ತ.ನಾಡು ಜನ, ದೇವರು ನನ್ನ ಬೆನ್ನಿಗಿದ್ದಾರೆ, ಬಿಜೆಪಿಯಲ್ಲ: ರಜನಿ ಪಂಚ್

ಚೆನ್ನೈ, ಮಾರ್ಚ್ 21: "ನನ್ನ ಬೆನ್ನಿಗೆ ಇರುವುದು ಅಥವಾ ಬೆಂಬಲಿಸುತ್ತಿರುವುದು ತಮಿಳುನಾಡಿನ ಜನ ಹಾಗೂ ಆ ದೇವರೇ ಹೊರತು ಬಿಜೆಪಿಯಲ್ಲ" ಎಂದು ಪಂಚ್ ನೀಡುವ ಮೂಲಕ ನಟ ರಜನೀಕಾಂತ್ ಹಲವು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ರಾಜಕೀಯದಲ್ಲೂ ಧಾರ್ಮಿಕತೆ ಅನುಸರಿಸುವುದಾಗಿ ಮಂಗಳವಾರ ಅವರು ಹೇಳಿದ್ದಾರೆ.

ಹಿಮಾಲಯಕ್ಕೆ ತೆರಳಿದ್ದ ರಜನಿ, ಅಲ್ಲಿಂದ ಹಿಂತಿರುಗಿದ ಮೇಲೆ ಚೆನ್ನೈನಲ್ಲಿ ವರದಿಗಾರರ ಜತೆ ಮಾತನಾಡಿ, ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ರಾಜ್ಯ ಸರಕಾರವು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದರು.

ಹಿಮಾಲಯದ ಪ್ರವಾಸ ವೇಳೆ ಕೆಲವು ಬಿಜೆಪಿ ನಾಯಕರನ್ನು ಭೇಟಿ ಆಗಿದ್ದು ಹಾಗೂ ರಜನೀಕಾಂತ್ ಬೆಂಬಲಕ್ಕೆ ಬಿಜೆಪಿ ನಿಂತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಬೆಂಬಲಕ್ಕೆ ಇರುವುದು ಆ ದೇವರು ಹಾಗೂ ಜನರು ಮಾತ್ರ ಎಂದಿದ್ದಾರೆ.

God and people of TN backing me, not BJP, said actor Rajinikanth

ರಾಮ್ ರಾಜ್ಯ ರಥ ಯಾತ್ರೆಯು ಮಂಗಳವಾರ ತಮಿಳುನಾಡು ಪ್ರವೇಶಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿ, ತಮಿಳುನಾಡಿನಲ್ಲಿ ಜಾತ್ಯತೀತತೆ ಇದೆ. ರಥ ಯಾತ್ರೆಗೆ ಸರಕಾರದಿಂದ ರಕ್ಷಣೆ ನೀಡಬೇಕು. ಯಾವುದೇ ಕೋಮು ಗಲಭೆ ಆಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಇನ್ನೂ ಆರಂಭವಾಗದ ತಮ್ಮ ರಾಜಕೀಯ ಪಕ್ಷದ ಬಗ್ಗೆ ಉತ್ತರಿಸಿ, ಜಿಲ್ಲಾ ಮಟ್ಟದ ಪದಾಧಿಕಾರಿಗಳ ನೇಮಕ ಮಾಡಿದ ಬಳಿಕ ಮುಂದಿನ ನಡೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+