ಚೆನ್ನೈನಲ್ಲಿ ಹನಿ ನೀರಿಗೂ ತತ್ವಾರ, ಮುಂದುವರೆದ ಹಾಹಾಕಾರ
ಚೆನ್ನೈ, ಜೂನ್ 20: ಚೆನ್ನೈನಲ್ಲಿ ಹನಿ ನೀರಿಗೂ ಜನರು ಕಷ್ಟ ಪಡುವ ಪರಿಸ್ಥಿತಿ ಎದುರಾಗಿದೆ. ಇದರ ಮಧ್ಯೆಯೇ ರಾಜಕೀಯ ಕಿತ್ತಾಟವೂ ನಡೆಯುತ್ತಿದೆ.
ಎಐಎಡಿಎಂಕೆ ಸರ್ಕಾರವು ಜನರ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲವಾಗಿದೆ. ಈ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿ ಜೂನ್ 22ರಂದು ತಮಿಳುನಾಡಿನಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಡಿಎಂಕೆ ತಿಳಿಸಿದೆ.
ಚೆನ್ನೈನಲ್ಲಿ ನೀರಿನ ಅಭಾವದ ಹಿನ್ನೆಲೆಯಲ್ಲಿ ಪ್ರಿಕೆಜಿಯಿಂದ ಐದನೇ ತರಗತಿಯವರೆಗೂ ಜೂನ್ 21ರವರೆಗೆ ರಜೆ ಘೋಷಿಸಲಾಗಿದೆ.ಖಾಸಗಿ ವಾಟರ್ ಟ್ಯಾಂಕರ್‌ಗೆ ದುಪ್ಪಟ್ಟು ಹಣ ನೀಡಲಾಗುತ್ತಿದೆ.

ಶಾಲಾ, ಕಾಲೇಜುಗಳಿಗೆ ನೀರು ಪೂರೈಕೆಯನ್ನು ಮಾಡುವುದು ಕೂಡ ಕಷ್ಟವಾಗಿದೆ. ಜೂನ್ 29ರಷ್ಟೊತ್ತಿಗೆ ಮುಂಗಾರು ಇಡೀ ದೇಶವನ್ನೇ ಆವರಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.2015ರಲ್ಲಿ ಚೆನ್ನೈನಲ್ಲಿ ಪ್ರವಾಹ ಬಂದು ಅಲ್ಲಿರುವ ನದಿ, ನಾಳೆಗಳೆಲ್ಲವೂ ಬತ್ತಿ ಹೋಗಿದ್ದವು.
ಇನ್ನು ಎರಡು ಮೂರು ವರ್ಷಗಳು ಸರಿಯಾಗಿ ಮಳೆಯಾದರೆ ಮಾತ್ರ ಸಹಜ ಸ್ಥಿತಿಗೆ ಮರಗಳಲು ಸಾಧ್ಯ.
ಚೆನ್ನೈ ನಗರಕ್ಕೆ ನಿತ್ಯ 800 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ ಆದರೆ 525 ಮಿಲಿಯನ್ ಲೀಟರ್ ನೀರು ಮಾತ್ರ ಸರಬರಾಜಾಗುತ್ತಿದೆ.












Click it and Unblock the Notifications