ಅಮ್ಮ ಕ್ಯಾಂಟೀನ್‌ನಲ್ಲಿ ಪೊಂಗಲ್ ಸವಿದ ಡಿಕೆ ಶಿವಕುಮಾರ್!

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 09 : ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ಬೆಳಗ್ಗೆ ಅಮ್ಮ ಕ್ಯಾಂಟೀನ್‌ನಲ್ಲಿ ಪೊಂಗಲ್ ಸವಿದರು. ಪೊಂಗಲ್ ಸವಿದ ಚಿತ್ರವನ್ನು ಅವರು ಫೇಸ್‌ ಬುಕ್‌ನಲ್ಲಿ ಹಾಕಿದ್ದು, ಪೊಂಗಲ್ ರುಚಿಯಾಗಿತ್ತು ಎಂದು ಬರೆದಿದ್ದಾರೆ.

DK Shiva Kumar eats Pongal in Amma canteen

ಮಂಗಳವಾರ ತಮಿಳುನಾಡಿನ ಶ್ರೀಪೆರಂಬದೂರ್‌ಗೆ ಸಚಿವರು ಹೊರಟಿದ್ದರು. ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ 'ಜ್ಯೋತಿ ಯಾತ್ರೆ' ಉದ್ಘಾಟನೆ ಕಾರ್ಯಕ್ರಮಕ್ಕೆ ಅವರು ತೆರಳುತ್ತಿದ್ದರು ಈ ಸಮಯದಲ್ಲಿ ಅವರು ಅಮ್ಮ ಕ್ಯಾಂಟೀನ್‌ನಲ್ಲಿ ಉಪಹಾರ ಸೇವಿಸಿದ್ದಾರೆ.[5 ರೂ.ಗೆ ಐದು ಇಡ್ಲಿ, ಉಪ್ಪಿಟ್ಟು, ಚಿತ್ರಾನ್ನ!]

DK Shiva Kumar eats Pongal in Amma canteen

'ಇಂದು ಬೆಳಗ್ಗೆ ಪೊರೂರ್‌ನ ಮೌಂಟ್ ರಸ್ತೆಯಲ್ಲಿರುವ ತಮಿಳುನಾಡು ಸರ್ಕಾರದ ಅಮ್ಮ ಕ್ಯಾಂಟೀನ್‌ನಲ್ಲಿ 5 ರೂ. ಕೊಟ್ಟು ಪೊಂಗಲ್ ಸವಿದೆ. ರುಚಿ ಚೆನ್ನಾಗಿತ್ತು' ಎಂದು ಅವರು ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.['ಅಮ್ಮಾ ಇಡ್ಲಿ' ಮೇಲೆ ಸಿ.ಎಂ.ಇಬ್ರಾಹಿಂ ಕಣ್ಣು]

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಜಾರಿಗೆ ತಂದಿರುವ ಅಮ್ಮ ಕ್ಯಾಂಟೀನ್ ಯೋಜನೆ ಬಹಳಷ್ಟು ಪ್ರಸಿದ್ಧಿ ಪಡೆದಿದೆ. ಕಡಿಮೆ ದರದಲ್ಲಿ ರುಚಿಕರವಾದ ಆಹಾರ ಒದಗಿಸುವುದು ಅಮ್ಮ ಕ್ಯಾಂಟೀನ್ ವಿಶೇಷತೆ. [ಡಿಕೆಶಿ ಫೇಸ್ ಬುಕ್ ಪುಟ]

ಡಿ.ಕೆ.ಶಿವಕುಮಾರ್ ಅವರು ಅಮ್ಮ ಕ್ಯಾಂಟೀನ್ ಪೊಂಗಲ್ ಸವಿದು ಗುಡ್ ಎಂದಿದ್ದಾರೆ. ಕರ್ನಾಟಕದಲ್ಲಿಯೂ ಈ ಮಾದರಿಯ ಕ್ಯಾಂಟೀನ್ ಸ್ಥಾಪನೆಯಾಗುತ್ತದೆಯೇ ಕಾದು ನೋಡೋಣ.

ಪೊಂಗಲ್ ಮಾಡುವುದು ಹೇಗೆ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka energy minister D.K. Shivakumar had a breakfast pongal for just Rs 5 at amma canteen near Porur on Tuesday morning on his way to Sriperumbudur.
Please Wait while comments are loading...