ಚೆನ್ನೈನಲ್ಲಿ 7ರ ಬಾಲಕಿ ಅತ್ಯಾಚಾರ, ಕೊಲೆ: ಸ್ಫೋಟಗೊಂಡ ಜನಾಕ್ರೋಶ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಚೆನ್ನೈ, ಫೆಬ್ರವರಿ 13: ಮೂರನೇ ಕ್ಲಾಸ್ ಓದುತ್ತಿದ್ದ ಏಳು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಉಸಿರುಗಟ್ಟಿಸಿ ಕೊಂದು, ಸುಟ್ಟು, ಬ್ಯಾಗ್ ನಲ್ಲಿ ದೇಹವನ್ನು ತುಂಬಿ ಬಿಸಾಡಿದ ಘಟನೆ ಭಾನುವಾರ ಚೆನ್ನೈನಲ್ಲಿ ನಡೆದಿದೆ. ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಈಗ ರಾಜಕೀಯ ಹೈಡ್ರಾಮ ನಡೆಯುತ್ತಿದ್ದು, ಈ ಪುಟ್ಟ ಹುಡುಗಿ ಮೇಲೆ ನಡೆದ ಕೃತ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಸಾಫ್ಟ್ ವೇರ್ ಕಂಪೆನಿಯಿಂದರಲ್ಲಿ ಕೆಲಸ ಮಾಡುವ ನೆರೆ ಮನೆಯಾತನನ್ನು ಬಂಧಿಸಿದ್ದು, ಆ ಹುಡುಗಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಆರೋಪ ಮಾಡಲಾಗಿದೆ. ಧಶ್ಯಂತ್ ಬಂಧಿತ. ಆ ಬಾಲಕಿ ಕಿರುಚುತ್ತಿದ್ದಳು ಎಂಬ ಕಾರಣಕ್ಕೆ ಬಾಯಿಗೆ ಬಟ್ಟೆ ತುರುಕಿದ್ದಾನೆ. ಆ ವೇಳೆ ಉಸಿರುಗಟ್ಟಿ ಬಾಲಕಿ ಸಾವನ್ನಪ್ಪಿದ್ದಾಳೆ. ಆರೋಪಿಯ ಮೊಬೈಲ್ ಫೋನ್ ನಲ್ಲಿ ಮಕ್ಕಳ ಹಲವು ಪೋಲಿ ಚಿತ್ರಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.[63ರ ವೃದ್ಧನಿಂದ 12ರ ಬಾಲಕಿ ಮೇಲೆ 3 ತಿಂಗಳು ಲೈಂಗಿಕ ದೌರ್ಜನ್ಯ]

Girl Raped, Choked By Neighbour In Chennai

ಚೆನ್ನೈನಲ್ಲಿ ಹೋರ್ಡಿಂಗ್ ಗಳನ್ನು ಹಾಕಿದ್ದು, ಬಾಲಕಿ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಮನೆಯ ಎದುರು ಅಟವಾಡಿಕೊಂಡಿದ್ದ ಏಳರ ಬಾಲಕಿಯನ್ನು ಪುಸಲಾಯಿಸಿ, ಮನೆಗೆ ಕರೆದುಕೊಂಡು ಹೋಗಿರುವ ಆರೋಪಿ ಅತ್ಯಾಚರ ಎಸಗಿದ್ದಾನೆ. ಆ ವೇಳೆ ಬಾಲಕಿ ಕಿರುಚಾಡಿದ್ದಾಳೆ ಎಂದು ಬಾಯಿಗೆ ಬಟ್ಟೆ ತುರುಕಿದ್ದಾನೆ.

ಆಗ ಉಸಿರುಗಟ್ಟಿ ಆಕೆ ಮೃತಪಟ್ಟಿದ್ದಾಳೆ. ಆ ನಂತರ ದೇಹವನ್ನು ಸುಟ್ಟಿರುವ ಆರೋಪಿ, ತ್ರಾವೆಲ್ ಬ್ಯಾಗ್ ನಲ್ಲಿ ತುಂಬಿ ಹೆದ್ದಾರಿ ಪಕ್ಕದಲ್ಲಿ ಎಸೆದಿದ್ದಾನೆ. ಮನೆ ಮುಂದೆ ಆಟವಾಡಿಕೊಂಡಿದ್ದ ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ಆಕೆ ಪೋಷಕರು ದೂರು ದಾಖಲಿಸಿದ್ದರು. ನೆರೆಮನೆಯವರನ್ನೆಲ್ಲ ವಿಚಾರಣೆ ನಡೆಸಿದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Class 3 student was sexually assaulted, suffocated, burnt and dumped in a bag on Sunday in Chennai, a city caught in a political drama that has also demanded the attention of the police. A neighbor who works with a software company has been arrested and charged with the rape and murder.
Please Wait while comments are loading...