ಇಪಿಎಸ್- ಒಪಿಎಸ್ ಬಣಕ್ಕೆ ಒಲಿದ ಎರಡು ಹಸಿರೆಲೆ ಚಿನ್ಹೆ

Posted By:
Subscribe to Oneindia Kannada

ಚೆನ್ನೈ, ನವೆಂಬರ್ 23: ಎರಡು ಹಸಿರು ಎಲೆಗಳ ಚಿನ್ಹೆ ಯಾರಿಗೆ ಸೇರಲಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.

ಎಐಎಡಿಎಂಕೆ ಚಿನ್ಹೆಗಾಗಿ ಲಂಚ: ಯಾರು ಈ ಚಾಲಾಕಿ ಮಧ್ಯವರ್ತಿ?

ತಮಿಳುನಾಡಿನ ಮುಖ್ಯಮಂತ್ರಿ ಇ ಪಳನಿಸ್ವಾಮಿ ಹಾಗೂ ಡಿಸಿಎಂ ಓ ಪನ್ನೀರ್ ಸೆಲ್ವಂ ಬಣಕ್ಕೆ ಅಖಿಲ ಭಾರತ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ)ನ ಅಧಿಕೃತ ಚುನಾವಣಾ ಚಿನ್ಹೆ ಲಭಿಸಿದೆ. ಈ ಮೂಲಕ ವಿಕೆ ಶಶಿಕಲಾ ಹಾಗೂ ಸಂಗಡಿಗರಿಗೆ ಭಾರಿ ಮುಖಭಂಗವಾಗಿದೆ.

EPS-OPS faction wins two leaves symbol, setback to Sasikala camp

ಮುಂಬರುವ ಆರ್ ಕೆ ನಗರ ವಿಧಾನಸಭೆ ಚುನಾವಣೆಯಲ್ಲಿ ಇದು ಯಾವ ರೀತಿ ಪರಿಣಾಮ ಬೀರುವುದೋ ಕಾದು ನೋಡಬೇಕಿದೆ.ಎರಡು ಹಸಿರು ಎಲೆಗಳ ಚಿನ್ಹೆ ದೊರೆಕಿರುವುದರಿಂದ ಇಪಿಎಸ್ ಹಾಗೂ ಒಪಿಎಸ್ ಬಣ ಈಗ ಅಧಿಕೃತವಾದ ಎಐಎಡಿಎಂಕೆ ಎನಿಸಿಕೊಂಡಿದೆ.

'ಕೇಂದ್ರ ಚುನಾವಣಾ ಆಯೋಗದಿಂದ ಈ ಕುರಿತಂತೆ ಮೌಖಿಕ ಆದೇಶ ಸಿಕ್ಕಿದೆ. ಅಧಿಕೃತ ಪ್ರಕಟಣೆಗಾಗಿ ಕಾದಿದ್ದೇವೆ' ಎಂದು ಎಐಎಡಿಎಂಕೆ ಸಂಸದ ವಿ ಮೈತ್ರಿಯನ್ ಅವರು ಎಎನ್ಐಗೆ ತಿಳಿಸಿದ್ದಾರೆ.

ಎರಡೆಲೆ ಚಿನ್ಹೆಗಾಗಿ ಶಶಿಕಲಾ ಹಾಗೂ ಪನ್ನೀರ್ ಸೆಲ್ವಂ ಬಣದಿಂದ ಕಿತ್ತಾಟ ಆರಂಭವಾದ ಬೆನ್ನಲ್ಲೇ ಚಿನ್ಹೆಯನ್ನು ಬಳಸದಂತೆ ಚುನಾವಣಾ ಆಯೋಗ ತಾಕೀತು ಮಾಡಿತ್ತು. ಕಳೆದ ಏಳೆಂಟು ತಿಂಗಳಿನಿಂದ ಹತ್ತು ಬಾರಿ ವಾದ-ವಿವಾದ ಅಭಿಪ್ರಾಯ, ಮಾಹಿತಿ ಸಂಗ್ರಹಣೆ ಎಲ್ಲವೂ ಮುಗಿದ ಬಳಿಕ ಚುನಾವಣಾ ಆಯೋಗ ತನ್ನ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಿದೆ.

ಒಪಿಎಸ್ ಹಾಗೂ ಇಪಿಎಸ್ ಬಣ ವಿಲೀನವಾದ ಬಳಿಕ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ವಿಕೆ ಶಶಿಕಲಾ ಹಾಗೂ ದಿನಕರನ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a major setback to jailed All India Dravida Munnetra Kazhagam (AIADMK) leader VK Sasikala, the faction of Chief Minister E Palaniswami and his deputy O Panneerselvam has won the two leaves symbol which had been frozen by the Election Commission eight months ago.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ