ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗತ್ಯ ಸರಕುಗಳಲ್ಲಿ ಸ್ಯಾನಿಟರಿ ಪ್ಯಾಡ್ ಸೇರಿಸಿ -'ಪ್ಯಾಡ್ ಮ್ಯಾನ್' ಮನವಿ

|
Google Oneindia Kannada News

ಚೆನ್ನೈ, ಏಪ್ರಿಲ್ 28: ಅಗತ್ಯ ಸರಕುಗಳಲ್ಲಿ ಸ್ಯಾನಿಟರಿ ಪ್ಯಾಡ್ ಸೇರಿಸಿ ಎಂದು ಸರ್ಕಾರಕ್ಕೆ 'ಪ್ಯಾಡ್ ಮ್ಯಾನ್' ಖ್ಯಾತಿಯ ಅರುಣಾಚಲಂ ಮುರುಗಾನಂದಮ್ ಮನವಿ ಮಾಡಿದ್ದಾರೆ.

ಲಾಕ್‌ಡೌನ್ ಜಾರಿಗೊಳಿಸಿದಾಗಿನಿಂದ ದೇಶಾದ್ಯಂತ ಸ್ಯಾನಿಟರಿ ಪ್ಯಾಡ್‌ಗಳ ಲಭ್ಯತೆಯಲ್ಲಿ ಕೊರತೆ ಇದೆ. ಲಾಕ್ ಡೌನ್ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಹೇಗೆ ಪಡೆಯಬಹುದು ಎಂದು ತಿಳಿಯಲು ದೇಶಾದ್ಯಂತದ ನೂರಾರು ಮಹಿಳೆಯರು ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಅರುಣಾಚಲಂ ಮುರುಗಾನಂದಮ್ ಸುದ್ದಿ ವಾಹಿನಿಯೊಂದರ ಜೊತೆಗೆ ಮಾತನಾಡಿದ್ದಾರೆ.

"ಲಾಕ್‌ಡೌನ್‌ನ ಒಂದು ಉದ್ದೇಶವೆಂದರೆ ಪ್ರತಿಯೊಬ್ಬರನ್ನು ಆರೋಗ್ಯವಾಗಿಡುವುದು. ಆದರೆ, ಮತ್ತೊಂದೆಡೆ, ನೈರ್ಮಲ್ಯ ಪ್ಯಾಡ್‌ಗಳ ತಯಾರಿಕೆ, ಕಚ್ಚಾ ವಸ್ತುಗಳ ಖರೀದಿ ಮತ್ತು ಲಾಕ್‌ಡೌನ್‌ನಿಂದಾಗಿ ವಿತರಣೆಯಲ್ಲಿ ಅಡ್ಡಿ ಇದೆ. ಪ್ಯಾಡ್‌ಗಳು ಲಭ್ಯವಿಲ್ಲದ ಕಾರಣ, ಮಹಿಳೆಯರು ಯಾವುದೇ ಆಯ್ಕೆ ಇರುವುದಿಲ್ಲ. ಅವರು ತಮ್ಮ ಕುಟುಂಬಕ್ಕೆ ತಿಳಿಸುವುದಿಲ್ಲ ಮತ್ತು ಅವಧಿಗಳಲ್ಲಿ ಬಟ್ಟೆಯ ಬಳಕೆಯಂತಹ ಆರೋಗ್ಯಕರವಲ್ಲದ ವಿಧಾನಗಳಿಗೆ ಮುಂದಾಗುತ್ತಾರೆ. ಗ್ರಾಮೀಣ ಭಾರತದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು'' ಎಂದು ಅವರು ಹೇಳಿದ್ದಾರೆ.

 Arunachalam Muruganantham Requests Government To Make Sanitary Pads An Essential Commodity

ಅನೇಕ ವರ್ಷಗಳಿಂದ ವಿವಿಧ ಎನ್‌ಜಿಒಗಳು ಮತ್ತು ಸರ್ಕಾರಿ ಸಂಸ್ಥೆಗಳು ಸ್ಯಾನಿಟರಿ ಪ್ಯಾಡ್‌ ಬಳಕೆ ಬಗ್ಗೆ ಮಹಿಳೆಯರಿಗೆ ಜಾಗೃತಿ ಮೂಡಿಸುತ್ತಾ ಬಂದಿವೆ. ಜೊತೆಗೆ ಸ್ಯಾನಿಟರಿ ಪ್ಯಾಡ್‌ಗಳಿಗಾಗಿ ಕೇಂದ್ರ ಸರ್ಕಾರ ಜಿಎಸ್‌ಟಿಯನ್ನು ಕಡಿತಗೊಳಿಸಿತು. ಆದರೆ, ಈಗ ಈ ಎಲ್ಲ ಪ್ರಯತ್ನಗಳ ವ್ಯರ್ಥ ಆಗಬಾರದು ಎಂದಿದ್ದಾರೆ.

ಸ್ಯಾನಿಟರಿ ಪ್ಯಾಡ್‌ಗಳನ್ನು ಕಡಿಮೆ ದರದಲ್ಲಿ ಮಹಿಳೆಯರಿಗೆ ನೀಡಬೇಕು ಎಂದು ಅದರ ತಯಾರಿಕೆ ಮಾಡಿದ ಅರುಣಾಚಲಂ ಮುರುಗಾನಂದಂ, ಭಾರತದಲ್ಲಿ ದೊಡ್ಡ ಕ್ರಾಂತಿ ಮಾಡಿದರು. ಅವರ ಜೀವನ ಕುರಿತ ಸಿನಿಮಾ 'ಪ್ಯಾಡ್‌ ಮ್ಯಾನ್' 2018 ರಲ್ಲಿ ಬಿಡುಗಡೆಯಾಗಿದೆ. ಅವರ ಪಾತ್ರವನ್ನು ನಟ ಅಕ್ಷಯ್ ಕುಮಾರ್ ನಿಭಾಯಿಸಿದ್ದರು.

English summary
'Pad Men' Arunachalam Muruganantham requests the government to make sanitary pads an essential commodity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X