ಶಶಿಕಲಾ ರಾಜಕೀಯ ಪ್ರವೇಶ: ಅಮ್ಮನ ನಿಲುವು ಏನಿತ್ತು?

By: ಅನುಷಾ ರವಿ
Subscribe to Oneindia Kannada

ಚೆನ್ನೈ, ಡಿಸೆಂಬರ್ 27: ಶಶಿಕಲಾ ಅವರನ್ನು ನಾಯಕಿಯಂತೆ ಬಿಂಬಿಸುವುದಕ್ಕೆ ಏನೆಲ್ಲ ಸಾಧ್ಯವೋ ಎಲ್ಲವನ್ನು ಎಐಎಡಿಎಂಕೆ ಮಾಡುತ್ತಿದೆ. ವರ್ಷಗಟ್ಟಲೆ ಜಯಲಲಿತಾ ನೆರಳಿನಂತಿದ್ದ ಶಶಿಕಲಾ ಅವರಿ ದಿಢೀರ್ ಆಗಿ ಆ ಪಕ್ಷಕ್ಕಿರುವ ಏಕೈಕ ಭರವಸೆಯಂತಾಗಿದ್ದಾರೆ. ಹಲವು ವರ್ಷಗಳಿಂದ ಜಯಲಲಿತಾ ಮತ್ತ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದರೂ ಶಶಿಕಲಾ ಯಾವುದೇ ಚುನಾವಣೆಗೆ ಸ್ಪರ್ಧಿಸಿಲ್ಲ.

ಶಶಿಕಲಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಸಕ್ರಿಯ ರಾಜಕಾರಣಕ್ಕೆ ಬರುವುದು ಜಯಲಲಿತಾ ಅವರಿಗೆ ಇಷ್ಟವಿರಲಿಲ್ಲವಾ? ಆ ಕಾರಣಕ್ಕೆ ತಾವು ಬದುಕಿರುವ ತನಕ ಆಕೆಗೆ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಅವಕಾಶ ನೀಡಲಿಲ್ಲವಾ ಎಂಬ ಪ್ರಶ್ನೆ ಮೂಡುತ್ತದೆ. ಜಯಲಲಿತಾ ಜೊತೆಗೆ ಅತಿ ಹೆಚ್ಚು ಸಮಯ ಕಳೆದ ಶಶಿಕಲಾ ಅವರನ್ನು ಆ ಪಕ್ಷವು ಸಹಜ ಆಯ್ಕೆ ಎಂಬಂತೆ ಪರಿಗಣಿಸಿದಂತಿದೆ.

ಆ ಕಾರಣಕ್ಕೆ ಆ ಪಕ್ಷದ ಐಟಿ ವಿಭಾಗವು ಜಯಲಲಿತಾ ಸಂದರ್ಶನವೊಂದರಲ್ಲಿ ಶಶಿಕಲಾ ಬಗ್ಗೆ ಹೇಳಿರುವುದನ್ನೇ ಪ್ರದರ್ಶಿಸುತ್ತಾ ಪ್ರಚಾರ ನಡೆಸುತ್ತಿದೆ. ಅದರಲ್ಲಿ ಜಯಲಲಿತಾ, ಆಕೆ ನನ್ನ ಸ್ನೇಹಿತೆ, ಸಹೋದರಿ ಹಾಗೂ ತಾಯಿಯಂತೆ ಹೇಳಿದ್ದಾರೆ. ಆಕೆ ನನ್ನ ಮನೆಯ ಎಲ್ಲ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ ಎಂದು ಕೂಡ ಹೇಳಿದ್ದಾರೆ ವಿನಾ ರಾಜಕೀಯದ ಬಗ್ಗೆ ಏನನ್ನೂ ಹೇಳಿಲ್ಲ.[ತಮಿಳುನಾಡಿನಲ್ಲಿ ಚಿನ್ನಮ್ಮ ಶಶಿಕಲಾರನ್ನು ಭೇಟಿ ಮಾಡಿದ ನಟ ಅಜಿತ್]

Sasikala-jaya

ಸಾರ್ವಜನಿಕವಾಗಿ ಜಯಲಲಿತಾ ಜೊತೆಗೆ ಶಶಿಕಲಾ ಕಾಣಿಸಿಕೊಳ್ಳುತ್ತಿದ್ದರು ಎಂಬುದು ಬಿಟ್ಟರೆ ಪಕ್ಷದಲ್ಲಾಗಲೀ, ಸರಕಾರದಲ್ಲಾಗಲೀ ಆಕೆಗೆಂದು ಯಾವುದೇ ಸ್ಥಾನಮಾನ ನೀಡಿರಲಿಲ್ಲ. ಆದ್ದರಿಂದಲೇ ಈಗ ಕೂಡ ಪಕ್ಷದಿಂದಲೇ ಹೊಸ ಜವಾಬ್ದಾರಿ ವಹಿಸಿಕೊಳ್ಳುವಂತೆ ಒತ್ತಾಯ ಬಂದರೂ ಶಶಿಕಲಾ ಮೌನವಾಗಿ ಉಳಿದಿದ್ದಾರೆ. [ಚಿನ್ನಮ್ಮ ತಮಿಳ್ನಾಡಿನ ಕಿಂಗ್ ಮೇಕರ್ ಆಗಿದ್ದು ಹೇಗೆ?]

ಹಾಗಿದ್ದರೆ ಸಕ್ರಿಯ ರಾಜಕಾರಣದಲ್ಲಿ ಎಂದೂ ಕಾಣಿಸಿಕೊಳ್ಳದ ವ್ಯಕ್ತಿಯನ್ನು ಏಕೆ ಪಕ್ಷದ ನೇತೃತ್ವ ವಹಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಆದರೆ ಜಯಲಲಿತಾ ಅವರ ಪಕ್ಷದೊಳಗಿನ ನಿರ್ಧಾರ, ಸರಕಾರದಲ್ಲಿನ ನಿರ್ಧಾರ, ಅಭ್ಯರ್ಥಿಗಳ ಆಯ್ಕೆ ಎಲ್ಲದರ ಹಿಂದೆ ಇರುತ್ತಿದ್ದದ್ದು ಇದೇ ಶಶಿಕಲಾ ಅವರ ಬುದ್ಧಿವಂತಿಕೆ.[ನನ್ನ ಜೀವಕ್ಕೆ ತೊಂದರೆ ಇದೆ: ತ.ನಾಡು ಮಾಜಿ ಸಿಎಸ್ ರಾವ್]

ಸಂಕಷ್ಟದ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದರಲ್ಲಿ ಆಕೆ ಪಳಗಿಹೋಗಿದ್ದಾರೆ ಎಂಬುದು ರಾಜಕೀಯ ವಲಯದೊಳಗಿನ ಹಲವರ ನಂಬಿಕೆ. ಶಶಿಕಲಾ ಬಗ್ಗೆ ಕೆಲವರಿಗೆ ಅಸಮಾಧಾನ ಇರುವುದು ಹೌದು. ಮತ್ತು ಅವರು ಸ್ವಲ್ಪ ಮಟ್ಟಿಗೆ ಧ್ವನಿ ಮಾಡುತ್ತಿರುವುದು ಹೌದು. ಆದರೆ ಅದು ಕೇಳಿಸದಂತೆ ಮಾಡುವುಷ್ಟು ದೊಡ್ಡದಾಗಿ ಆಕೆಯ ಆಯ್ಕೆಯನ್ನು ಬೆಂಬಲಿಸುತ್ತಿರುವವರ ಕೂಗೆದ್ದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
AIADMK is doing everything in its capacity to make Sasikala its leader. Sasikala Natarajan, the woman who has been Jayalalithaa's shadow for years is suddenly being portrayed as the only hope. She ever contested an election. Did Jayalalithaa intend for Sasikala to ever be part of active politics?
Please Wait while comments are loading...