ಕಾವೇರಿ ನಿರ್ವಹಣಾ ಮಂಡಳಿ ರಚಿಸದಿದ್ದರೆ ಆತ್ಮಹತ್ಯೆ:ಸಂಸದನಿಂದ ಬೆದರಿಕೆ
ಚೆನ್ನೈ, ಮಾರ್ಚ್ 29: ಕೇಂದ್ರ ಸರ್ಕಾರ ಕಾವೇರಿ ನಿರ್ವಹಣ ಮಂಡಳಿ ರಚಿಸುವಲ್ಲಿ ವಿಫಲವಾದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಐಎಡಿಎಂಕೆ ಸಂಸದ ಎ.ನವನೀತಕೃಷ್ಣನ್ ಬೆದರಿಕೆ ಒಡ್ಡಿದ್ದಾರೆ.
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಫೆ.16 ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಆರು ವಾರಗಳಲ್ಲಿ ಕೇಂದ್ರ ಸರ್ಕಾರವು ಕಾವೇರಿ ನಿರ್ವಹಣಾ ಮಂಡಳಿಯನ್ನು ನಿರ್ಮಿಸಲು ಆದೇಶ ನೀಡಿತ್ತು. ಆದರೆ ಕೇಂದ್ರ ಸರ್ಕಾರ, ಮಂಡಳಿ ನಿರ್ಮಾಣದಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ದೂರಿ ನವನೀತಕೃಷ್ಣನ್ ಈ ರೀತಿ ಬೆದರಿಕೆ ಒಡ್ಡಿದ್ದಾರೆ.
ಈ ಮೊದಲೂ 'ಕಾವೇರಿ ನಿರ್ವಹಣಾ ಮಂಡಳಿ' ರಚಿಸುವಂತೆ ಕೋರಿ ಹಲವು ದಿನಗಳ ಕಾಲ ಎಐಎಡಿಎಂಕೆ ಸಚಿವರು ಸಂಸತ್ತಿನೆದುರು ಧರಣಿ ನಡೆಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಸುಪ್ರೀಂ ಕೋರ್ಟ್ ತೀರ್ಪಿನನ್ವಯ ಕರ್ನಾಟಕ ತಮಿಳುನಾಡಿಗೆ ನೀಡುತ್ತಿದ್ದ 192 ಟಿಎಂಸಿ ಅಡಿ ನೀರಿಗೆ ಬದಲಾಗಿ 177.25 ಟಿಎಂಸಿ ಅಡಿ ನೀರನ್ನಷ್ಟೇ ನೀಡಲು ಆದೇಶಿಸಿತ್ತು. ಇದರಿಂದಾಗಿ ಕರ್ನಾಟಕದ ಬಳಿ 14.75 ಟಿಎಂಸಿ ಅಡಿ ಹೆಚ್ಚುವರಿ ನೀರು ಉಳಿದಂತಾಗಿದೆ. ಇದರೊಂದಿಗೆ ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆ ಕೇಂದ್ರ ಸರ್ಕಾರದ ಕೆಲಸ ಎಂದು ಸಹ ಹೇಳಿತ್ತು.











Click it and Unblock the Notifications