ಮುಖೇಶ್ ಅಂಬಾನಿ ಮಗನ ಮದುವೆಗೆ ಸ್ಟಾಲಿನ್ ಗೆ ಆಹ್ವಾನ
ಚೆನ್ನೈ, ಫೆಬ್ರವರಿ 12: ರಿಲಯನ್ಸ್ ಕಂಪನಿ ಮುಖ್ಯಸ್ಥ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರು ಮಗಳ ಮದುವೆ ಬಳಿಕ ದಂಪತಿ ಇದೀಗ ಮಗನ ಮದುವೆಗೂ ಸಿದ್ದತೆ ನಡೆಸಿದ್ದಾರೆ. ಈ ದಂಪತಿ ಪುತ್ರ ಆಕಾಶ್ ಅಂಬಾನಿ ಮದುವೆ ಕರೆಯೋಲೆಯನ್ನು ಗಣ್ಯರಿಗೆ ಖುದ್ದು ನೀಡಿ ಆಹ್ವಾನಿಸುತ್ತಿದ್ದಾರೆ.
ಆಕಾಶ್ ಅವರು ಬಾಲ್ಯದ ಗೆಳತಿ ಶ್ಲೋಕಾ ಮೆಹ್ತಾ ಜೊತೆ ಮುಂದಿನ ತಿಂಗಳು ಮದುವೆಯಾಗಲಿದ್ದಾರೆ. ಮದುವೆ ಆಮಂತ್ರಣ ಪತ್ರಿಕೆಯನ್ನು ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪೂಜೆ ಮಾಡಿಸಿರುವ ಅಂಬಾನಿ ದಂಪತಿ ನಂತರ ಚೆನ್ನೈಗೆ ತೆರಳಿದ್ದು ವಿಶೇಷ.
ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ರನ್ನು ಭೇಟಿಯಾಗಿ ಆಮಂತ್ರಣ ಪತ್ರ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ. ಸ್ಟಾಲಿನ್ ಅವರು ಟ್ವೀಟ್ ಮಾಡಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಇಟಲಿಯ ಲೇಕ್ ಕೊಮೊದಲ್ಲಿ ನಡೆದ ಇಶಾ ಅಂಬಾನಿಯ ನಿಶ್ಚಿತಾರ್ಥ ಸಂಭ್ರಮದಲ್ಲಿ ಆಕಾಶ್ ಹಾಗೂ ಶ್ಲೋಕಾ ಕಾಣಿಸಿಕೊಂಡಿದ್ದರು. ಸಂಗೀತ್ ಸಮಾರಂಭದಲ್ಲಿ ನರ್ತಿಸಿ ಸಂಭ್ರಮಿಸಿದ್ದರು.
ವಜ್ರ ಉದ್ಯಮಿ ರಸೆಲ್ ಮೆಹ್ತಾ ಅವರ ಪುತ್ರಿ ಶ್ಲೋಕಾ ಮೆಹ್ತಾ ಅವರು ಆಕಾಶ್ ರನ್ನು ಮುಂದಿನ ತಿಂಗಳು ವರಿಸಲಿದ್ದಾರೆ. ಇಶಾ ಹಾಗೂ ಆನಂತ್ ಪಿರಮಾಲ್ ಅವರ ಮದುವೆ ಕಳೆದ ಡಿಸೆಂಬರ್ ನಲ್ಲಿ ಭರ್ಜರಿಯಾಗಿ ನೆರವೇರಿತು. ಅಮಿತಾಬ್ ಬಚ್ಚನ್, ರಜನಿಕಾಂತ್ ಶಾರುಖ್ ಖಾನ್, ಅಮೀರ್ ಖಾನ್, ಯುಎಸ್ ನ ಮಾಜಿ ಕಾರ್ಯದರ್ಶಿ ಹಿಲ್ಲರಿ ಕ್ಲಿಂಟನ್, ಗೃಹ ಸಚಿವ ರಾಜನಾಥ್ ಸಿಂಗ್, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಮನೇಕಾ ಗಾಂಧಿ, ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಹಲವಾರು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.












Click it and Unblock the Notifications