• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೆನ್ನೈನಲ್ಲಿ ಭಾರೀ ಮಳೆ: ಪ್ರವಾಹದ ಎಚ್ಚರಿಕೆ

|
Google Oneindia Kannada News

ಚೆನ್ನೈ ನವೆಂಬರ್ 7: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಚೆನ್ನೈನಲ್ಲಿ ರಾತ್ರಿಯಿಡೀ ಭಾರೀ ಮಳೆಯಾಗಿದೆ. ಹವಮಾನ ಇಲಾಖೆ ಇದನ್ನು 2015 ರ ನಂತರ ಆದ ಅತೀ ಹೆಚ್ಚು ಮಳೆ ಎಂದು ಕರೆದಿದೆ. ಚೆನ್ನೈ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಭಾನುವಾರ ಬೆಳಗ್ಗೆ 8.30ಕ್ಕೆ ನುಂಗಂಬಾಕ್ಕಂನ(Nungambakkam)ಲ್ಲಿ 215.3 ಮಿ.ಮೀ ಮಳೆಯಾಗಿದ್ದರೆ ಮೀನಂಬಾಕ್ಕಂನಲ್ಲಿ(Meenambakkam)113.6 ಮಿ.ಮೀ ಮಳೆಯಾಗಿದೆ.

ಬೆಳಿಗ್ಗೆ 8.30 ರವರೆಗೆ ಇತರ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು ಅಣ್ಣಾ ವಿಶ್ವವಿದ್ಯಾಲಯ (Anna University) ಪ್ರದೇಶದಲ್ಲಿ 164 ಮಿಮೀ, ಎಂಆರ್‌ಸಿ ನಗರದಲ್ಲಿ 171 ಮಿಮೀ, ತಾರಾಮಣಿ (Taramani) 127.5, ವೈಎಂಸಿಎ ನಂದನಂ 157.5, ಎಸಿಎಸ್ ವೈದ್ಯಕೀಯ ಕಾಲೇಜು 103.5 ಮಿಮೀ, ಗುಡ್‌ವಿಲ್ ಸ್ಕೂಲ್ ವಿಲ್ಲಿವಕ್ಕಂ(Goodwill School Villivakkam) 200 ಮಿಮೀ, ಪುಜಲ್(Puzhal) 146.5 ಮಿಮೀ ಮತ್ತು ಎನ್ನೂರ್ ಪೋರ್ಟ್(Ennore Port) 100 ಮಿಮೀ ಮಳೆಯಾಗಿದೆ.

"2015 ರ ನಂತರ ಚೆನ್ನೈನಲ್ಲಿ ಭಾರಿ ಮಳೆಯಾಘಿದ್ದು, ವಿಶೇಷವಾಗಿ ಉತ್ತರ ಮತ್ತು ಮಧ್ಯ ಚೆನ್ನೈ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಮೋಡವಾಗಿದೆ" ಎಂದು ಹವಾಮಾನ ಬ್ಲಾಗರ್ ಆರ್ ಪ್ರದೀಪ್ ಜಾನ್ ತಮ್ಮ ತಮಿಳುನಾಡು ವೆದರ್‌ಮ್ಯಾನ್ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದಾರೆ. ಭಾರೀ ಮಳೆಯಿಂದಾಗಿ ಅನೇಕ ರಸ್ತೆಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಟಿ ನಗರ, ವ್ಯಾಸರಪಾಡಿ, ರಾಯಪೆಟ್ಟ, ಮೈಲಾಪುರ, ಅಡ್ಯಾರ್ ಸೇರಿದಂತೆ ನಗರದ ಹಲವೆಡೆ ಜಲಾವೃತವಾಗಿದೆ. ಹಲವು ಪ್ರಮುಖ ರಸ್ತೆಗಳಲ್ಲಿ ಬೆಳಗ್ಗೆ ಮೊಣಕಾಲು ಮಟ್ಟದ ನೀರು ನಿಂತಿತ್ತು.

ತೊಂಡಿಯಾರ್‌ಪೇಟ್ (Tondiarpet) ಹೈ ರೋಡ್, ಜೀವನ್ ಲಾಲ್ ನಗರ, ಗ್ರೇಟ್ ನಾರ್ದರ್ನ್ ಟ್ರಂಕ್ ರಸ್ತೆ, ಜವಾಹರಲಾಲ್ ನೆಹರು ನಗರ, ಮಾಧವ್ರಾಮ್‌ನ (Madhavram) ಭಾಗಗಳು (ಗಣಪತಿ ಶಿವ ನಗರ, ದೀಪನ್ ನಗರ, ರಾಘವೇಂದ್ರ ನಗರ), ತೊಂಡಿಯಾರ್‌ಪೇಟ್‌ನ (Tondiarpet) ಭಾಗಗಳು (ಟಿಪಿ ಸ್ಕೀಮ್ ರಸ್ತೆ, ತಿರುವಳ್ಳೂರು ನಗರ, ವಿನೋಭಾ ನಗರ) , ರೋಯಪುರಂನ ಭಾಗಗಳು, ತೇನಾಂಪೇಟೆಯ ಭಾಗಗಳು (ಖಾದರ್ ನವಾಜ್ ಕಾನ್ ರಸ್ತೆ, ಶಿವಾನಂದ ಸಲೈ ಮತ್ತು ಇತರರು), ವೆಲಚೇರಿ ಮತ್ತು ಶೋಲಿಂಗನಲ್ಲೂರ್ ಇತರ ಪೀಡಿತ ಪ್ರದೇಶಗಳಾಗಿವೆ. ಇನ್ನೂ ವ್ಯಾಸರಪಾಡಿ ಗಣೇಶಪುರಂ ಸುರಂಗಮಾರ್ಗ ಮತ್ತು ಟಿ ನಗರ ದುರೈಸಾಮಿ ಸುರಂಗಮಾರ್ಗದಲ್ಲಿ ಸಂಚಾರ ಬಂದ್ ಮಾಡಲಾಗಿದೆ.

ಬೆಳಗ್ಗೆ 9 ಗಂಟೆಗೆ ಪೂಂಡಿ ಜಲಾಶಯದಿಂದ 3,000 ಕ್ಯೂಸೆಕ್ ನೀರು ಬಿಡಲಾಗಿದೆ ತಿರುವಳ್ಳೂರು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಜೊತೆಗೆ ಕೊಸಸ್ತಲೈಯಾರ್ ನದಿ ತೀರದ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಚೆನ್ನೈ ಕಾರ್ಪೊರೇಷನ್, ಮೆಟ್ರೋವಾಟರ್ ಮತ್ತು ಪಿಡಬ್ಲ್ಯೂಡಿ ಅಧಿಕಾರಿಗಳು ಚೆಂಬರಂಬಾಕ್ಕಂ ಸರೋವರದಿಂದ ನೀರು ಬಿಡಬೇಕೆ ಎಂದು ಚರ್ಚಿಸುತ್ತಿದ್ದಾರೆ. ಕೆಲವು ಪ್ರದೇಶಗಳಲ್ಲಿ ತೆರವು ಕಾರ್ಯ ನಡೆಯುತ್ತಿದೆ. ಬೆಳಗ್ಗೆ 11 ಗಂಟೆಯಿಂದ ಪುಝಲ್ ಜಲಾಶಯದಿಂದ 500 ಕ್ಯೂಸೆಕ್ ನೀರು ಬಿಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಭಾನುವಾರದ ಮಧ್ಯರಾತ್ರಿಯಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡ ಉಂಟಾಗಲಿದ್ದು ಉತ್ತರ ತಮಿಳುನಾಡು ಕರಾವಳಿಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಪ್ರವಾಹದ ದೂರು ಸಂಖ್ಯೆಗಳು: 1913,044-25384520, 044-25384530, 044-25384540.

English summary
Chennai experienced heavy rain overnight due to the conditions as a prelude to the forming of a low pressure over the Bay of Bengal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X