ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋ ಬ್ಯಾಕ್ ಅಮಿತ್ ಶಾ: ಟ್ವಿಟ್ಟರ್ ನಲ್ಲಿ ತಮಿಳರ ಆಕ್ರೋಶ

|
Google Oneindia Kannada News

Recommended Video

#GoBackAmitShah goes trending on Twitter, ahead of his Tamil Nadu visit | Oneindia Kannada

ಚೆನ್ನೈ, ಜುಲೈ 09: ಲೋಕಸಭಾ ಚುನಾವಣೆಯನ್ನು ಮನಸ್ಸಿನಲ್ಲಿಟ್ಟುಕೊಂಡು ತಮಿಳುನಾಡಿನ ಚೆನ್ನೈಗೆ ಬರುತ್ತಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಸಿಕ್ಕ ಸ್ವಾಗತ ಎಂಥಾದ್ದು?!

ಅಮಿತ್ ಶಾ ಅವರು ತಮಿಳುನಾಡಿಗೆ ಬರಬಾರದು, ವಾಪಸ್ ಹೋಗಿ ಎಂದು ತಮಿಳರು ಅಮಿತ್ ಶಾ ವಿರುದ್ಧ ಘೋಷಣೆ ಕೂಗುತ್ತಿದ್ದು, ಟ್ವಿಟ್ಟರ್ ನಲ್ಲೂ GobackAmitShah ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ. ಟಾಪ್ ಟ್ರೆಂಡಿಂಗ್ ಹ್ಯಾಶ್ ಟ್ಯಾಗ್ ನಲ್ಲಿ ಇದು ಒಂದಾಗಿದ್ದು, ಶಾರನ್ನು ಕೆಲ ತಮಿಳು ಟ್ವಿಟ್ಟಿಗರು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರದು ಚಾಣಕ್ಯನ ನೀತಿ: ಅಮಿತ್ ಶಾಪ್ರಧಾನಿ ಮೋದಿ ಅವರದು ಚಾಣಕ್ಯನ ನೀತಿ: ಅಮಿತ್ ಶಾ

ಮುಂಬರು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಮಿತ್ ಶಾ ತಮಿಳುನಾಡಿನಲ್ಲಿ ಸಭೆಯೊಂದನ್ನು ನಡೆಸಲಿದ್ದು, ಕೆಲವು ಕಾರ್ಯತಂತ್ರ ರೂಪಿಸಲಿದ್ದಾರೆ ಎಂದು ತಮಿಳುನಾಡಿನ ಬಿಜೆಪಿ ಮುಖಂಡ ತಮಿಳಿಸಾಯಿ ಸೌಂದರ್ ರಾಜನ್ ತಿಳಿಸಿದ್ದಾರೆ.

ಅಮಿತ್ ಶಾರನ್ನು 'ದಂಗೆಕೋರ' ಎಂದು ದೂರಿದ ಟಿಎಂಸಿಅಮಿತ್ ಶಾರನ್ನು 'ದಂಗೆಕೋರ' ಎಂದು ದೂರಿದ ಟಿಎಂಸಿ

'ಕೋಮುವಾದಿ ಪಕ್ಷವನ್ನು ತಮಿಳರು ಎಂದಿಗೂ ಬೆಂಬಲಿಸುವುದಿಲ್ಲ. ಆದ್ದರಿಂದಲೇ ಬಿಜೆಪಿ ಅಧ್ಯಕ್ಷರು ನಮ್ಮ ರಾಜ್ಯಕ್ಕೆ ಬರುವುದು ಬೇಕಿಲ್ಲ' ಎಂದು ಹಲವು ತಮಿಳಿಗರು ಟ್ವೀಟ್ ಮಾಡಿದ್ದಾರೆ.

ಸುಶಿಕ್ಷಿತರು ಇರುವ ಕಡೆ ಬಿಜೆಪಿ ಗೆಲ್ಲೋಲ್ಲ!

ಸುಶಿಕ್ಷಿತ ಜನರು ಇರುವ ಕಡದೆ ಬಿಜೆಪಿ ಸರ್ಕಾರ ರಚಿಸೋಲ್ಲ! ದಯವಿಟ್ಟು ನಿಮ್ಮ ಭೇಟಿಯನ್ನು ರದ್ದು ಮಾಡಿ. ಸುಮ್ಮನೆ ತೆರಿಗೆದಾರರ ಹಣ ಮತ್ತು ಸಮಯ ಎರಡನ್ನೂ ವೇಸ್ಟ್ ಮಾಡಬೇಡಿ. ಬಿಜೆಪಿ ಬೇರೆ ರಾಜ್ಯಗಳಲ್ಲಿ ಗೆಲ್ಲಬಹುದು. ಆದರೆ ದಕ್ಷಿಣ ಭಾರತದ ರಾಜ್ಯಗಳ ವಿಷಯಕ್ಕೆ ಬಂದಾಗ ಬಿಜೆಪಿ ಗೆಲುವು ಸಾಧ್ಯವಿಲ್ಲ ಎಂದು ತುಫೆಲ್ ಖಾನ್ ಹೇಳಿದ್ದಾರೆ.

ಅಮಿತ್ ಶಾ ಅವರ ತಾತ ಬಂದರೂ ಬಿಜೆಪಿ ಕತೆ ಅಷ್ಟೇ!

2019 ರ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಅಮಿತ್ ಶಾ ಬರುತ್ತಿದ್ದಾರಂತೆ. ಇದರಿಂದ ಬಿಜೆಪಿ ವೋಟ್ ಶೇರ್ ಹೆಚ್ಚುತ್ತದೆ ಎಂಬುದು 'ಭಕ್ತ'ರ ವಿಶ್ವಾಸ ಆದರೆ ಬಡ ಭಕ್ತರೇ, ಒಂದು ನೆನಪಿಡಿ. ಅಮಿತ್ ಶಾ ಅಲ್ಲ, ಅವರ ತಾತ ಬಂದೂ ತಮಿಳುನಾಡಿನಲ್ಲಿ ಬಿಜೆಪಿಗೆ ಸಿಗುವುದು 108 ಮತ ಮಾತ್ರ!

ಕೋಮುವಾದಿಗಳನ್ನು ನಾವು ಒಪ್ಪೋಲ್ಲ!

ಗೋ ಬ್ಯಾಕ್ ಅಮಿತ್ ಶಾ ಎಂಬುದು ಇದೀಗ ಭಾರತದಾದ್ಯಂತ ಟ್ರೆಂಡಿಂಗ್ ಆಗಿದೆ. ನಾನು ತಮಿಳಿಗನಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ. ಏಕೆಂದರೆ ಧರ್ಮದ ಆಧಾರದ ಮೇಲೆ ಮತ ಕೇಳುವ ಕೋಮುವಾದಿ ಪಕ್ಷವನ್ನು ನಾವು ಎಂದಿಗೂ ಬೆಮಬಲಿಸುವುದಿಲ್ಲ, ವಿರೋಧಿಸುತ್ತೇವೆ ಎಂದು ರಮೇಶ್ ಟ್ವೀಟ್ ಮಾಡಿದ್ದಾರೆ.

ಸ್ವಾಗತಿಸದಿದ್ದರೂ ಹೋಗುತ್ತೀರೇ?

ನಿಮ್ಮನ್ನು ಆಹ್ವಾನಿಸದ, ಸ್ವಾಗತಿಸದ ಜಾಗಕ್ಕೆ ಹೋಗಬಾರದು ಎಂಬುದು ನಿಮಗೆ ಗೊತ್ತಿಲ್ಲವೆ ಅಮಿತ್ ಶಾ ಎಂದು ಪ್ರಶ್ನಿಸಿದ್ದಾರೆ ಹ್ಯಾರಿಸ್ ಎಂಬುವವರು.

ನಿಮ್ಮನ್ನು ಮಾತ್ರ ಸ್ವಾಗತಿಸೋಲ್ಲ!

ನಾವು ಉತ್ತರ, ಪಶ್ಚಿಮ, ಪೂರ್ವ, ನೇಪಾಳದಿಂದಲೂ ಜನರನ್ನು ಸ್ವಾಗತಿಸುತ್ತೇವೆ, ಅವರಿಗೆ ಆತಿಥ್ಯ ನೀಡುತ್ತೇವೆ. ಆಅದರೆ ನಿಮ್ಮನ್ನು ಮಾತ್ರ ಯಾವುದೇ ಕಾರಣಕ್ಕೂ ಸ್ವಾಗತಿಸುವುದಿಲ್ಲ ಎಂದು ಬೂಪತಿ ನರೇಂದ್ರನ್ ಟ್ವೀಟ್ ಮಾಡಿದ್ದಾರೆ.

English summary
As BJP national president Amit Shah is planning to visit Tamil Nadu's Chennai on Monday, Tamil peoeple on twitter are, trying to sending him back! GobackAmitShah hashtag is trending on twitter now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X