ಜಲ್ಲಿಕಟ್ಟು ವಿವಾದ: ತ್ರಿಶಾಗೆ ಜೀವಭಯ, ಪೊಲೀಸರಿಗೆ ಮೊರೆ

Posted By:
Subscribe to Oneindia Kannada

ಚೆನ್ನೈ, ಜನವರಿ 16: ಜಲ್ಲಿಕಟ್ಟು ವಿರುದ್ಧ ಹೋರಾಟ ನಡೆದಿರುವ ಪೆಟಾ (ಪೀಪಲ್ ಫಾರ್ ದ ಎಥಿಕಲ್ ಟ್ರೀಟ್​ವೆುಂಟ್ ಆಫ್ ಎನಿಮಲ್ಸ್) ಸಂಸ್ಥೆ ಪರ ಪರೋಕ್ಷ ಬೆಂಬಲ ನೀಡಿದ್ದ ನಟಿ ತ್ರಿಶಾಗೆ ತಮಿಳರಿಂದ ಕಾಟ ಶುರುವಾಗಿದೆ. ಮೊದಲಿಗೆ ಅನಾಮಿಕರೊಬ್ಬನಿಂದ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿತ್ತು. ಈಗ ತ್ರಿಶಾಗೆ ಜೀವ ಭಯ ಶುರುವಾಗಿದೆಯಂತೆ.

'ನನ್ನ ಮಗಳಿಗೆ ಜೀವ ಬೆದರಿಕೆ ಇದೆ, ಆಕೆ ಶೂಟಿಂಗ್ ಗೆ ತೆರಳಲು ಆಗುತ್ತಿಲ್ಲ. ದಯವಿಟ್ಟು ಪೊಲೀಸ್ ಭದ್ರತೆ ಒದಗಿಸಿ' ಎಂದು ತ್ರಿಶಾ ಅವರ ತಾಯಿ ಮನವಿ ಮಾಡಿಕೊಂಡಿದ್ದಾರೆ.

ಜಲ್ಲಿಕಟ್ಟು ಆಚರಣೆ ವಿರೋಧಿಸುವ ಧಾಟಿಯಲ್ಲಿ ತ್ರಿಶಾ ಟ್ವೀಟ್ ಮಾಡಿದ್ದು ಮುಳುವಾಗಿದೆ. ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆಚರಣೆ ಪರ ವಿರೋಧ ಚರ್ಚೆ ಜಾರಿಯಲ್ಲಿರುವಾಗ, ಜಲ್ಲಿಕಟ್ಟು ವಿರುದ್ಧ ನಿಂತವರಿಗೆ ತಮಿಳರು ಬಿಸಿ ಮುಟ್ಟಿಸುತ್ತಿದ್ದಾರೆ.

ತ್ರಿಶಾ ತಮ್ಮ ಟ್ವಿಟರ್ ಅಕೌಂಟ್ ಅನ್ನು ಡಿಆಕ್ಟಿವೇಟ್ ಮಾಡಿದ್ದಾರೆ. ತ್ರಿಶಾಗೆ ಹಲವು ನಟ, ನಟಿಯರ ಬೆಂಬಲ ಸಿಕ್ಕಿದೆ. ಆದರೆ, ತ್ರಿಶಾಗೆ ಶೂಟಿಂಗ್ ಗೆ ತೆರಳಲು ಭಯವಾಗುತ್ತಿದೆಯಂತೆ.

ಟ್ವೀಟ್ ಮಾಡಿದ್ದು ವಿವಾದಕ್ಕೆ ಕಾರಣ

ಟ್ವೀಟ್ ಮಾಡಿದ್ದು ವಿವಾದಕ್ಕೆ ಕಾರಣ

ನಾನು ತಮಿಳಿನವಳು. ಆದರೆ, ಪೆಟಾ ನಿಲುವುಗಳು ನನ್ನ ನಿಲುವುಗಳೂ ಆಗಿವೆ' ಎಂದು ತ್ರಿಶಾ ಟ್ವೀಟ್ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು.

ತ್ರಿಶಾ ವಿರುದ್ಧ ದಾಳಿ

ತ್ರಿಶಾ ವಿರುದ್ಧ ದಾಳಿ

ತ್ರಿಶಾ ವಿರುದ್ಧ ತಮಿಳರೌ ಸರಣಿ ಟ್ವೀಟ್ ಗಲ ಮೂಲಕ ದಾಳಿ ನಡೆಸಿದರು. ಇದಾದ ಬಳಿಕ ಟ್ವೀಟ್ ಡಿಲೀಟ್ ಆಯಿತು. ಟ್ವಿಟ್ಟರ್ ಖಾತೆ ಹ್ಯಾಕ್ ಆಯಿತು, ನಂತರ ಅಕೌಂಟ್ ಡಿ ಆಕ್ಟಿವೇಟ್ ಮಾಡಿಕೊಂಡಿದ್ದಾರೆ.

ಮತ್ತೆ ಅಕೌಂಟ್ ಓಪನ್ ಮಾಡುವೆ

ಮತ್ತೆ ಅಕೌಂಟ್ ಓಪನ್ ಮಾಡುವೆ

ಮತ್ತೆ ಅಕೌಂಟ್ ಓಪನ್ ಮಾಡುವೆ, ಸದ್ಯಕ್ಕೆ ಡೀ ಅಕ್ಟಿವೇಟ್ ಮಾಡುತ್ತಿದ್ದೇನೆ ಎಂದಿದ್ದಾರೆ. ತ್ರಿಶಾ ಕೃಷ್ಣನ್ ಅವರ ಖಾತೆಗೆ ಅಧಿಕೃತ ಮುದ್ರೆ ಸಿಕ್ಕಿತ್ತು.

ಜನರ ಆಕ್ರೋಶಕ್ಕೆ ತ್ರಿಶಾ ಬಲಿ

ಜನರ ಆಕ್ರೋಶಕ್ಕೆ ತ್ರಿಶಾ ಬಲಿ

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಯುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಈ ಆಚರಣೆಯನ್ನು ನಿಷೇಧಿಸಿದ್ದು, ಸದ್ಯ ಪ್ರಕರಣ ಕೋರ್ಟಿನಲ್ಲಿದೆ. ಆದರೆ, ಜಲ್ಲಿಕಟ್ಟು ಆಚರಣೆ ಕೆಲವೆಡೆ ನಡೆದಿದೆ. ಜನರ ಆಕ್ರೋಶಕ್ಕೆ ತ್ರಿಶಾ ಬಲಿಯಾಗುತ್ತಿದ್ದಾರೆ.

ಕಾಲಿವುಡ್ ತಜ್ಞರ ಪ್ರತಿಕ್ರಿಯೆ

ತಮಿಳು ಚಿತ್ರರಂಗದ ಗಣ್ಯರು, ವಿಮರ್ಶಕರು ತ್ರಿಶಾಗೆ ಬಂದ ಪರಿಸ್ಥಿತಿ ಬಗ್ಗೆ ಕಳಕಳಿಯಿಂದ ಟ್ವೀಟ್ ಮಾಡಿದ್ದಾರೆ.

ಕಮಲ್ ಹಾಸನ್ ರಿಂದ ಬೆಂಬಲ

ಜಲ್ಲಿಕಟ್ಟು ಬೇಕು ಎಂದು ವಾದಿಸುವ ನಟ ಕಮಲ್ ಹಾಸನ್ ಕೂಡಾ ತ್ರಿಶಾ ವಿರುದ್ಧ ನಿಂತವರಿಗೆ ಪಾಠ ಹೇಳಿದ್ದಾರೆ. ಅವರ ಅಭಿಪ್ರಾಯಕ್ಕೆ ಬೆಲೆ ನೀಡುತ್ತೇನೆ. ನಾವು ನಮ್ಮ ಹೋರಾಟ ಮುಂದುವರೆಸೋಣ, ಅವರ ವಿರುದ್ಧ ಪ್ರತಿಭಟಿಸಿ ಪ್ರಯೋಜನವಿಲ್ಲ ಎಂದಿದ್ದಾರ್ೆ.

ತ್ರಿಶಾ ಪರ ಹತ್ತಾರು ಖಾತೆಗಳು

ತ್ರಿಶಾ ಅವರ ಅಧಿಕೃತ ಖಾತೆ ಡಿ ಆಕ್ಟಿವೇಟ್ ಆದ ಬಳಿಕ ತ್ರಿಶಾ ಪರ ಹತ್ತಾರು ಖಾತೆಗಳು ಹುಟ್ಟಿಕೊಂಡಿವೆ. ಆದರೆ, ಅದೆಲ್ಲವೂ ನಕಲಿಯಾಗಿದ್ದು, ತ್ರಿಶಾ ಖಾತೆ ಪುನರ್ ಸ್ಥಾಪನೆಯಾದರೆ, ಅಧಿಕೃತ ಖಾತೆ ಎಂಬ ಚಿನ್ಹೆ ಇರಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Actor Trisha Krishnan’s mother Uma Krishnan on Monday sought police protection for her daughter. Trisha Krishnan's Twitter account was hacked by an anonymous person, who posted a tweet supporting PETA from the actor's handle.
Please Wait while comments are loading...