ಬಿಜೆಪಿ ಪ್ರಣಾಳಿಕೆಯಲ್ಲಿನ 'ನದಿ ಜೋಡಣೆ' ಅಂಶ ಮೆಚ್ಚಿದ ರಜನಿ

ಚೆನ್ನೈ, ಏಪ್ರಿಲ್ 10: ಈ ಬಾರಿಯ ಲೋಕಸಭೆ ಚುನಾವಣೆ ವೇಳೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಯಾವ ಪಕ್ಷದ ಪರ ನಿಲ್ಲಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ, ಯಾರ ಪರವೂ ನಿಲ್ಲದೆ, ತಟಸ್ಥವಾಗಿರುವ ರಜನಿ ಅವರು ರಾಜಕೀಯ ಸಂಘಟನೆ ಬಗ್ಗೆ ಘೋಷಿಸಿದರೂ ಸಕ್ರಿಯವಾಗಿಲ್ಲ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆದರೆ, ಬಹುದಿನಗಳ ನಂತರ ಮತ್ತೊಮ್ಮೆ ಬಿಜೆಪಿ ಪರ ದನಿಯೆತ್ತಿದ್ದಾರೆ. ಬಿಜೆಪಿ ಸಂಕಲ್ಪ ಪತ್ರ ಹೆಸರಿನ ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಮೆಚ್ಚಿರುವುದಾಗಿ ಹೇಳಿದ್ದಾರೆ. ಅದರಲ್ಲೂ ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನ ನದಿ ಜೋಡಣೆ ಯೋಜನೆ ವಿಚಾರಕ್ಕೆ ರಜನಿ ಕಾಂತ್ ಅವರು ಸಹಮತ ವ್ಯಕ್ತಪಡಿಸಿದ್ದಾರೆ.

'ನಾನು ಯಾವುದೇ ಪಕ್ಷವನ್ನು ಬೆಂಬಲಿಸುತ್ತಿಲ್ಲ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನದಿ ಜೋಡಣೆ ಬಗ್ಗೆ ಪ್ರಸ್ತಾಪಿಸಿದೆ. ಇದು ಅಗತ್ಯವಾಗಿದ್ದು, ಅಸಾಧ್ಯವಾದುದೇನು ಅಲ್ಲ, ಇದರಿಂದ ಅಂತಾರಾಜ್ಯ ನದಿ ನೀರು ಹಂಚಿಕೆ ಸಮಸ್ಯೆಗೂ ಪರಿಹಾರ ಸಿಗಲಿದೆ' ಎಂದು ರಜನಿಕಾಂತ್ ಹೇಳಿದ್ದಾರೆ.

Its Welcome: Rajinikanth On BJPs Poll Promise Of Interlinking Rivers

2017ರಲ್ಲಿ ರಜನಿಕಾಂತ್ ಅವರು ರೈತ ಸಮೂಹವನ್ನು ಭೇಟಿ ಮಾಡಿ, ನದಿ ಜೋಡಣೆ ಬಗ್ಗೆ ಚರ್ಚಿಸಿದ್ದರು. ವಾಜಪೇಯಿ ಅವರ 'ಭಗೀರಥ ಯೋಜನೆ' ಇದಕ್ಕೆ ಪರಿಹಾರ ಎಂದು ನಿರ್ಧರಿಸಲಾಗಿತ್ತು. ಇದಕ್ಕಾಗಿ 1 ಕೋಟಿ ರು ದೇಣಿಗೆ ನೀಡಲು ಮುಂದಾದರು.

ರಾಜಕೀಯ ಸಂಘಟನೆ ಆರಂಭಿಸಿದ ರಜನಿಕಾಂತ್ ಅವರು ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನೀರಿಕ್ಷೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+