ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಚೆನ್ನೈ, ಸೆ. 12: ತಮಿಳುನಾಡಿನಲ್ಲಿರುವ ಕನ್ನಡಿಗರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಕನ್ನಡಿಗರಿಗೆ ಸೇರಿರುವ ವಾಹನ, ಕಚೇರಿ ಮೇಲೆ ದಾಳಿ ನಡೆದಿದೆ. ಚೆನ್ನೈನ ಹೋಟೆಲ್ ವೊಂದರ ಮೇಲೆ 6 ಪೆಟ್ರೋಲ್ ಬಾಂಬ್ ಗಳನ್ನು ಸೋಮವಾರ ಬೆಳಗ್ಗೆ ಎಸೆಯಲಾಗಿದೆ.

ಚೆನ್ನೈನಲ್ಲಿರುವ ನ್ಯೂ ವುಡ್ ಲ್ಯಾಂಡ್ಸ್ ಹೋಟೆಲ್ ಮೇಲೆ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ. ಬೆಂಗಳೂರಿನಲ್ಲಿ ತಮಿಳುನಾಡು ಮೂಲದ ಯುವಕನೊಬ್ಬನಿಗೆ ಕನ್ನಡಿಗರು ಗೂಸಾ ಕೊಟ್ಟ ಪ್ರತಿಕಾರಕ್ಕಾಗಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. [Live : 12 ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶ]

Cauvery- Petrol bombs hurled at hotel run by Kannadiga in Chennai

ಕನ್ನಡ ಚಲನಚಿತ್ರ ನಟ, ನಟಿಯರ ವಿರುದ್ಧ ಅವಹೇಳನಕಾರಿ ಕಾಮೆಂಟ್ ಮಾಡಿ, ಟ್ರಾಲ್ ಮಾಡುತ್ತಿದ್ದ ತಮಿಳುನಾಡು ಮೂಲದ ಯುವಕನೊಬ್ಬನ ಮೇಲೆ ಬೆಂಗಳೂರಿನ ಗಿರಿನಗರದಲ್ಲಿ ಕನ್ನಡಿಗರ ಗುಂಪೊಂದು ಹಲ್ಲೆ ಮಾಡಿತ್ತು. ಇದು ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆಯಾಗಿತ್ತು.

Cauvery- Petrol bombs hurled at hotel run by Kannadiga in Chennai

ಇದರಿಂದ ರೊಚ್ಚಿಗೆದ್ದ ತಮಿಳರು, ಸೋಮವಾರ ಚೆನ್ನೈನಲ್ಲಿರುವ ಕನ್ನಡಿಗರನ್ನು ಗುರಿಯಾಗಿಸಿಕೊಂಡು ಹಲ್ಲೆ ಮಾಡುತ್ತಿದ್ದಾರೆ. ತಮಿಳರ ಮೇಲೆ ಹಲ್ಲೆ ಮುಂದುವರೆದರೆ ಇಲ್ಲಿರುವ ಕನ್ನಡಿಗರಿಗೂ ಅದೇ ಗತಿಯಾಗುತ್ತದೆ ಎಂಬರ್ಥದ ಪಾಂಪ್ಲೇಟ್ ಗಳನ್ನು ಹಂಚಲಾಗುತ್ತಿದೆ. ಟೂರಿಸ್ಟ್ ಗಳಿದ್ದ ಬಸ್‍ ಅಡ್ಡಗಟ್ಟಿ ಗಾಜುಗಳನ್ನ ಪುಡಿ ಪುಡಿ ಮಾಡಿದ್ದಾರೆ.

ಕನ್ನಡಿಗರ ಮೇಲೆ ಹಲ್ಲೆ ಮಾಡಿದವರನ್ನು ನಾಮ್ ತಮಿಳರ್ ಕಚ್ಚಿಯವರು ಎಂದು ತಿಳಿದು ಬಂದಿದೆ. ಹಲ್ಲೆಕೋರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕನ್ನಡಿಗರು ಇರುವ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Cauvery protests took yet another turn today with miscreants hurling six petrol bombs at a hotel in Chennai. Miscreants entered the New Woodlands hotel in Chennai and hurled petrol bombs. They said that this was in retaliation to the beating up of a Tamil Nadu youth in Bengaluru.
Please Wait while comments are loading...