• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿವಾರ್ ಚಂಡಮಾರುತ; ಬೆಂಗಳೂರು-ಚೆನ್ನೈ ರೈಲು ಮಾರ್ಗ ಬದಲು

|

ಚೆನ್ನೈ, ನವೆಂಬರ್ 25 : ನಿವಾರ್ ಚಂಡಮಾರುತದ ಕಾರಣದಿಂದಾಗಿ ಚೆನ್ನೈ ಸೇರಿದಂತೆ ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಭಾರತೀಯ ರೈಲ್ವೆ ಹಲವು ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಿದೆ.

ನೈಋತ್ಯ ರೈಲ್ವೆ ಚೆನ್ನೈ ಮೂಲಕ ಬೆಂಗಳೂರಿಗೆ ಆಗಮಿಸುವ ಹಲವು ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಚೆನ್ನೈ ಸೇರಿದಂತೆ ತಮಿಳುನಾಡಿನ ವಿವಿಧ ಜಿಲ್ಲೆಗಳಿಗೆ ಆಗಮಿಸಬೇಕಿದ್ದ ರೈಲುಗಳ ಮಾರ್ಗ ಬದಲಾವಣೆಯಾಗಿದೆ.

ಮಧ್ಯರಾತ್ರಿ ಅಪ್ಪಳಿಸಲಿದೆ ನಿವಾರ್ ಚಂಡಮಾರುತ: ಸ್ಥಳಾಂತರ ಕಾರ್ಯ ಮುಂದುವರಿಕೆ

ದಾನ್‌ಪುರ್‌ನಿಂದ ಹೊರಡುವ 02296 ರೈಲು ನವೆಂಬರ್ 26ರಂದು ಚೆನ್ನೈಗೆ ಆಗಮಿಸುವುದಿಲ್ಲ. ರೇಣುಗುಂಟ, ಜೋರಾರಪಟ್ಟಿ ಮಾರ್ಗವಾಗಿ ಬೆಂಗಳೂರಿಗೆ ಆಗಮಿಸಲಿದೆ.

ನಿವಾರ್ ಸೈಕ್ಲೋನ್: ಚೆನ್ನೈಗೆ ಇಂಡಿಗೋ ವಿಮಾನ ಸಂಚಾರ ರದ್ದು

ರೈಲು ನಂಬರ್ 02510 ಗೌಹಾತಿ-ಬೆಂಗಳೂರು ಕಂಟೈನ್ಮೆಂಟ್ ವಿಶೇಷ ರೈಲು ನವೆಂಬರ್ 26ರಂದು ಪೆರಂಬೂರು ನಿಲ್ದಾಣಕ್ಕೆ ಹೋಗುವುದಿಲ್ಲ. ರೈಲು ನಂಬರ್ 02577 ದರ್ಬಾಂಗ್-ಮೈಸೂರು ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣಕ್ಕೆ ನವೆಂಬರ್ 26ರಂದು ಆಗಮಿಸುವುದಿಲ್ಲ.

ನಿವಾರ್ ಚಂಡಮಾರುತ: ತಮಿಳುನಾಡಿನಲ್ಲಿ ಮಳೆ ಆರ್ಭಟ ಶುರು

ನವೆಂಬರ್ 26ರಂದು ಬೆಂಗಳೂರಿನಿಂದ ಹೊರಡುವ 02295 ಬೆಂಗಳೂರು-ದಾನ್‌ಪುರ್ ರೈಲು ಚೆನ್ನೈ ನಿಲ್ದಾಣಕ್ಕೆ ಹೋಗದಂತೆ ಮಾರ್ಗ ಬದಲಾವಣೆ ಮಾಡಲಾಗಿದೆ. ಯಶವಂತಪುರದಿಂದ ಹೊರಡುವ ದಾನಾಪುರ್ ವಿಶೇಷ ಎಕ್ಸ್‌ಪ್ರೆಸ್ ಸಹ ಚೆನ್ನೈಗೆ ಹೋಗುವುದಿಲ್ಲ.

ನಿವಾರ್ ಚಂಡಮಾರುತದ ಪರಿಣಾಮ ಚೆನ್ನೈನಲ್ಲಿ ಬುಧವಾರದಿಂದಲೇ ಭಾರಿ ಮಳೆಯಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.

English summary
Indian railways cancelled and diverted train service to Chennai due to heavy rain from cyclone Nivar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X