ಜಾತಿ ರಾಜಕಾರಣ ದೊಡ್ಡ ಅಡಚಣೆ: ಕಮಲ್ ಹಾಸನ್

Posted By:
Subscribe to Oneindia Kannada

ಚೆನ್ನೈ, ಫೆಬ್ರವರಿ 15: ಗ್ರಾಮೀಣ ವಿದ್ಯಾರ್ಥಿಗಳು ಮತ್ತು ರೈತರಿಗೆ ಜಾತಿ ರಾಜಕಾರಣ ಎಂಬುದು ಬಹುದೊಡ್ಡ ಅಡಚಣೆ ಎನ್ನಿಸಿದೆ ಎಂದು ನಟ, ರಾಜಕಾರಣಿ ಕಮಲ್ ಹಾಸನ್ ಹೇಳಿದ್ದಾರೆ.

ತಮಿಳು ನಿಯತಕಾಲಿಕವೊಂದಕ್ಕೆ ಸಂದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ಅವರು ಈ ರೀತಿ ಅಭಿಪ್ರಾಯಿಸಿದ್ದಾರೆ. ರಾಜಕೀಯ ಪ್ರಚಾರಕ್ಕಾಗಿ ಜಾತಿ ಓಲೈಕೆ ನಡೆಯುತ್ತಿದೆ. ಇದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮತ್ತ ರೈತರಿಗೆ ಅತೀ ದೊಡ್ಡ ಶತ್ರು ಎನ್ನಿಸಿದೆ ಎಂದು ಅವರು ಹೇಳಿದರು.

ರಾಜಕೀಯಕ್ಕಾಗಿ ನಟನೆಯನ್ನು ತೊರೆಯಲು ನಿರ್ಧರಿಸಿದ ಕಮಲ್ ಹಾಸನ್

ಸರ್ಕಾರದ ಹಲವು ಕೃಷಿಪರ ಯೋಜನೆಗಳು ಕೇವಲ ಕಾಗದದಲ್ಲಿವೆಯೇ ಹೊರತು ಅನುಷ್ಠಾನಕ್ಕೆ ಬಂದಿಲ್ಲ ಎಂದು ದೂರಿದರು. ಜಾತಿ ರಾಜಕಾರಣ ಎಂಬುದು ನೈಜ ಪ್ರತಿಭೆಯನ್ನು ಮೂಲೆಗುಂಪು ಮಾಡುತ್ತಿದೆ. ಅಂಥವರಿಗೆ ಅವಕಾಶ ದಕ್ಕದಂತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

Caste politics a hurdle for framers, rural students: Haasan

63 ವರ್ಷದ ಬಹುಭಾಷಾ ನಟ ಕಮಲ್ ಹಾಸನ್ ನಟನೆಗೆ ಗುಡ್ ಬೈ ಹೇಳಿ ಪೂರ್ಣ ಪ್ರಾಣದಲ್ಲಿ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ. ಇದೇ ಫೆಬ್ರವರಿ 21 ರಂದು ಅವರ ಹೊಸ ಪಕ್ಷದ ಹೆಸರು ಘೋಷಣೆಯಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Actor turned politician Kamal Haasan on Thursday said that caste politics has become a hurdle for rural students and the farmers. In an interview with aTamil magazine, he said that the concept of caste is being kept alive for electoral gains and benefits.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ