ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೆಷರ್ ಕುಕ್ಕರ್ ಬೇಕು ಎಂದಿದ್ದ ದಿನಕರನ್ ಗೆ ತೀವ್ರ ಹಿನ್ನಡೆ

|
Google Oneindia Kannada News

ನವದೆಹಲಿ, ಮಾರ್ಚ್ 26: ತಮಿಳುನಾಡು ವಿಧಾನಸಭೆ ಉಪಚುನಾವಣೆಯಲ್ಲಿ ಪ್ರೆಷರ್ ಕುಕ್ಕರ್​ಚಿಹ್ನೆಯಡಿಯಲ್ಲಿ ಸ್ಪರ್ಧಿಸಿದ್ದ ಎಐಎಡಿಎಂಕೆಯ ಟಿ.ಟಿ.ವಿ. ದಿನಕರನ್​ಬಣಕ್ಕೆ ತೀವ್ರ ಹಿನ್ನಡೆಯಾಗಿದೆ. ಪ್ರೆಷರ್ ಕುಕ್ಕರ್ ಚಿಹ್ನೆಯನ್ನೇ ಕಾಯಂಗೊಳಿಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಪ್ರೆಷರ್ ಕುಕ್ಕರ್ ಬೇಕು ಎಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ದಿನಕರನ್ ಅವರಿಗೆ ಚುನಾವಣಾ ಆಯೋಗದ ಸೂಚನೆಯಂತೆ ನಡೆಯುವಂತೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ. ಟಿ.ಟಿ.ವಿ. ದಿನಕರನ್, ವಿಕೆ ಶಶಿಕಲಾ ಬಣ ಮಾಡಿಕೊಂಡ ಮನವಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್, ನ್ಯಾ ದೀಪಕ್ ಗುಪ್ತಾ ಅವರಿದ್ದ ನ್ಯಾಯಪೀಠವು ಈ ವಿಷಯದಲ್ಲಿ ಚುನಾವಣಾ ಆಯೋಗ ನಿರ್ಧಾರವು ಅಂತಿಮ ಎಂದಿದೆ.​

ಎಐಎಡಿಎಂಕೆ ಪ್ರಣಾಳಿಕೆಯಲ್ಲಿ ಮೀನುಗಾರರಿಗೆ ಬಂಪರ್ ಗಿಫ್ಟ್ ಎಐಎಡಿಎಂಕೆ ಪ್ರಣಾಳಿಕೆಯಲ್ಲಿ ಮೀನುಗಾರರಿಗೆ ಬಂಪರ್ ಗಿಫ್ಟ್

ದಿನಕರನ್ ಬಣಕ್ಕೆ ಲಭ್ಯವಿರುವ ಉಚಿತ ಚಿಹ್ನೆಗಳನ್ನು ನೀಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ. ಆ ಪಕ್ಷದಿಂದ ಗೆಲ್ಲುವ ಎಲ್ಲ ಅಭ್ಯರ್ಥಿಗಳನ್ನು ಪಕ್ಷೇತರ ಅಭ್ಯರ್ಥಿಗಳು ಎಂದು ಪರಿಗಣಿಸುವಂತೆ ಸುಪ್ರೀಂಕೋರ್ಟ್​ಚುನಾವಣಾ ಆಯೋಗಕ್ಕೆ ಸೂಚಿಸಿದೆ.

Cant Allot Pressure Cooker Symbol to TTV Dhinakaran Led Party, EC

ಮುಖ್ಯಮಂತ್ರಿ ಪಳನಿಸ್ವಾಮಿ ಬಣಕ್ಕೆ ಎಐಎಡಿಎಂಕೆ ಹಾಗೂ ಎರಡು ಹಸಿರೆಲೆ ಚಿಹ್ನೆ ಸಿಕ್ಕಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಸಿರುವ ಅರ್ಜಿ ಇನ್ನು ವಿಚಾರಣೆಯಲ್ಲಿದೆ. ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ(ಎಎಂಎಂಕೆ) ಸ್ಥಾಪಿಸಿರುವ ದಿನಕರನ್ ಪಕ್ಷದ ಚಿಹ್ನೆ ಕುರಿತಾಗಿ ಏಪ್ರಿಲ್ 2017ರಿಂದ ಕಾನೂನು ಹೋರಾಟ ಮುಂದುವರೆಸಿದ್ದಾರೆ.

English summary
The Election Commission told the Supreme Court Monday that it can allot a common symbol of "pressure cooker" to an individual but not to an unregistered group led by former AIADMK leader TTV Dhinakaran and V K Sasikala in Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X