ಗಜ ಚಂಡಮಾರುತ: ತಮಿಳುನಾಡು ವಿವಿಗಳ ಪರೀಕ್ಷೆಗಳು ಮುಂದೂಡಿಕೆ

ಚೆನ್ನೈ, ನವೆಂಬರ್ 19: ಚೆನ್ನೈನಲ್ಲಿ ಗಜ ಚಂಡಮಾರುತ ತನ್ನ ಭೀಕರತೆಯನ್ನು ಪ್ರದರ್ಶಿಸುತ್ತಿದೆ.ತಮಿಳುನಾಡಿನ ಎಲ್ಲಾ ಶಾಲೆ, ಕಾಲೇಜುಗಳಿಗೆ ಸೋಮವಾರ ರಜೆ ನೀಡಲಾಗಿದೆ.

ಇದುವರೆಗೂ ಗಜ ಚಂಡ ಮಾರುತಕ್ಕೆ 45ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.ತಾಂಜಾವೂರು, ತಿರುವಾರೂರು, ಪುದುಕೊಟ್ಟೈ, ನಾಗಪಟ್ಟಣಂ ಪ್ರದೇಶಗಳಲ್ಲಿ ಅತಯಾದ ಮಳೆಯಾಗಿದೆ. ಹಲವು ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗಿತ್ತು, ಟ್ರಾನ್ಸ್‌ಫರ್ಮರ್, ವಿದ್ಯುತ್ ಕಂಬಗಳು, ಮರಳು ಧರೆಗುರುಳಿವೆ, ಅಣ್ಣ ವಿಶ್ವವಿದ್ಯಾಲಯದಲ್ಲಿ ಈ ಮೊದಲು ನವೆಂಬರ್ 19ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಡಿಸೆಂಬರ್ 15ಕ್ಕೆ ಮುಂದೂಡಲಾಗಿದೆ. ಪಾಲಿಟೆಕ್ನಿಕ್ ಕಾಲೇಜಿನ ಪರೀಕ್ಷೆಗಳು ನವೆಂಬರ್ 26ಕ್ಕೆ ಮುಂದೂಡಲಾಗಿದೆ. ಈಗಾಗಲೇ 45 ಮಂದಿ ಮೃತಪಟ್ಟಿದ್ದು, 2.5 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ.

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ 'ಗಜ' ಚಂಡಮಾರುತ ಅರಬ್ಬಿ ಸಮುದ್ರದ ಆಗ್ನೇಯ ಭಾಗಕ್ಕೆ ಹೋಗಿದ್ದು, ಅಲ್ಲಿ ಒತ್ತಡದ ವಾತಾವರಣ ನಿರ್ಮಾಣವಾಗಿದೆ.

GAJA cyclone: schools to remail shut in these TN districts on November 19

ಇದರಿಂದಾಗಿ ರಾಜ್ಯದ ಉತ್ತರ ಒಳನಾಡು ಸೇರಿದಂತೆ ಪಶ್ಚಿಮ ಭಾಗದಲ್ಲಿ ಗಾಳಿಮಳೆಯಾಗಲಿದೆ. ಚಂಡಮಾರುತದಿಂದಾಗಿ ಇನ್ನೂ ಎರಡು ದಿನ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸೂಚನೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+