ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಳಿ ಮಕ್ಕಳು ಜನಿಸಿದ ಉದ್ಯೋಗಸ್ಥ ತಾಯಿಯ 2ನೇ ಹೆರಿಗೆಗೆ ಸೌಲಭ್ಯವಿಲ್ಲ!

|
Google Oneindia Kannada News

ಉದ್ಯೋಗಸ್ಥ ಮಹಿಳೆ ಮೊದಲ ಹೆರಿಗೆಯಲ್ಲಿ ಅವಳಿ ಮಕ್ಕಳನ್ನು ಹೆತ್ತು, ಎರಡನೇ ಬಾರಿಗೆ ಗರ್ಭ ಧರಿಸಿದರೆ, ಎರಡನೇ ಹೆರಿಗೆಗೆ ಮಾತೃತ್ವ ಲಾಭದ ನಿಯಮಗಳು ಅನ್ವಯವಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.

ಈಗಾಗಲೇ ಅವಳಿ ಮಕ್ಕಳಿದ್ದು, ಎರಡನೇ ಪ್ರಸವದಲ್ಲಿ ಹುಟ್ಟುವ ಮಗುವನ್ನು ಮೂರನೇ ಮಗು ಎಂದು ಪರಿಗಣಿಸಲಾಗುವುದರಿಂದ ತಾಯ್ತನದ ಸೌಲಭ್ಯ ಪಡೆಯಲಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.

ಸದ್ಯದ ನಿಯಮಗಳ ಪ್ರಕಾರ, ಉದ್ಯೋಗಸ್ಥ ಮಹಿಳೆ ಎರಡು ಬಾರಿ ಮಾತೃತ್ವದ ಲಾಭ ಪಡೆದುಕೊಳ್ಳಬಹುದು. ಅಂದ್ರೆ, ಎರಡು ಬಾರಿ ಸಂಬಳ ಸಮೇತ ಹೆರಿಗೆ ರಜೆಯ ಸೌಲಭ್ಯ ಅನ್ವಯವಾಗುತ್ತದೆ.

ಮೊದಲ ಹೆರಿಗೆಯಲ್ಲಿ ಅವಳಿ ಮಕ್ಕಳು ಹುಟ್ಟಿ, ಉದ್ಯೋಗ ನಿರತ ಮಹಿಳೆ ಮತ್ತೆ ಗರ್ಭಿಣಿಯಾದರೆ.. ಅದನ್ನ ಎರಡನೇ ಹೆರಿಗೆ ಅಂತ ಪರಿಗಣಿಸಬೇಕೋ ಅಥವಾ ಮೂರನೆಯದ್ದು ಎಂದು ಪರಿಗಣಿಸಬೇಕೋ ಎಂಬುದು ಚರ್ಚಾಸ್ಪದ ವಿಷಯ.

ಮುಂಬೈ ರೈಲಿನಲ್ಲೇ ಅವಳಿ ಮಕ್ಕಳ ಹೆರಿಗೆ, ದೇವರಂತೆ ಬಂದ ಪೊಲೀಸರುಮುಂಬೈ ರೈಲಿನಲ್ಲೇ ಅವಳಿ ಮಕ್ಕಳ ಹೆರಿಗೆ, ದೇವರಂತೆ ಬಂದ ಪೊಲೀಸರು

ಆದ್ರೆ, ಅವಳಿ ಮಕ್ಕಳ ಜನನ ಏಕಕಾಲದ ಪ್ರಕ್ರಿಯೆಯಲ್ಲ. ಒಂದರ ನಂತರ ಮತ್ತೊಂದು ಮಗು ಜನಿಸುತ್ತದೆ. ಹೀಗಾಗಿ, ಅವಳಿ ಮಕ್ಕಳು ಹುಟ್ಟಿದ ಸಮಯವನ್ನು ಆಧರಿಸಿ ಹೆರಿಗೆ ಎಷ್ಟನೆಯದ್ದು ಎಂಬುದನ್ನು ನಿರ್ಧರಿಸಬೇಕಾಗುತ್ತದೆ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

ಪ್ರಕರಣದ ಹಿನ್ನಲೆ

ಪ್ರಕರಣದ ಹಿನ್ನಲೆ

ಸಿ.ಐ.ಎಸ್.ಎಫ್ ಮಹಿಳಾ ಸಿಬ್ಬಂದಿಯೊಬ್ಬರಿಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಮೂರ್ತಿ ಎ.ಪಿ.ಸಾಹಿ ನೇತೃತ್ವದ ಪೀಠ ಈ ತೀರ್ಪು ನೀಡಿದೆ. ಸಿ.ಐ.ಎಸ್.ಎಫ್ ಮಹಿಳಾ ಸಿಬ್ಬಂದಿ ಮೊದಲ ಹೆರಿಗೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಎರಡನೇ ಹೆರಿಗೆಯಾದ ಮೇಲೆ ಮಾತೃತ್ವದ ಲಾಭವನ್ನು ಪಡೆದುಕೊಂಡಿದ್ದರು. ಈ ಹಿಂದೆ ಏಕ ಸದಸ್ಯ ಪೀಠ ಮಹಿಳಾ ಸಿಬ್ಬಂದಿಗೆ 180 ದಿನಗಳ ಹೆರಿಗೆ ರಜೆ ಮತ್ತು ಇತರೆ ಸೌಲಭ್ಯಗಳನ್ನು ಮಂಜೂರು ಮಾಡಿತ್ತು. ಇದನ್ನ ಪ್ರಶ್ನಿಸಿ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಏಕ ಸದಸ್ಯ ಪೀಠವು ತಮಿಳುನಾಡು ಸರ್ಕಾರಿ ನೌಕರರ ಸೇವಾ ನಿಯಮಗಳ ಪ್ರಕಾರ, ಮಾತೃತ್ವ ಲಾಭದ ಸೌಲಭ್ಯ ಮಂಜೂರು ಮಾಡಿತ್ತು. ಆದ್ರೆ, ಮಹಿಳೆ ಕೇಂದ್ರ ಸರ್ಕಾರಿ ಉದ್ಯೋಗಿ ಆಗಿರುವ ಕಾರಣ ಅವರಿಗೆ ರಾಜ್ಯ ಸರ್ಕಾರದ ನಿಯಮಗಳು ಅನ್ವಯಿಸುವುದಿಲ್ಲ.

ಕೇಂದ್ರ ಸರ್ಕಾರದ ನಿಯಮ ಏನು.?

ಕೇಂದ್ರ ಸರ್ಕಾರದ ನಿಯಮ ಏನು.?

ನಾಗರಿಕ ಸೇವಾ ನಿಯಮಗಳು 1972 (ನಿಯಮ 43) ಪ್ರಕಾರ, ಎರಡು ಅಥವಾ ಎರಡಕ್ಕಿಂತ ಕಡಿಮೆ ಮಕ್ಕಳಿರುವ ಉದ್ಯೋಗಿಗಳಿಗೆ ಮಾತ್ರ ಸಂಬಳ ಸಹಿತ ಹೆರಿಗೆ ರಜೆಗೆ ಅರ್ಹರಾಗುತ್ತಾರೆ.

ಆಸ್ಪತ್ರೆಯಲ್ಲಿ ತಾನೇ ಹೆರಿಗೆ ಮಾಡಿಕೊಂಡ ಗರ್ಭಿಣಿಆಸ್ಪತ್ರೆಯಲ್ಲಿ ತಾನೇ ಹೆರಿಗೆ ಮಾಡಿಕೊಂಡ ಗರ್ಭಿಣಿ

ತೀರ್ಪು ಸರಿಯಲ್ಲ.!

ತೀರ್ಪು ಸರಿಯಲ್ಲ.!

''ನ್ಯಾಯಾಲಯದ ಈ ತೀರ್ಪು ಸರಿಯಿಲ್ಲ. ಮೊದಲ ಹೆರಿಗೆಯಲ್ಲಿ ಅವಳಿ ಮಕ್ಕಳಾಗಲಿ, ತ್ರಿವಳಿಯಾಗಲಿ.. ಅದನ್ನ ಮೊದಲ ಹೆರಿಗೆ ಎಂದಷ್ಟೇ ಪರಿಗಣಿಸಬೇಕು. ನಂತರದ್ದನ್ನು ಎರಡನೇ ಹೆರಿಗೆ ಎಂದು ಪರಿಗಣಿಸಬೇಕು. ಇಲ್ಲಿ ಎಷ್ಟು ಮಕ್ಕಳು ಜನಿಸಿದರು ಎಂಬುದು ಮುಖ್ಯವಲ್ಲ. ಎಷ್ಟನೇ ಹೆರಿಗೆ ಎಂಬುದನ್ನಷ್ಟೇ ಪರಿಗಣಿಸಬೇಕು'' ಎಂದು ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಹೇಳಿದ್ದಾರೆ.

ಈ ಹಿಂದೆ ಕೋರ್ಟ್ ಹೀಗೆ ಹೇಳಿತ್ತು.!

ಈ ಹಿಂದೆ ಕೋರ್ಟ್ ಹೀಗೆ ಹೇಳಿತ್ತು.!

ಈ ಹಿಂದೆ ಸರ್ಕಾರಿ ಶಾಲಾ ಶಿಕ್ಷಕಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಇದೇ ಮದ್ರಾಸ್ ಹೈಕೋರ್ಟ್, ''ಮೊದಲನೇ ಹೆರಿಗೆಯಲ್ಲಿ ಎಷ್ಟು ಮಕ್ಕಳು ಜನಿಸಿದವು ಎಂಬ ಆಧಾರದ ಮೇಲೆ ಎರಡನೇ ಹೆರಿಗೆಯ ವೇಳೆ ಮಾತೃತ್ವದ ಲಾಭವನ್ನು ನಿರಾಕರಿಸಲು ಸಾಧ್ಯವಿಲ್ಲ. ಹೆರಿಗೆಗಳ ಸಂಖ್ಯೆಗೆ ಮಾತೃತ್ವ ಲಾಭದ ನಿಯಮವನ್ನು ಸೀಮಿತಗೊಳಿಸಬಹುದೇ ಹೊರತು ಹೆರಿಗೆಗಳಲ್ಲಿ ಹುಟ್ಟಿದ ಮಕ್ಕಳ ಸಂಖ್ಯೆಯನ್ನು ಪರಿಗಣಿಸಲು ಸಾಧ್ಯವಿಲ್ಲ'' ಎಂದು ಅಭಿಪ್ರಾಯ ಪಟ್ಟಿತ್ತು.

English summary
Central Govt Employee not entitled to maternity benefit for birth of 3rd child after twins ruled Madras High Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X