ಇಂದಿನಿಂದ ಚೆನ್ನೈನಲ್ಲಿ Defence Expo 2018: ಭಾರತದ ಶಕ್ತಿಪ್ರದರ್ಶನ

Posted By: ದೀಪಿಕಾ
Subscribe to Oneindia Kannada

ಚೆನ್ನೈ, ಏಪ್ರಿಲ್ 11: ದಕ್ಷಿಣ ಚೆನ್ನೈನ ತಿರುವಿದಂತೈ ನಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ಡಿಫೆನ್ಸ್ ಎಕ್ಸ್ ಪೋ- 2018 ಕಾರ್ಯಕ್ರಮವು ವಿಶ್ವಕ್ಕೆ ಭಾರತದ ಭದ್ರತಾ ಕ್ಷೇತ್ರದ ಸಾಮರ್ಥ್ಯವನ್ನು ತೋರಿಸಿಕೊಡಲಿದೆ.

ಅಗ್ನಿ - 5 ಖಂಡಾಂತರ ಕ್ಷಿಪಣಿಯ ಐದನೇ ಪರೀಕ್ಷೆಯೂ ಯಶಸ್ವಿ

"India: The Emerging Defence Manufacturing Hub" ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುತ್ತಿರುವ ಈ ಪ್ರದರ್ಶನ ವಿಶ್ವಕ್ಕೆ ಭಾರತದ ಭದ್ರತಾ ಕ್ಷೇತ್ರದ ಬಲವನ್ನು ಪ್ರದರ್ಶಿಸಲು ವೇದಿಕೆಯಾಗಲಿದೆ.

ಸುಖೋಯ್‌ ಯುದ್ಧ ವಿಮಾನದಿಂದ ಬ್ರಹ್ಮೋಸ್‌ ಕ್ಷಿ‍‍ಪಣಿ ಯಶಸ್ವಿ ಉಡಾವಣೆ

ಅಂತಾರಾಷ್ಟ್ರೀಯ ಭೂ, ನೌಕಾ ಮತ್ತು ಆಂತರಿಕ ನೆಲೆಯ ಭದ್ರತೆ ಹೇಗಿದೆ ಎಂಬುದನ್ನು ಈ ಪ್ರದರ್ಶನ ತೋರಿಸಿಕೊಡಲಿದೆ. ಈ ಪ್ರದರ್ಶನದಲ್ಲಿ 47 ಕ್ಕೂ ಹೆಚ್ಚು ದೇಶಗಳು ಭಾಗವಹಿಸಲಿವೆ. ಅತೀ ಹೆಚ್ಚು ಭಾರತೀಯ ಫರ್ಮ್ ಗಳು ಈ ಪ್ರದರ್ಶನದಲ್ಲಿ ಭಾಗವಹಿಸಿರುವುದು ವಿಶೇಷ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಟಿಕೆಟ್ ರಾಜಕೀಯ

ಏ.12 ರಂದು ನಡೆಯಲಿರುವ ಎರಡನೇ ದಿನದ ಪ್ರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಹ ಭಾಗವಹಿಸುತ್ತಿರುವುದು ವಿಶೇಷ.

ಕಾರ್ಯಕ್ರಮದ ವಿವರ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಭದ್ರತಾ ಕ್ಷೇತ್ರದ ಶಕ್ತಿ ಪ್ರದರ್ಶನಕ್ಕೆ ವೇದಿಕೆಯನ್ನೊದಗಿಸುವ Defence Expo 2018 ಚೆನ್ನೈನ ತಿರುವಿದಂತೈನಲ್ಲಿ ನಡೆಯಲಿದೆ. ಏಪ್ರಿಲ್ 11 ರಿಂದ 14 ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ. ಕಾರ್ಯಕ್ರಮಕ್ಕೆ ಆಗಮಿಸುವವರು ಸರ್ಕಾರದಿಂದ ನೀಡಲಾದ ಯಾವುದೇ ಫೋಟೋ ಐಡಿಯನ್ನು ತಮ್ಮೊಂದಿಗೆ ಹೊಂದಿರುವುದು ಕಡ್ಡಾಯ. ಪಾಸ್ ಪೋರ್ಟ್, ಆಧಾರ್ ಕಾರ್ಡ್, ಸರ್ಕಾರಿ ಗುರುತಿನ ಚೀಟಿ ಇತ್ಯಾದಿ. ಪ್ರವೇಶ ಉಚಿತವಾಗಿರುತ್ತದೆ.

ನಾನಾ ದೇಶಗಳೂ ಭಾಗಿ

ಕಾರ್ಯಕ್ರಮದಲ್ಲಿ ಅಮೆರಿಕ, ಇಂಗ್ಲೆಂಡ್, ರಷ್ಯಾ, ಅಫ್ಘಾನಿಸ್ತಾನ, ಸ್ವೀಡನ್, ಫಿನ್ ಲ್ಯಾಂಡ್, ಇಟಲಿ, ಮಡಗಾಸ್ಕರ್, ಮಯನ್ಮಾರ್, ನೇಪಾಳ, ಪೋರ್ಚುಗಲ್, ವಿಯೆಟ್ನಾಂ ಸೇರಿದಂತೆ 47 ಕ್ಕೂ ಹೆಚ್ಚು ದೇಶಗಳು ಭಾಗವಹಿಸಲಿವೆ. ಒಟ್ಟು 670 ಕ್ಕೂ ಹೆಚ್ಚು ಡಿಫೆನ್ಸ್ ಫರ್ಮ್ ಗಳು ಈ ಪ್ರದರ್ಶನದಲ್ಲಿ ಭಾಗಿಯಾಗಲಿವೆ. ಒಟ್ಟು 2,90,000 ಚ.ಕಿ.ಮೀ.ವ್ಯಾಪ್ತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಇದುವರೆಗೂ ನಡೆದ ಎಲ್ಲ ಪ್ರದರ್ಶನಗಳಲ್ಲೇ ಇದು ಅತ್ಯಂತ ದೊಡ್ಡದು ಎಂಬುದು ಹೆಮ್ಮೆಯ ವಿಚಾರ.

ಯಾವೆಲ್ಲ ಕಂಪನಿಗಳು ಭಾಗಿ?

ಈ ಪ್ರದರ್ಶನದಲ್ಲಿ ಭಾರತದ ಟಾಟಾ, ಕಲ್ಯಾಣಿ, ಭಾರತ್ ಫೊರ್ಜ್, ಮಹಿಂದ್ರಾ ಎಂಕೆಯು, ಡಿಆರ್ ಡಿಒ, ಹಿಂದುಸ್ತಾನ್ ಎರೊನಾಟಿಕ್ಸ್, ಭಾರತ್ ಇಲೆಕ್ಟ್ರಾನಿಕ್ಸ್, ಭಾರ್ತ್ ಡೈನಾಮಿಕ್ಸ್, ಭಾರತ್ ಅರ್ಥ್ ಮೂವರ್ಸ್(ಬಿಇಎಂಎಲ್), ಮಜ್ಗಾನ್ ಡಾಕ್, ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಮಗತ್ತು ಇಂಜಿನಿಯರ್ಸ್, ಗೋವಾ ಶಿಪ್ಯಾರ್ಡ್, ಹಿಂದುಸ್ತಾನ್ ಶಿಪ್ಯಾರ್ಡ್, ಮಿಶ್ರಾ ಧಾಟು ನಿಗಮ್ ಲಿ., ಆರ್ಡನನ್ಸ್ ಫ್ಯಾಕ್ಟರೀಸ್ ಮುಂತಾದ ಭಾರತೀಯ ಕಂಪೆನಿಗಳು ಈ ಪ್ರದರ್ಶನದಲ್ಲಿ ಭಾಗವಹಿಸಲಿವೆ. ಜೊತೆಗೆ ಅಂತಾರಾಷ್ಟ್ರೀಯ ಸಂಸ್ಥೆಗಳಾದ ಬೋಯಿಂಗ್, ಸಾಬ್, ಏರ್ ಬಸ್, ರಫೆಲ್, ಯುನೈಟೆಡ್ ಶಿಪ್ ಬಿಲ್ಡಿಂಗ್ ಮುಂತಾದ ವಿದೇಶಿ ಕಂಪೆನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿವೆ.

ಸ್ವದೇಶೀ ತಂತ್ರಜ್ಞಾನಕ್ಕೆ ಪ್ರೋತ್ಸಾಹ

ಭಾರತದಲ್ಲೇ ಅಭಿವೃದ್ಧಿಪಡಿಸಲಾದ ಸ್ವದೇಶಿ ಭೂ, ವಾಯು ಮತ್ತು ನೌಕಾಸೇನೆಯ ಉಪಕರಣಗಳನ್ನು ಪ್ರದರ್ಶಿಸಲಾಗುತ್ತದೆ. ತೇಜಸ್ ಯುದ್ಧ ವಿಮಾನದ ಜೊತೆಗೆ ಅದರ ಸುಧಾರಿತ ತಂತ್ರಜ್ಞಾನದ ಬಗ್ಗೆಯೂ ತೋರಿಸಿಕೊಡಲಾಗುತ್ತದೆ. ಭಾರತ ಭದ್ರತಾ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿರುವುದರಿಂದ ಯುದ್ಧೋಪಕರಣ ಸೇರಿದಂತೆ ಇನ್ನಿತರ ಭದ್ರತಾ ಪರಿಕರಗಳಿಗಾಗಿ ವಿದೇಶಗಳ ಮೇಲೆ ಅವಲಂಬಿತವಾಗಿದೆ. ಆದರೆ ಈ ಅವಲಂಬನೆಯನ್ನು ಕಡಿಮೆ ಮಾಡುವ ಸಲುವಾಗಿ ಸ್ವದೇಶಿ ಯಂತ್ರೋಪಕರಣಗಳ ತಯಾರಿಕೆಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದ್ದು, ಈ ಪ್ರದರ್ಶನ ಅದಕ್ಕೆ ವೇದಿಕೆಯಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Defence Expo India 2018 - an international land, naval and internal homeland security systems exhibition - will be held from April 11 to April 14 at Thiruvidanthai in south Chennai. The objective of the expo is to showcase the country's defence manufacturing capabilities.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ