ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಮನೆ ಮೇಲೆ ಐಟಿ ದಾಳಿ
ಚೆನ್ನೈನಲ್ಲಿ ಇತ್ತೀಚೆಗೆ ಮೂವರು ವ್ಯಾಪಾರಿಗಳ ಮನೆ-ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ನಗದು, ಚಿನ್ನ ವಶಪಡಿಸಿಕೊಂಡಿದ್ದರು. ಅದಕ್ಕೆ ತಳಕು ಹಾಕಿಕೊಂಡಂತೆ ತಮಿಳುನಾಡು ಮುಖ್ಯಕಾರ್ಯದರ್ಶಿ ಮನೆ ಮೇಲೆ ಬುಧವಾರ ದಾಳಿ ನಡೆಸಿದ್ದಾರೆ
ಚೆನ್ನೈ, ಡಿಸೆಂಬರ್ 21: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಬೆಳಗ್ಗೆ 5.30ರ ವೇಳೆಯಲ್ಲಿ ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ರಾಮ ಮೋಹನ್ ರಾವ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಚೆನ್ನೈನ ವ್ಯಾಪ್ಯಾರಿ ಮನೆಯಲ್ಲಿ ದೊಡ್ಡ ಮೊತ್ತದ ಹಣ ವಶಪಡಿಸಿಕೊಂಡ ನಂತರ ಈ ದಾಳಿ ನಡೆದಿದೆ.
ಕೆಲ ದಿನಗಳ ಹಿಂದಷ್ಟೇ ಮೂವರು ವ್ಯಾಪಾರಿಗಳ ಚೆನ್ನೈನ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 170 ಕೋಟಿ ರುಪಾಯಿ ನಗದು ಹಾಗೂ 130 ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡಿದ್ದರು. ಬೆಳಗ್ಗೆ 10.30ರ ಸುಮಾರಿಗೆ ದೊರೆತ ಮಾಹಿತಿ ಪ್ರಕಾರ, ಆದಾಯ ತೆರಿಗೆ ಇಲಾಖೆಯು ಏನನ್ನೂ ವಶಕ್ಕೆ ಪಡೆದಿಲ್ಲ.[ಕಪ್ಪು ಹಣದೊಂದಿಗೆ ಸಿಕ್ಕಿಬಿದ್ದ ಟಿಟಿಡಿ ಸದಸ್ಯ ಕಿಕ್ಡ್ ಔಟ್!]

ಅಣ್ಣಾ ನಗರದಲ್ಲಿರುವ ಐಎಎಸ್ ಅಧಿಕಾರಿಯ ಮನೆ ಮೇಲೆ ದಾಳಿ ನಡೆದಿದೆ. ಕಳೆದ ಜೂನ್ ನಲ್ಲಿ ಈ ಅಧಿಕಾರಿಯನ್ನು ಜಯಲಲಿತಾ ಅವರೇ ಆಯ್ಕೆ ಮಾಡಿದ್ದರು. 1985ನೇ ಬ್ಯಾಚ್ ಗೆ ಸೇರಿದ ರಾಮ್ ಮೋಹನ್ ರಾವ್, ಜಾಗೃತ ದಳದ ಆಯುಕ್ತ ಹಾಗೂ ತಮಿಳುನಾಡಿನ ಅಡಳಿತಾತ್ಮಕ ಸುಧಾರಣೆಗಳ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.











Click it and Unblock the Notifications