ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ ಜಲಪ್ರಳಯಕ್ಕೆ ನೆರವಾಗುತ್ತಿರುವ ಟ್ವಿಟ್ಟರ್ ಮಿತ್ರರು

By Mahesh
|
Google Oneindia Kannada News

ಚೆನ್ನೈ, ಡಿ. 03: ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.ಪ್ರಕೃತಿ ವಿಕೋಪಕ್ಕೆ ಹೆದರಿ ಕಂಗಾಲಾಗಿರುವ ಜನತೆಯ ಕೂಗು 'ಅರಣ್ಯ ರೋದನ' ಆಗದಂತೆ ಮಾಡಲು ತಂತ್ರಜ್ಞಾನ ನೆರವಾಗುತ್ತಿದೆ. ಗೂಗಲ್, ಟ್ವಿಟ್ಟರ್, ಫೇಸ್ ಬುಕ್ ಬಳಕೆ ಮೂಲಕ ಜಾಗೃತಿ ನೆರವು, ಸಹಾಯವಾಣಿಗಳನ್ನು ಸಂತ್ರಸ್ತರ ಬಳಿಗೆ ಕರೆದೊಯ್ಯಲಾಗುತ್ತಿದೆ.

ಇಲ್ಲಿ ತನಕ ಮಳೆಗೆ ಆಹುತಿಯಾಗಿರುವವರ ಸಂಖ್ಯೆ 200 ದಾಟಿದೆ. ಚೆನ್ನೈ ನಗರದಲ್ಲಿ ವಿಮಾನಯಾನ, ರೈಲು, ಬಸ್, ಆಟೋರಿಕ್ಷಾ ಸಂಚಾರ ಬಂದ್ ಆಗಿದೆ. ಇತ್ತೀಚೆಗೆ ಆರಂಭಗೊಂಡ ಮೆಟ್ರೋ ಸಂಚಾರಕ್ಕೆ ಸಿದ್ಧವಿದ್ದರೂ ಜನರ ಉಪಯೋಗಕ್ಕೆ ಬರುತ್ತಿಲ್ಲ. ರಸ್ತೆಯಲ್ಲಿ ಮೂರರಿಂದ ಐದು ಅಡಿ ಎತ್ತರ ನೀರು ನಿಂತಿರುತ್ತದೆ. [ಭರ್ತಿ ಮಳೆಯಲ್ಲೂ ಹಾಲು ಹಾಕಲು ಬಂದ ಮಹಿಳೆಗೆ ಸಲಾಂ!]

ಭಾರತೀಯ ಸೇನೆ, ವಿಪತ್ತು ನಿರ್ವಹಣಾ ದಳ ಸೇರಿದಂತೆ ಜನ ಸಾಮಾನ್ಯರು ಕೂಡಾ ತಮ್ಮ ಸಹಾಯ ಹಸ್ತ ಚಾಚಿದ್ದಾರೆ. ಸಿಎಂ ಜಯಲಲಿತಾ, ಪ್ರಧಾನಿ ಮೋದಿ ಅವರ ವೈಮಾನಿಕ ಸಮೀಕ್ಷೆ ಜಾರಿಯಲ್ಲಿದೆ. [ತಮಿಳುನಾಡಿಗೆ 5 ಕೋಟಿ ನೆರವು ಘೋಷಿಸಿದ ಕರ್ನಾಟಕ]

ಕರ್ನಾಟಕ ಸೇರಿದಂತೆ ಅಕ್ಕಪಕ್ಕದ ರಾಜ್ಯಗಳಿಂದ ಆಹಾರ ಸೇರಿದಂತೆ ಹಣದ ನೆರವು ಸಿಗುತ್ತಿದೆ. ಅದರೆ, ಎಲ್ಲಕ್ಕಿಂತ ಮುಖ್ಯವಾಗಿ, ತ್ವರಿತವಾಗಿ ಟ್ವಿಟ್ಟರ್ ನಲ್ಲಿ ಅಗತ್ಯ ಮಾಹಿತಿ ಹಾಗೂ ನೆರವು ಸಿಗುತ್ತಿದೆ. [ಜಲ ಪ್ರಳಯ: ನೀರಿನಲ್ಲಿ ಸಿಲುಕಿ ದ್ವೀಪವಾದ ಚೆನ್ನೈ]

#ChennaiFloods

ಗೂಗಲ್ ಸ್ಪ್ರೇಡ್ ಶೀಟ್ ಆರಂಭಿಸಿದ್ದು, ಇದರಲ್ಲಿ ನೆರವು ನೀಡುವವರು, ಪಡೆಯುವವರ ಮಾಹಿತಿ ಸಿಗಲಿದೆ. ಫೇಸ್ ಬುಕ್ ನಲ್ಲಿ ವಿವಿಧ ಸಮುದಾಯಗಳಿಂದ ಪೇಜ್ ಆರಂಭಗೊಂಡಿದೆ. ಮೊಟ್ಟಮೊದಲಿಗೆ ಚೆನ್ನೈ ಮಳೆ ಬಗ್ಗೆ ನೆರವು ನೀಡುವುದರ ಬಗ್ಗೆ ತಿಳಿದುಕೊಳ್ಳಲು ಈ ಟ್ವಿಟ್ಟರ್ ಐಡಿ ತಪ್ಪದೆ ಫಾಲೋ ಮಾಡಿ https://twitter.com/ChennaiCares

ಸಹಾಯವಾಣಿಗಳು:
* ಭಾರತೀಯ ಜಲಸೇನೆ: 044-25394240
* ದಕ್ಷಿಣ ರೈಲ್ವೆ ವಿಭಾಗ: 044-29015204, 044-29015208, 044-28190216, 044-25330714
* ಆಹಾರ ನೆರವು: 0-9094790989

ವೈದ್ಯಕೀಯ ನೆರವಿಗಾಗಿ ಮಾಹಿತಿ:


ಮತ್ತೊಂದಿಷ್ಟು ಸಹಾಯವಾಣಿ

ಸಿಖ್, ಜೈನ, ಮುಸ್ಲಿಂ ಧರ್ಮಿಯರಿಗೆ ಆಹಾರ

ಜಮ್ಮು ಮತ್ತು ಕಾಶ್ಮೀರದ ಎನ್ ಜಿಒಯಿಂದ ಕೂಡಾ ನೆರವು

ಕಾಂಚಿಪುರಂ ಮುಂತಾದೆಡೆ ನೆರವಿಗಾಗಿ ಕರೆ ಮಾಡಿ

ಚೆನ್ನೈನ ವಿವಿಧ ಪ್ರದೇಶಗಳ ಸಹಾಯವಾಣಿ

ಹಲವೆಡೆಯಿಂದ ನೆರವು ಕೋರಿ ಟ್ವೀಟ್ ಮಾಡುತ್ತಿದ್ದಾರೆ

(ಒನ್ ಇಂಡಿಯಾ ಸುದ್ದಿ)

English summary
As Tamil Nadu is left battered and bruised by heavy rains and floods, the residents are forced to stay indoors and many are left in the lurch. Meanwhile, #ChennaiFloods and Tamil Nadu Govt are trending on the micro-blogging site Twitter. Here are some tweets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X