ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಯುಪಿಎಸ್ಸಿ ಪರೀಕ್ಷೆಯಲ್ಲಿ ಕಾಪಿ ಹೊಡೆದ ಐಪಿಎಸ್ ಅಧಿಕಾರಿ ಬಂಧನ

By Sachhidananda Acharya
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಯುಪಿಎಸ್ಸಿ ಪರೀಕ್ಷೆಯಲ್ಲಿ ಕಾಪಿ ಹೊಡೆದ ಐಪಿಎಸ್ ಅಧಿಕಾರಿ ಬಂಧನ | Oneindia Kannda

    ಚೆನ್ನೈ, ಅಕ್ಟೋಬರ್ 31: ಕೇಂದ್ರ ಲೋಕ ಸೇವಾ ಆಯೋಗದ ಮುಖ್ಯ ಪರೀಕ್ಷೆ (ಮೈನ್ಸ್) ಯಲ್ಲಿ ಕಾಪಿ ಹೊಡೆದ ಐಎಎಸ್ ಪ್ರೊಬೆಷನರಿ ಅಧಿಕಾರಿಯನ್ನು ಬಂಧಿಸಲಾಗಿದೆ.

    2014ನೇ ಬ್ಯಾಚ್ ನ ಐಪಿಎಸ್ ಪ್ರೊಬೆಷನರಿ ಅಧಿಕಾರಿ ಸಫೀರ್ ಕರೀಮ್ ಚೆನ್ನೈನಲ್ಲಿ ಪರೀಕ್ಷೆ ಬರೆಯುವ ವೇಳೆ ಹೆಂಡತಿ ಜತೆ ಬ್ಲೂಟೂತ್ ಮೂಲಕ ಫೋನ್ ಸಂಪರ್ಕದಲ್ಲಿದ್ದ. ಹೆಂಡತಿ ಆ ಕಡೆಯಿಂದ ಉತ್ತರಗಳನ್ನು ಹೇಳುತ್ತಿದ್ದಳು ಎಂದು ತಿಳಿದು ಬಂದಿದೆ.

    IPS officer held for cheating at UPSC Mains exam in Chennai

    ಸಫೀರ್ ಕರೀಮ್ ಕೇರಳ ಮೂಲದವನಾಗಿದ್ದು ಇದೀಗ ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಬಂಧಿಸಲಾಗಿದೆ. ಹೈದರಾಬಾದ್ ನಲ್ಲಿರುವ ಹೆಂಡತಿಯ ಬಂಧನಕ್ಕೂ ಪೊಲೀಸರು ಯತ್ನಿಸುತ್ತಿದ್ದಾರೆ.

    ಕರೀಮ್ ಪ್ರೊಬೆಷನರಿ ಅಧಿಕಾರಿಯಾಗಿದ್ದು ತಿರುನಲ್ವೇಲಿ ಜಿಲ್ಲೆಯ ನಂಗುನೇರಿ ಉಪ ವಲಯದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.

    ಈ ಹಿಂದೆ ಕರೀಮ್ ಸಿವಿಲ್ ಸರ್ವೀಸ್ ಪರೀಕ್ಷೆ ಬರೆಯುವವರಿಗಾಗಿ ಕೋಚಿಂಗ್ ಸೆಂಟರ್ ಕೂಡ ತೆರೆದಿದ್ದ. ತಿರುವನಂತಪುರಂ, ಕೊಚ್ಚಿ, ಕ್ಯಾಲಿಕಟ್, ಭೋಪಾಲ್ ಮತ್ತು ಹೈದರಾಬಾದ್ ನಲ್ಲಿ ಇವುಗಳ ಶಾಖೆಗಳಿತ್ತು.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    An IPS officer on probation was caught cheating while appearing for the Civil Services (Main) Examination in Chennai on Monday. Safeer Karim was caught using a Bluetooth device to speak to his wife, who dictated the answers.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more