ಬಹಿರಂಗವಾಯ್ತು ರಜನೀಕಾಂತ್ ಭಾನುವಾರದ ಸಭೆ ವಿಚಾರ

ಚೆನ್ನೈನಲ್ಲಿ ಭಾನುವಾರ ಅಭಿಮಾನಿಗಳ ಸಭೆ ಕರೆದಿರುವ ರಜಿನೀಕಾಂತ್ ರಾಜಕೀಯ ಘೋಷಣೆ ಮಾಡುತ್ತಾರೆ ಎಂಬ ಸುದ್ದಿ ದಟ್ಟವಾಗಿತ್ತು. ಈ ಸುದ್ದಿಗೆ ಸ್ವತಃ ರಜಿನೀಕಾಂತ್ ಸ್ಪಷ್ಟನೆ ನೀಡಿದ್ದಾರೆ. ಏನದು ಎಂದು ತಿಳಿಯಲು ಮುಂದೆ ಓದಿ

ಚೆನ್ನೈ, ಮಾರ್ಚ್ 31: ನಾನು ರಾಜಕೀಯ ಸೇರೋದಿಲ್ಲ- ಈ ಮಾತನ್ನು ತುಂಬ ಸ್ಪಷ್ಟವಾಗಿ ಶುಕ್ರವಾರ ರಜನೀಕಾಂತ್ ಹೇಳಿದ್ದಾರೆ. ಭಾನುವಾರ ಚೆನ್ನೈನಲ್ಲಿ ಕರೆದಿರುವ ಸಭೆಯ ಉದ್ದೇಶ ರಾಜಕಾರಣವೇ ಎಂಬ ಪ್ರಶ್ನೆಗೆ ಸೂಪರ್ ಸ್ಟಾರ್ ರಜನೀಕಾಂತ್ ನೀಡಿದ ಉತ್ತರವಿದು.

ರಾಜಕೀಯಕ್ಕೆ ಸಂಬಂಧಿಸಿದ ಹಾಗೆ ಯಾವುದೇ ಘೋಷಣೆ ಇಲ್ಲ. ಅಭಿಮಾನಿಗಳನ್ನು ಭೇಟಿಯಾಗಿ ಬಹಳ ಕಾಲವಾಗಿತ್ತು. ಆದ್ದರಿಂದ ಈ ಸಭೆ ಕರೆದಿದ್ದೇನೆ ವಿನಾ ಬೇರೆ ಯಾವುದೇ ಉದ್ದೇಶವಿಲ್ಲ ಎಂದು ರಜನಿ ಹೇಳಿದ್ದಾರೆ. ಗುರುವಾರವಷ್ಟೇ ಮಲೇಷ್ಯಾದ ಪ್ರಧಾನಿ ನಜೀಬ್ ರಜಾಕ್ ಅವರು ರಜನೀಕಾಂತ್ ರನ್ನು ಭೇಟಿ ಮಾಡಿದ್ದರು.[ರಜನಿ ಭೇಟಿಗೆ ಮನೆ ಬಾಗಿಲಿಗೆ ಬಂದ ಮಲೇಷ್ಯಾ ಪ್ರಧಾನಿ]

Rajinikanth

ಅಪಾರ ಸಂಖ್ಯೆ ಅಭಿಮಾನಿಗಳನ್ನು ಹೊಂದಿರುವ ರಜನಿ ಭಾನುವಾರ ತಮ್ಮ ರಾಜಕೀಯದ ನಡೆ ಬಗ್ಗೆ ಘೋಷಣೆ ಮಾಡುತ್ತಾರೆ ಎಂದು ತಮಿಳುನಾಡಿನಲ್ಲಿ ವಿಪರೀತ ಕುತೂಹಲವಿತ್ತು. 66 ವರ್ಷದ ರಜನೀಕಾಂತ್ ರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳಲು ಹಲವು ರಾಜಕೀಯ ಪಕ್ಷಗಳು ನಿರಂತರವಾಗಿ ಪ್ರಯತ್ನಿಸುತ್ತಲೇ ಇವೆ.

2009ರಲ್ಲಂತೂ ರಜನಿ ರಾಜಕೀಯಕ್ಕೆ ಬಂದೇಬಿಟ್ಟರು ಎಂದು ದೊಡ್ಡ ಸುದ್ದಿಯಾಗಿತ್ತು. ಆದರೆ ಅವರು ಯಾವುದೇ ಪಕ್ಷಕ್ಕೂ ಸೇರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+