ಶೇ 100 ಅಂಧೆ, ಭಾರತೀಯ ವಿದೇಶಿ ಸೇವೆಗೆ ಆಯ್ಕೆ
ಚೆನ್ನೈ, ಜೂ.15: ಭಾರತೀಯ ವಿದೇಶಿ ಸೇವೆಗೆ (ಐಎಫ್ಎಸ್) ಆಯ್ಕೆಯಾದ ಮೊಟ್ಟ ಮೊದಲ ಅಂಧೆ ಎಂಬ ಗೌರವಕ್ಕೆ ತಮಿಳುನಾಡಿನ ಎನ್.ಎಲ್. ಬೆನೋ ಝೆಫೈನ್ ಅವರು ಪಾತ್ರರಾಗಿದ್ದಾರೆ.
ಐಎಎಸ್ ಮತ್ತು ಐಪಿಎಸ್ ಶ್ರೇಣಿಗಳಷ್ಟೇ ಪ್ರತಿಷ್ಠಿತವಾದ ಐಎಫ್ಎಸ್ ಸೇವೆಗೆ ಸಾಮಾನ್ಯವಾಗಿ ಅಂಧರನ್ನು ಆಯ್ಕೆ ಮಾಡಿರುವುದು ಇಡೇ ಮೊದಲ ಬಾರಿ. ಕಳೆದ 69 ವರ್ಷಗಳ ಇತಿಹಾಸದಲ್ಲಿ ಶೇ 100ರಷ್ಟು ದೃಷ್ಟಿ ದೋಷ ಹೊಂದಿರುವವರನ್ನು ಬಿಟ್ಟರೆ ಸಂಪೂರ್ಣವಾಗಿ ಅಂಧರಾಗಿರುವವರನ್ನು ಈ ಹುದ್ದೆಗೆ ನೇಮಕ ಮಾಡಿರಲಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಕಾಳಜಿ ಹಾಗೂ ಆಶಯದಂತೆ ಎನ್.ಎಲ್. ಬೆನೋ ಝೆಫೈನ್ ಅವರ ನೇಮಕಾತಿ ನಡೆಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ತಮಿಳುನಾಡಿನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ನಲ್ಲಿ (ಎಸ್ಬಿಐ) ಪ್ರೊಬೇಷನರಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬೆನೋ ಝೆಫೈನ್ ಐಎಫ್ಎಸ್ ಹುದ್ದೆಗೆ ನೇಮಕಗೊಂಡಿರುವುದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.
2014ರಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ 343ನೇ ಸ್ಥಾನ ಪಡೆದ ಬೆನೋ ಅವರಿಗೆ ಮೊದಲಿನಿಂದಲೂ ಐಎಫ್ ಎಸ್ ಅಧಿಕಾರಿಯಾಗುವ ಕನಸಿತ್ತು. ಲೊಯೊಲಾ ಕಾಲೇಜಿನಲ್ಲಿ ಇಂಗ್ಲೀಷ್ ನಲ್ಲಿ ಎಂಎ ಮುಗಿಸಿ ಭಾರತೀಯಾರ್ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ಪಡೆದುಕೊಂಡಿದ್ದಾರೆ.












Click it and Unblock the Notifications