ಬೆಂಗಳೂರು ಟೆಕ್ಕಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸಾವು
ಚೆನ್ನೈ, ಜನವರಿ29 : ಮೊಬೈಲ್ ನಲ್ಲಿ ಮಾತನಾಡುತ್ತಾ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರು ಸೇತುವೆಯಿಂದ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ಚೆನ್ನೈನ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಮೂಲತಹ ಆಂಧ್ರಪ್ರದೇಶದ ವಿಜವಾಡದವರಾದ ಚೈತನ್ಯ ವೂಯೂರು(28 ) ಬೆಂಗಳೂರಿನ ಆಕ್ಸೆಂಚರ್ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಫೋನ್ ನಲ್ಲಿ ಮಾತನಾಡುತ್ತಾ ಸೇತುವೆ ಮೇಲೆ ಕುಳಿತುಕೊಳ್ಳಲು ಹೋಗಿ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ. ದೃಶ್ಯ ಏರ್ ಪೋರ್ಟ್ ನ ಸಿಸಿಟಿವಿ ಫೂಟೇಜ್ ನಲ್ಲಿ ದಾಖಲಾಗಿದೆ. ನಿಲ್ದಾಣದ ನಿರ್ಗಮನ ದ್ವಾರದ ಬಳಿ ಇರುವ ಸೇತುವೆಯಲ್ಲಿ ಬೆಳಗ್ಗೆ 6.30ರ ಸಮಯದಲ್ಲಿ ಬಿದ್ದಿದ್ದಾರೆ.
ಚೈತನ್ಯ ಅವರು ಸ್ನೇಹಿತನನ್ನು ಭೇಟಿಯಾಗಲು ಚೆನ್ನೈಗೆ ಬಂದಿದ್ದರು, ಪುನಃ ಬೆಂಗಳೂರಿಗೆ ತೆರಳಲು ದೊಮೆಸ್ಟಿಕ್ ವಿಮಾನಕ್ಕೆ ಕಾಯುತ್ತಿದ್ದರು.30 ಅಡಿ ಎತ್ತರದ ಸೇತುವೆಯಿಂದ ಕೆಳಗೆ ಬಿದ್ದಿರುವ ಕಾರಣ ಅನೇಕ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಒಂದೊಮ್ಮೆ ಸೆಲ್ಫೀ ತೆಗೆಯಲು ಹೋಗಿ ಸಾವಿಗೀಡಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಆದರೆ ವಿಮಾನ ನಿಲ್ದಾಣದ ಸಿಬ್ಬಂದಿಗಳು ಅಚಾನ್ ಆಗಿ ಆತ ಕೆಳಗೆ ಬಿದ್ದಿದ್ದಾನೆ ಎಂದು ದೃಢಪಡಿಸಿದ್ದಾರೆ.












Click it and Unblock the Notifications