯಲ್ಲಿ ಮುಳುಗುವಂತೆ ಮಾಡಿದ ಘಟನೆ ನಡೆದೇ ಹೋಯಿತು.

Jaya Plus TV sparks off rumours on Jayalalithaa death, denies it later

ಸತ್ಯಾಸತ್ಯತೆ ಪರೀಕ್ಷಿಸದೆ ಪಕ್ಷದ ಕಚೇರಿಯಲ್ಲಿ ಚರಮಗೀತೆ ಹಾಡಿ, ಧ್ವಜವನ್ನು ಅರ್ಧಕ್ಕೆ ಇಳಿಸಿ ಗೌರವ ಸಂತಾಪ ಸೂಚಿಸಲಾಯಿತು. ಅಪೋಲೋ ಆಸ್ಪತ್ರೆಯಿಂದ ಮತ್ತೊಮ್ಮೆ ಸ್ಪಷ್ಟನೆ ಸಿಗುವ ತನಕ ಗೊಂದಲ ಹೀಗೆ ಮುಂದುವರೆದಿತ್ತು.

ಎಐಎಡಿಎಂಕೆ ಪಕ್ಷದ ಮುಖವಾಣಿಯಾಗಿರುವ ಜಯಾ ಟಿವಿ ಅಧಿಕೃತ ಮಾಧ್ಯಮವಾಗಿ ಗುರುತಿಸಿಕೊಂಡಿದೆ. ಸುದ್ದಿಯನ್ನು ಟಿವಿ ಕೂಡಾ ಅಲ್ಲಗೆಳೆದರೂ ಕ್ಷಣಾರ್ಧದಲ್ಲಿ ಟಿವಿ ಗ್ರಾಬ್ ಸ್ಕ್ರೀನ್ ಶಾಟ್ ತೆಗೆದುಕೊಂಡು ಟ್ವೀಟ್ ಮಾಡಿ ಹಲವಾರು ಮಂದಿ ಈ ಪ್ರಮಾದವನ್ನು ಎತ್ತಿ ತೋರಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Screengrabs of Jaya television's subsidiary channel Jaya Plus allegedly broadcasting a slide announcing Tamil Nadu Chief Minister J Jayalalithaa's death kept social media buzzing through late Monday evening.
Please Wait while comments are loading...