Get Updates
Get notified of breaking news, exclusive insights, and must-see stories!

ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಆರೋಗ್ಯ ಸ್ಥಿತಿ ಅಪ್ಡೇಟ್ಸ್

ಚೆನ್ನೈ, ಜುಲೈ 29: ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಎಂ.ಕರುಣಾ ನಿಧಿ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ, ಆದರೆ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ತೀವ್ರ ವೈದ್ಯಕೀಯ ನಿಗಾದಲ್ಲಿದ್ದಾರೆ ಎಂದು ಕಾವೇರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅರವಿಂದನ್ ಸೆಲ್ವರಾಜ್ ಅವರ್ಹು ಳಿದ್ದಾರೆ.

ಆದರೆ, ವದಂತಿಗಳಿಗೆ ಕಿವಿಗೊಟ್ಟು ಆಸ್ಪತ್ರೆ ಬಳಿ ಸೇರಿರುವ ಅಭಿಮಾನಿಗಳು ಆಸ್ಪತ್ರೆ ಬಳಿಯ ಬ್ಯಾರಿಗೇಡ್ ಗಳನ್ನು ಮುರಿದು ನುಗ್ಗಲು ಯತ್ನಿಸಿದ್ದಾಗ, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

ಈ ಸಮಯದ ಮಾಹಿತಿಯಂತೆ ಆಸ್ಪತ್ರೆಯಲ್ಲಿ ಕುಟುಂಬದ ಆಪ್ತರು ಬಿಟ್ಟರೆ, ಮಿಕ್ಕ ಎಲ್ಲಾ ಪ್ರಮುಖ ರಾಜಕೀಯ ನಾಯಕರು, ಕರುಣಾನಿಧಿ ಅವರ ಖಾಸಗಿ ವೈದ್ಯ ಡಾ. ಗಿರಿ ಕೂಡಾ ಕಾವೇರಿ ಆಸ್ಪತ್ರೆಯಿಂದ ವಾಪಾಸ್ ಆಗಿದ್ದಾರೆ.

ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಆರೋಗ್ಯ ಸ್ಥಿತಿ ಗಂಭೀರ ಎಂಬ ಮಾಹಿತಿ ಸಿಗುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಕಾವೇರಿ ಆಸ್ಪತ್ರೆಯತ್ತ ಧಾವಿಸುತ್ತಿದ್ದಾರೆ. ಚೆನ್ನೈ ನಗರದಾದ್ಯಂತೆ ಹೈ ಅಲರ್ಟ್ ಘೋಷಿಸಲಾಗಿದ್ದು, ಪೊಲೀಸರು ಗಸ್ತು ತಿರುಗುತ್ತಿದ್ದಾರೆ.

Chennai : DMK chief M Karunanidhi health update Condition critical

ಕಾವೇರಿ ಆಸ್ಪತ್ರೆಗೆ ಕರುಣಾನಿಧಿ ಪುತ್ರ ಸ್ಟಾಲಿನ್, ಪುತ್ರಿ ಕನ್ನಿಮೊಳಿ, ಮಾಜಿ ಕೇಂದ್ರ ಸಚಿವ ಎ ರಾಜಾ ಆಗಮಿಸಿದ್ದಾರೆ. ಇದಕ್ಕೂ ಮುನ್ನ ಮಾಜಿ ಸಚಿವ ಪಿ.ಚಿದಂಬರಂ , ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಕರುಣಾನಿಧಿ ಅವರನ್ನು ಕಂಡು ವಾಪಸಾಗಿದ್ದಾರೆ.

ಆಸ್ಪತ್ರೆ ಬಳಿ ಈಗಾಗಲೇ ಸಾವಿರಾರು ಡಿಎಂಕೆ ಕಾರ್ಯಕರ್ತರು ಜಮಾಯಿಸಿದ್ದು, ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇರುವುದರಿಂದ ಆಸ್ಪತ್ರೆ ಬಳಿ ಮಾತನಾಡಿದ ಎ ರಾಜಾ, ಯಾವುದೇ ಊಹಾಪೋಹ ಸುದ್ದಿಗೆ ಕಿವಿಗೊಡಬೇಡಿ, ದೇಹ ಸ್ಥಿತಿಯಲ್ಲಿ ಏರುಪೇರಾಗಿದ್ದು, ನಿಜ, ಆದರೆ, ವೈದ್ಯರ ತಂಡ ಸೂಕ್ತ ಚಿಕಿತ್ಸೆ ನೀಡುತ್ತಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ ಎಂದಿದ್ದಾರೆ.

ಕರುಣಾನಿಧಿ ಅವರ ಆರೋಗ್ಯ ಕುರಿತಂತೆ ಕಾವೇರಿ ಆಸ್ಪತ್ರೆಯಿಂದ ವೈದ್ಯರು ಅಧಿಕೃತ ಮಾಹಿತಿ ನೀಡಿದ್ದಾರೆ.

"there was transient setback in the clinical condition" but "vital signs are normalizing". ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ಆದರೆ, ಆಸ್ಪತ್ರೆ ಬಳಿ ಆತಂಕದ ವಾತಾವರಣ ಮುಂದುವರೆದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+