ಕೊವಿಡ್ 19 ಪೀಡಿತ ಶಾಸಕನ ಆರೋಗ್ಯ ಸ್ಥಿತಿ ಗಂಭೀರ
ಚೆನ್ನೈ, ಜೂನ್ 9: ತಮಿಳುನಾಡಿನ ವಿಪಕ್ಷ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ)ನ ಹಿರಿಯ ಶಾಸಕ ಜೆ ಅನ್ಬಳಗನ್ ಅವರು ಕೊರೋನಾ ಸೋಂಕಿನಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅನ್ಬಳಗನ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಡಾ. ರೆಲಾ ಆಸ್ಪತ್ರೆ ವೈದ್ಯಾಧಿಕಾರಿ ತಿಳಿಸಿದ್ದಾರೆ.
ಡಾ.ರೆಲಾ ಇನ್ಸ್ಟಿಟ್ಯೂಟ್ ಅಂಡ್ ಮೆಡಿಕಲ್ ಸೆಂಟರ್ ನಲ್ಲಿ ದಾಖಲಾಗಿರುವ 61 ವರ್ಷದ ಅನ್ಬಳಗನ್ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದಿತ್ತು. ಆದರೆ, ಸೋಮವಾರದ ಸಂಜೆಯಿಂದ ಆಮ್ಲಜನಕದ ಪ್ರಮಾಣ ಅರ್ಧಕ್ಕೆ ಕುಸಿದಿದೆ. ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡು ಬರುತ್ತಿಲ್ಲ. ಜೊತೆಗೆ ವೈರಸ್ ಸೋಂಕಿನಿಂದ ರಕ್ತದೊತ್ತಡ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲಎಂದು ಡಾ.ರೆಲಾ ಸಂಸ್ಥೆ ಮತ್ತು ವೈದ್ಯಕೀಯ ಕೇಂದ್ರ ತಿಳಿಸಿದೆ.
ಎಂ ಕರುಣಾನಿಧಿ ಆಪ್ತ, ಡಿಎಂಕೆ ಮುಖಂಡ ಅನ್ಬಳಗನ್ ನಿಧನ
ತಮಿಳುನಾಡಿನಲ್ಲಿ ಜೂನ್ 9ರ ಲೆಕ್ಕಾಚಾರದಂತೆ ಒಟ್ಟು 34, 914 ಪ್ರಕರಣಗಳು ದಾಖಲಾಗಿದ್ದು, 18, 325 ಮಂದಿ ಗುಣಮುಖರಾಗಿದ್ದಾರೆ. 307 ಮಂದಿ ಮೃತರಾಗಿದ್ದಾರೆ. 6.2 ಲಕ್ಷಕ್ಕೂ ಅಧಿಕ ಸ್ಯಾಂಪಲ್ ಪರೀಕ್ಷೆ ನಡೆಸಲಾಗಿದೆ. ಒಂದೇ ದಿನದಲ್ಲಿ 1685 ಪ್ರಕರಣಗಳು ದಾಖಲಾಗಿ ಆತಂಕ ಹೆಚ್ಚಿಸಿದೆ. ಒಟ್ಟು 16, 279 ಸಕ್ರಿಯ ಕೇಸ್ ಗಳಿವೆ.

ವೈರಸ್ ಸೋಂಕಿನ ಜೊತೆಗೆ ಕಿಡ್ನಿ ಸಮಸ್ಯೆ
ವೈರಸ್ ಸೋಂಕಿನ ಜೊತೆಗೆ ಕಿಡ್ನಿ ಸಮಸ್ಯೆಯಿಂದ ಕೂಡಾ ಅನ್ಬಳಗನ್ ಬಳಲುತ್ತಿದ್ದಾರೆ. ವಿಷಮ ಪರಿಸ್ಥಿತಿಯಲ್ಲಿದ್ದು, ಸೂಕ್ತ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಆದರೆ, ಇದಕ್ಕೆ ಸೂಕ್ತವಾಗಿ ಸ್ಪಂದನೆ ಕಂಡು ಬಂದಿಲ್ಲ ಎಂದು ಆಸ್ಪತ್ರೆ ಸಿಇೊ ಡಾ. ಇಳಂಕುಮಾರನ್ ಕಾಲಿಯಾಮೂರ್ತಿ ಪ್ರಕಟಣೆ ಹೊರಡಿಸಿದ್ದಾರೆ.

ಹಿರಿಯ ಮುಖಂಡರಾಗಿರುವ ಅನ್ಬಳಗನ್
ಡಿಎಂಕೆ ಹಿರಿಯ ಮುಖಂಡರಾಗಿರುವ ಅನ್ಬಳಗನ್ ಅವರು ಕಳೆದ ಮಂಗಳವಾರದಂದು ತೀವ್ರವಾದ ಉಸಿರಾಟದ ತೊಂದರೆಗೆ ಉಂಟಾಗಿ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಡಾ.ರೆಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಕೊವಿಡ್ 19 ಪರೀಕ್ಷೆ ನಡೆಸಿದಾಗ ಪಾಸಿಟಿವ್ ಎಂದು ಬಂದಿತ್ತು.

ಆಮ್ಲಜನಕ ಥೆರಪಿ ಫಲ ನೀಡಿಲ್ಲ
ಆಮ್ಲಜನಕ ಥೆರಪಿ ಮೂಲಕ ವೆಂಟಿಲೇಟರ್ ಆಧಾರದಿಂದ ಜೂನ್ 3ರಂದು ಉಸಿರಾಟ ನಡೆಸಿದ್ದ ಅನ್ಬಳಗನ್ ಅವರ ಪರಿಸ್ಥಿತಿ ದಿನದಿಂದ ದಿನಕ್ಕೆ ಕೃಶವಾಗುತ್ತಿದೆ ಎಂದು ಸಂಸ್ಥೆ ಚೇರ್ಮನ್ ಡಾ ಮೊಹಮ್ಮದ್ ರೇಲಾ ಕೂಡಾ ಅಭಿಪ್ರಾಯಪಟ್ಟಿದ್ದಾರೆ.

ಡಿಎಂಕೆ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಕಳವಳ
ಡಿಎಂಕೆ ಅಧ್ಯಕ್ಷ ಎಂ.ಕೆ ಸ್ಟಾಲಿನ್, ಆರೋಗ್ಯ ಸಚಿವ ಸಿ ವಿಜಯಭಾಸ್ಕರ್ ಮುಂತಾದ ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ಪರಿಸ್ಥಿತಿ ಬಗ್ಗೆ ವಿಚಾರಿಸಿದ್ದಾರೆ. ಚೇಪಾಕ್-ತ್ರಿಪ್ಲಿಕೇನ್ ಕ್ಷೇತ್ರದ ಶಾಸಕರಾಗಿರುವ ಅನ್ಬಳಗನ್ ಅವರಿಗೆ 15 ವರ್ಷಗಳ ಹಿಂದೆ ಲಿವರ್ ಟ್ರಾನ್ಸ್ ಪ್ಲಾಂಟ್ ಆಗಿತ್ತು.