ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈನಿಂದ 740 ಟನ್ ಅಮೋನಿಯಂ ನೈಟ್ರೇಟ್ ಹೊರಕ್ಕೆ

|
Google Oneindia Kannada News

ಚೆನ್ನೈ, ಆ. 10: ಲೆಬನಾನ್‌ ರಾಜಧಾನಿ ಬೈರುತ್ ನಲ್ಲಿ ಸುಮಾರು 2,750 ಟನ್‌ನಷ್ಟು ಅಮೋನಿಯಂ ನೈಟ್ರೇಟ್ ಸ್ಫೋಟಗೊಂಡ ಘಟನೆ ಗೊತ್ತಿರಬಹುದು. ಇದಾದ ಬಳಿಕ ಚೆನ್ನೈನ ಹೊರವಲಯದಲ್ಲಿ 740 ಟನ್ ಅಮೋನಿಯಂ ನೈಟ್ರೇಟ್ ಸಂಗ್ರಹದ ಬಗ್ಗೆ ಸುದ್ದಿ ಬಂದು ಆತಂಕ ಮೂಡಿತ್ತು. ಈಗ ಈ ಅಮೋನಿಯಂ ನೈಟ್ರೇಟ್ ಸಂಗ್ರಹವನ್ನು ಹೈದರಾಬಾದಿಗೆ ರವಾನಿಸಲಾಗುತ್ತಿದೆ.

Recommended Video

Mumbai ಮಳೆಯಲ್ಲಿ ರಸ್ತೆ ನಡುವೆ ನಿಂತು ಮಾನವೀಯತೆ ಮೆರೆದ ಮಹಿಳೆ | Oneindia Kannada

ಚೆನ್ನೈ ಹೊರವಲಯದಲ್ಲಿ ಸುಮಾರು 740 ಟನ್‌ ಅಮೋನಿಯಂ ನೈಟ್ರೇಟ್ ಸಂಗ್ರಹವನ್ನು ಕಸ್ಟಮ್ಸ್ ಸುಪರ್ದಿಯಲ್ಲಿರಿಸಲಾಗಿತ್ತು. ತಲಾ 20 ಟನ್‌ನಂತೆ 37ಕಂಟೇನರ್‌ಗಳಲ್ಲಿ ಅಮೋನಿಯಂ ನೈಟ್ರೇಟ್ ಸಂಗ್ರಹಿಸಲಾಗಿತ್ತು. ಭಾನುವಾರವೇ ಈ ಸಂಗ್ರಹವನ್ನು ರವಾನಿಸುವ ಕಾರ್ಯ ಆರಂಭವಾಗಿದ್ದು, 180 ಟನ್ ಗಳಷ್ಟು ಸಂಗ್ರಹವನ್ನು ಚೆನ್ನೈನಿಂದ ಹೈದರಾಬಾದಿನ ಖಾಸಗಿ ಸಂಸ್ಥೆಗೆ ರವಾನಿಸಲಾಗಿದೆ.

3 ಲಕ್ಷ ಮಂದಿ ನಿರಾಶ್ರಿತರು, ನರಕವಾದ ಲೆಬನಾನ್ ರಾಜಧಾನಿ ಬೈರುತ್3 ಲಕ್ಷ ಮಂದಿ ನಿರಾಶ್ರಿತರು, ನರಕವಾದ ಲೆಬನಾನ್ ರಾಜಧಾನಿ ಬೈರುತ್

ಅಮೋನಿಯಂ ನೈಟ್ರೇಟ್ ಸಾಮಾನ್ಯ ರಾಸಾಯನಿಕವಲ್ಲ. ಸಾಮಾನ್ಯ ತಾಪಮಾನದಲ್ಲಿ ಅಮೋನಿಯಂ ನೈಟ್ರೇಟ್ ಶಾಂತ ಮೂರ್ತಿಯಂತೆ ಇರುತ್ತದೆ. ಆದರೆ ಒಂದಿಷ್ಟು ಎಡವಟ್ಟಾದರೂ, ಪರಿಸ್ಥಿತಿ ನಿಯಂತ್ರಣಕ್ಕೆ ಸಿಗೋದೆ ಇಲ್ಲ. ಇದು ಬೈರುತ್ ಘಟನೆಗೆ ಮಾತ್ರ ಸಂಬಂಧಿಸಿದ್ದಲ್ಲ. ಈ ಹಿಂದೆಯೂ ಅಮೋನಿಯಂ ನೈಟ್ರೇಟ್ ಹಲವು ಭೀಕರ ದುರಂತಗಳಿಗೆ ಹೊಣೆಯಾಗಿತ್ತು. ತಣ್ಣಗೆ ಇರುವ ಅಮೋನಿಯಂ ನೈಟ್ರೇಟ್‌ನ ಕೆಣಕಿದರೆ ಮಾತ್ರ ನಡೆಯಬಾರದ್ದು ನಡೆದುಹೋಗುತ್ತದೆ.

 ಹೈದರಾಬಾದಿನ ಸಾಲ್ವೋ ಸ್ಫೋಟಕ ಸಂಸ್ಥೆ ವಶಕ್ಕೆ

ಹೈದರಾಬಾದಿನ ಸಾಲ್ವೋ ಸ್ಫೋಟಕ ಸಂಸ್ಥೆ ವಶಕ್ಕೆ

ಪ್ರತಿ ದಿನ 10 ಕಂಟೈನರ್ ಗಳು ಅಮೋನಿಯಂ ನೈಟ್ರೇಟ್ ಹೊತ್ತು ಹೈದರಾಬಾದಿಗೆ ಸಾಗಿಸಲಿವೆ. ಸುಮಾರು 1.80 ಕೋಟಿ ರು ಮೌಲ್ಯದ ಈ ರಾಸಾಯನಿಕವನ್ನು ರಸಗೊಬ್ಬರ ಎಂದು ಕೊರಿಯಾದಿಂದ ಶ್ರೀ ಅಮ್ಮನ್ ಕೆಮಿಕಲ್ಸ್ ಆಮದು ಮಾಡಿಕೊಂಡಿತ್ತು.

ಸ್ಫೋಟಕ ಗ್ರೇಡ್ ಅಮೋನಿಯಂ ನೈಟ್ರೇಟ್ ಅನ್ನು ರಸಗೊಬ್ಬರ ಗ್ರೇಡ್ ಎಂದು ಆಮದು ಮಾಡಿಕೊಳ್ಳಲಾಗಿದ್ದು, ಇದಕ್ಕೆ ಸೂಕ್ತ ಲೈಸನ್ ಕೂಡಾ ಹೊಂದಿಲ್ಲ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಈಗ ಹೈದರಾಬಾದಿನ ಸಾಲ್ವೋ ಸ್ಫೋಟಕ ಹಾಗೂ ಕೆಮಿಕಲ್ಸ್ ಆನ್ ಲೈನ್ ಹರಾಜಿನಲ್ಲಿ ಈ ಅಮೋನಿಯಂ ನೈಟ್ರೇಟ್ ಖರೀದಿಸಿದೆ.

ವಿಷಕಾರಿ ಅನಿಲಗಳು ಉತ್ಪತ್ತಿ ಆಗುತ್ತವೆ

ವಿಷಕಾರಿ ಅನಿಲಗಳು ಉತ್ಪತ್ತಿ ಆಗುತ್ತವೆ

ಅಮೋನಿಯಂ ನೈಟ್ರೇಟ್ ಸ್ಫೋಟಗೊಂಡರೆ ತಕ್ಷಣಕ್ಕೆ ಕೆಲವರನ್ನು ಮಾತ್ರ ಕೊಂದು ಹಾಕುತ್ತದೆ. ಆದರೆ ದುರಂತದಲ್ಲಿ ಬದುಕುಳಿದವರ ಪಾಡು ಇನ್ನೂ ಕರುಣಾಜನಕ. ಏಕೆಂದರೆ ಅಮೋನಿಯಂ ನೈಟ್ರೇಟ್ ಸ್ಫೋಟಗೊಳ್ಳುವ ಸಂದರ್ಭದಲ್ಲಿ ನೈಟ್ರೋಜೆನ್ ಆಕ್ಸೈಡ್‌ನಂತಹ ವಿಷಕಾರಿ ಅನಿಲಗಳು ಉತ್ಪತ್ತಿ ಆಗುತ್ತವೆ. ಇದರ ಪರಿಣಾಮ ಕೆಂಪು ಹಾಗೂ ಕಂದು ಬಣ್ಣದ ಹೊಗೆ ಮುಗಿಲೆತ್ತರಕ್ಕೆ ಹಬ್ಬುತ್ತದೆ. ಈಗ ಬೈರುತ್‌ ಬ್ಲಾಸ್ಟ್‌ನಲ್ಲಿ ನಡೆದಿದ್ದು ಕೂಡ ಇದೆ.

ಊಹೆಗೂ ನಿಲುಕದಷ್ಟು ಗಂಭೀರ ಸ್ಫೋಟ ಸಾಧ್ಯತೆ

ಊಹೆಗೂ ನಿಲುಕದಷ್ಟು ಗಂಭೀರ ಸ್ಫೋಟ ಸಾಧ್ಯತೆ

ಸುಮಾರು 170 ಡಿಗ್ರಿ ಫ್ಯಾರನ್ ಹೀಟ್‌ನಷ್ಟು ಬಿಸಿ ತಾಗಿದರೆ ಸಾಕು ಅಮೋನಿಯಂ ನೈಟ್ರೇಟ್ ಒಳಗೆ ದಹನ ಕ್ರಿಯೆಗೆ ಚಾಲನೆ ಸಿಗುತ್ತದೆ. ಹೀಗೆ ಆರಂಭವಾಗುವ ರಾಸಾಯನಿಕ ಕ್ರಿಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಾ ಸಾಗಿ ನೈಟ್ರೋಜೆನ್, ಆಮ್ಲಜನಕ ಹಾಗೂ ನೀರಿನ ಆವಿ ಬಿಡುಗಡೆ ಆಗುತ್ತೆ. ನಿಮಗೆ ನೆನಪಿರಲಿ ಇಷ್ಟು ರಾಸಾಯನಿಕಗಳು ಮಾತ್ರ ರಿಲೀಸ್ ಆಗಿದ್ದರೆ ಅಮೋನಿಯಂ ನೈಟ್ರೇಟ್ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯತೆ ಇರಲಿಲ್ಲ. ಆದರೆ ಇದರ ಜೊತೆಗೆ ಊಹೆಗೂ ನಿಲುಕದಷ್ಟು ಪ್ರಮಾಣದಲ್ಲಿ ಶಕ್ತಿ ಸ್ಫೋಟದ ರೂಪದಲ್ಲಿ ಬಿಡುಗಡೆಯಾಗುತ್ತದೆ. ಈಗ ಲೆಬನಾನ್ ರಾಜಧಾನಿ ಬೈರತ್‌ನಲ್ಲೂ ಇದೇ ಆಗಿರುವುದು. ಆದರೆ ಅದೃಷ್ಟವಶಾತ್ ಅಲ್ಲಿ ಸಂಗ್ರಹಿಸಿದ್ದ ಅಷ್ಟೂ ಅಮೋನಿಯಂ ನೈಟ್ರೇಟ್ ಹೊತ್ತಿ ಉರಿದಿಲ್ಲ. ಹೀಗೆ ಆಗಿದ್ದರೆ ಬೈರುತ್ ಪರಿಸ್ಥಿತಿ ಊಹೆಗೂ ನಿಲುಕದಷ್ಟು ಗಂಭೀರವಾಗಿರುತ್ತಿತ್ತು.

ಆತಂಕ ವರ್ಗಾವಣೆಯಾಗಿದೆ ಅಷ್ಟೇ

ಆತಂಕ ವರ್ಗಾವಣೆಯಾಗಿದೆ ಅಷ್ಟೇ

ಅಮೋನಿಯಂ ನೈಟ್ರೇಟ್ ವಿಧ್ವಂಸಕ ಕೃತ್ಯಕ್ಕೆ ಬೈರುತ್ ಒಂದು ಸಾಕ್ಷಿ ಮಾತ್ರ. ಇತಿಹಾಸದಲ್ಲಿ ಇದಕ್ಕೂ ಭಯಾನಕ ಘಟನೆಗಳು ಸಂಭವಿಸಿವೆ. 2015ರಲ್ಲಿ ಚೀನಾ ರಾಜಧಾನಿ ಬೀಜಿಂಗ್‌ನ ಬಂದರಿನಲ್ಲಿ ಸುಮಾರು 800 ಟನ್‌ನಷ್ಟು ಅಮೋನಿಯಂ ನೈಟ್ರೇಟ್ ರಾಕೆಟ್‌ಗಳು ಬ್ಲಾಸ್ಟ್ ಆಗಿದ್ದವು. ಪರಿಣಾಮ 173 ಚೀನಿಯರು ಮೃತಪಟ್ಟಿದ್ದರು. 1947ರಲ್ಲಿ ಅಮೆರಿಕದ ಟೆಕ್ಸಾಸ್ ಸಿಟಿ ಬಂದರಿನಲ್ಲಿ 2,300 ಟನ್ ಅಮೋನಿಯಂ ನೈಟ್ರೇಟ್ ಇದ್ದ ಹಡಗು ಸ್ಫೋಟಿಸಿತ್ತು. ಘಟನೆಯಲ್ಲಿ 581 ಜನ ಪ್ರಾಣಬಿಟ್ಟಿದ್ದರು. ಈ ಘಟನೆಗಳೆಲ್ಲಾ ಉದಾಹರಣೆಗಳಷ್ಟೇ, ಇದರಿಂದ ಎಚ್ಚೆತ್ತುಕೊಳ್ಳಬೇಕಿದೆ. ಚೆನ್ನೈನ ಹೊರವಲಯದಲ್ಲಿ ಇದೆ ಎನ್ನಲಾಗುತ್ತಿರುವ ಅಮೋನಿಯಂ ನೈಟ್ರೇಟ್ ಕುರಿತು ಸೂಕ್ತ ತನಿಖೆ ನಡೆಸಿ, ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಸದ್ಯ ಇದು ಹೈದರಾಬಾದಿಗೆ ರವಾನೆಯಾಗಿದ್ದು, ಆತಂಕ ವರ್ಗಾವಣೆಯಾಗಿದೆ ಅಷ್ಟೇ.

English summary
Ammonium nitrate weighing 740 tonnes stored in 37 containers at a container freight station (CFS) in Chennai will be moved to Hyderabad in a phased manner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X