• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಯಲಲಿತಾರ ವೇದ ನಿಲಯಂಗಾಗಿ ಮತ್ತೆ ಕಾನೂನು ಸಮರ

|

ಚೆನ್ನೈ, ಆ.2: ತಮಿಳರ ಪಾಲಿನ 'ಅಮ್ಮ' ಜಯಲಲಿತಾ ಅವರ ಸೋದರ ಸೊಸೆ ದೀಪಾ ಜಯಕುಮಾರ್ ಹಾಗೂ ದೀಪಕ್ ಕುಮಾರ್ ಅವರ ಪಾಲಿಗೆ ಜಯಲಲಿತಾ ಅವರು ಸುಮಾರು 900 ಕೋಟಿ ರು ಮೌಲ್ಯದ ಆಸ್ತಿ ಸೇರತಕ್ಕದ್ದು, ಇವರಿಬ್ಬರನ್ನು ಜಯಲಲಿತಾರ class II legal heirs ಎಂದು ಮದ್ರಾಸ್ ಹೈಕೋರ್ಟ್ ಆದೇಶಿಸಿದ್ದು ಗೊತ್ತಿರಬಹುದು.

ಆಡಳಿತಾರೂಢ ಎಐಎಡಿಎಂಕೆ ಸರ್ಕಾರವು ಜಯಾ ಅವರಿಗೆ ಸೇರಿದ ''ವೇದ ನಿಲಯಂ'' ವಶ ಪಡಿಸಿಕೊಂಡು ಮುಖ್ಯಮಂತ್ರಿಗಳ ಅಧಿಕೃತ ಕಚೇರಿಯಂತೆ ಪರಿವರ್ತಿಸಲು ಕೋರ್ಟ್ ಅನುಮತಿ ನೀಡಿತ್ತು. ಆದರೆ, ಇದನ್ನು ಪ್ರಶ್ನಿಸಿ ದೀಪಾ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಜಯಲಲಿತಾ ವಾಸವಾಗಿದ್ದ ಪೋಯಸ್ ಗಾರ್ಡನ್ ನಿವಾಸವನ್ನು ಸ್ಮಾರಕವಾಗಿ ಮಾರ್ಪಾಡಿಸಲು ಎಐಎಡಿಎಂಕೆ ಯೋಜನೆ ಹಾಕಿಕೊಂಡಿದೆ.

ಜಯಾಗೆ ಸೇರಿದ ಸೀರೆ, ಆಭರಣ, ಸ್ಲಿಪ್ಪರ್ ಕಥೆ ಏನು?

ವೇದಾ ನಿಲಯಂ ನಿವಾಸದ ಒಂದು ಭಾಗವನ್ನು ಸ್ಮಾರಕವಾಗಿ ಬಳಸಬಹುದು, ಮಿಕ್ಕ ಆಸ್ತಿ ಮೌಲ್ಯ 913, 42,68,179 ರು ಅರ್ಜಿದಾರರಾದ ದೀಪಕ್ ಹಾಗೂ ದೀಪಾ ಅವರಿಗೆ ಸಲ್ಲತಕ್ಕದ್ದು ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಲಾಗಿದೆ.

ದೀಪಾ ವಿರುದ್ಧ ಎಐಎಡಿಎಂಕೆ ನಾಯಕರು

ದೀಪಾ ವಿರುದ್ಧ ಎಐಎಡಿಎಂಕೆ ನಾಯಕರು

ಡಿಸೆಂಬರ್ 05, 2016ರಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಅಪೊಲೋ ಆಸ್ಪತ್ರೆಯಲ್ಲಿ ನಿಧನರಾದರು. ರಾಧಾಕೃಷ್ಣನಗರ(ಆರ್ ಕೆ ನಗರ) ವಿಧಾನಸಭಾ ಕ್ಷೇತ್ರವನ್ನು ಜಯಲಲಿತಾ ಅವರು ಪ್ರತಿನಿಧಿಸುತ್ತಿದ್ದರು. ಜಯಾ ಅವರ ಆಸ್ತಿ ಹಕ್ಕು ಪಡೆಯಲು ದೀಪಾ, ದೀಪಕ್ ವಿರುದ್ಧವಾಗಿ ಎಐಎಡಿಎಂಕೆಯ ಕೆ ಪುಗಳೇಂದಿ ಹಾಗೂ ಪಿ ಜಾನಕಿರಾಮನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ಭೂ ವಶ ಪಡಿಸಿಕೊಳ್ಳುವ ಕಾಯ್ದೆ

ಭೂ ವಶ ಪಡಿಸಿಕೊಳ್ಳುವ ಕಾಯ್ದೆ

ಖಾಸಗಿ ಅಧೀನದಲ್ಲಿರುವ ಭೂ ಪ್ರದೇಶವನ್ನು ವಶ ಪಡಿಸಿಕೊಳ್ಳುವ ಕಾಯ್ದೆ 2013ರಲ್ಲಿ ತಿದ್ದುಪಡಿಯಾಗಿರುವಂತೆ ರಾಜ್ಯ ಸರ್ಕಾರವು ಪ್ರಸಕ್ತ ಸ್ವತ್ತನ್ನು ವಶಪಡಿಸಿಕೊಂಡು ಸ್ಮಾರಕ ರಚಿಸಲು ಬರುವುದಿಲ್ಲ ಎಂದು ದೀಪಾ ಲಾ ಪಾಯಿಂಟ್ ಹಾಕಿದ್ದಾರೆ. ಇದಲ್ಲದೆ, ಕೋರ್ಟ್ ಜುಲೈ 22ರ ಆದೇಶ ಕೂಡಾ ಮಾನ್ಯವಾಗುವುದಿಲ್ಲ, ಸಂಬಂಧಪಟ್ಟ ಜಿಲ್ಲಾಧಿಕಾರಿ ಆದೇಶ ನೀಡಬಹುದು ಎಂದು ದೀಪಾ ಹೇಳಿದ್ದಾರೆ.

ಜೆ ಜಯಲಲಿತಾಗೆ ಸೇರಿದ 900 ಕೋಟಿ ಆಸ್ತಿ ದೀಪಾ, ದೀಪಕ್ ಪಾಲು

ಚರಾಸ್ತಿ ವಶಪಡಿಸಿಕೊಳ್ಳಲು ಹಕ್ಕಿಲ್ಲ

ಚರಾಸ್ತಿ ವಶಪಡಿಸಿಕೊಳ್ಳಲು ಹಕ್ಕಿಲ್ಲ

ಈ ಕಾಯ್ದೆ ಪ್ರಕಾರ, ಚಿನ್ನ, ಬೆಳ್ಳಿ, ಆಭರಣ, ಬೆಲೆ ಬಾಳುವ ವಸ್ತು, ವಾಹನಾದಿಗಳನ್ನು ವಶಪಡಿಸಿಕೊಳ್ಳಲು ಸರ್ಕಾರಕ್ಕೆ ಹಕ್ಕಿಲ್ಲ. ಹೀಗಾಗಿ ಕೋರ್ಟ್ ಈ ಬಗ್ಗೆ ಗಮನ ಹರಿಸಿ, ಸಂಬಂಧಪಟ್ಟ ಆಡಳಿತಾಧಿಕಾರಿಗಳಿಗೆ ವೇದ ನಿಲಯಂ ವಶಪಡಿಸಿಕೊಳ್ಳುವ ಪ್ರಕ್ರಿಯೆಗೆ ತಡೆ ನೀಡುವಂತೆ ಕೋರುತ್ತೇನೆ ಎಂದು ದೀಪಾ ಮನವಿ ಮಾಡಿದ್ದಾರೆ.

ಚುನಾವಣೆಗಾಗಿ ಸ್ಮಾರಕ ನಿರ್ಮಾಣ

ಚುನಾವಣೆಗಾಗಿ ಸ್ಮಾರಕ ನಿರ್ಮಾಣ

ಚುನಾವಣೆಗಾಗಿ ಸ್ಮಾರಕ ನಿರ್ಮಾಣ ಮಾಡಲು ಎಐಎಡಿಎಂಕೆ ಹೊರಟಿದೆ. ರಾಜಕೀಯ ಉದ್ದೇಶಕ್ಕಾಗಿ ಮಾತ್ರ ಜಯಲಲಿತಾರನ್ನು ಬಳಸಿಕೊಳ್ಳಲು ಯತ್ನಿಸಿದ್ದು, ಅವರಂಥ ದಿಗ್ಗಜರನ್ನು ಸರಿಯಾಗಿ ಗೌರವಿಸಿ, ಸ್ಮಾರಕ ರಚಿಸುವ ಗೋಜಿಗೆ ಸರ್ಕಾರ ಹೋಗಿಲ್ಲ ಎಂದಿದ್ದಾರೆ. ಇದಲ್ಲದೆ, ಮನೆಯಲ್ಲಿರುವ ಚರಾಸ್ತಿಗಳ ಪಟ್ಟಿ ಬಹಿರಂಗಪಡಿಸಿದ್ದು, ಕಳ್ಳಕಾಕರ ಭಯವೂ ಕಾಡುತ್ತಿದೆ ಎಂದಿದ್ದಾರೆ.

ರಾಜಕಾರಣಿಗಳ ಹೆಸರಿನ ದೇಗುಲ, ಪ್ರತಿಮೆಗಳು..ಇತ್ಯಾದಿ

English summary
Former Tamil Nadu Chief Minister J Jayalalithaa's legal heir J Deepa has moved the Madras High Court, challenging the proposed acquisition of Veda Nilayam her late aunts Poes Garden residence by the Tamil Nadu government to convert it into a memorial.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more