ಇನ್ನೆರಡು ವಾರಗಳಲ್ಲಿ ಜಯಲಲಿತಾ ಡಿಸ್ಚಾರ್ಜ್: ಎಐಎಡಿಎಂಕೆ

Posted By:
Subscribe to Oneindia Kannada

ಚೆನ್ನೈ, ನವೆಂಬರ್, 8: ತೀವ್ರ ಅನಾರೋಗ್ಯದಿಂದ ಚೆನ್ನೈ ಅಪೊಲೋ ಆಸ್ಪತ್ರೆಗೆ ದಾಖಲಾಗಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಇನ್ನೆರೆಡು ವಾರಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

"ಜಯಲಲಿತಾ ಅವರನ್ನು ಇನ್ನು 15ದಿನಗಳೊಳಗಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಅವರು ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಅವರಿಗೆ ಫಿಜಿಯೋಥೆರಪಿ ಚಕಿತ್ಸೆ ನೀಡಲಾಗುತ್ತಿದೆ" ಎಂದು ಎಐಎಡಿಎಂಕೆ ಪಕ್ಷದ ವಕ್ತಾರ ಸಿ.ಪೊನ್ನಯ್ಯನ್ ತಿಳಿಸಿದ್ದಾರೆ.

CM Jayalalithaa may be discharged in two weeks

ಜಯಲಲಿತಾ ಅವರನ್ನು ಕ್ರಿಟಿಕಲ್ ಕೇರ್ ವಿಭಾಗದಿಂದ ಖಾಸಗಿ ಕೋಣೆಗೆ ಸ್ಥಳಾಂತರಿಲಸು ವೈದ್ಯರ ಸಲಹೆ ಪಡೆದುಕೊಂಡಿದ್ದೇವೆ. ಅವರ ಸಲಹೆ ಮೇರೆಗೆ ಅವರನ್ನು ಖಾಸಗಿ ಕೋಣೆಯೊಂದಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆ ನಿರ್ದೇಶಕ ಪ್ರತಾಪ್ ರೆಡ್ಡಿ ಅವರು ಸಹ ಜಯಲಲಿತಾ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದು, ಡಿಸ್ಚಾರ್ಜ್ ಆಗುವ ನಿರ್ಧಾರ ತೆಗೆದುಕೊಳ್ಳುಲು ಅವರಿಗೆ ಬಿಡಲಾಗಿದೆ ಎಂದು ತಿಳಿಸಿದ್ದಾರೆ. [ಜಯಲಲಿತಾ ಆರೋಗ್ಯ ಮಾಹಿತಿ ಕೋರಿ ರಾಷ್ಟ್ರಪತಿಗೆ ಪತ್ರ]

ಜಯಲಲಿತಾ ಅವರು ಸಂಪೂರ್ಣ ಗುಣಮುಖರಾದ ಬಳಿಕ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲು ವೈದ್ಯರಿಗೆ ಸೂಚಿಸಲಾಗಿದೆ ಎಂದು ಪೊನ್ನಿಯನ್ ಅವರು ತಿಳಿಸಿದ್ದಾರೆ.[ಆಸ್ಪತ್ರೆಯಿಂದಲೇ ಜಯಲಲಿತಾ ಆಡಳಿತ ನಡೆಸುತ್ತಿದ್ದಾರೆ: ಪಕ್ಷ]

ಜಯಲಲಿತಾ ಅವರು ಮತ್ತಷ್ಟು ದಿನ ಆಸ್ಪತ್ರೆಯಲ್ಲೇ ಇದ್ದು, ಸಂಪೂರ್ಣ ಗುಣಮುಖರಾದ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಬೇಕು ಎನ್ನುವುದು ಪಕ್ಷದ ಹಿರಿಯ ನಾಯಕರ ಅಭಿಪ್ರಾಯ ಎಂದು ಅವರು ಹೇಳಿದರು.[ರಾಕ್ಷಸಿ ಅಂದರೆ ಜಯಲಲಿತಾ, ಪ್ರಜಾಪ್ರಭುತ್ವ ಅಂದರೆ ಪ್ರತಿಭಟನೆ]

ಜಯಲಲಿತಾ ಅವರು ಸೆಪ್ಟೆಂಬರ್ 22ರಂದು ತೀವ್ರ ಉಸಿರಾಟದ ತೊಂದರೆ ಮತ್ತು ನಿರ್ಲಜೀಕರಣ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tamilnadu chief minister J.Jayalalitha may be discharged from Apollo hospital in less than two weeks, a senior AIADMK leader said.
Please Wait while comments are loading...