ಗಜ ಚಂಡಮಾರುತ ಭಯ: ರಾಮೇಶ್ವರದ ಶಾಲೆ, ಕಾಲೇಜುಗಳಿಗೆ ಗುರುವಾರ ರಜೆ
ಚೆನ್ನೈ, ನವೆಂಬರ್ 14: ತಮಿಳುನಾಡು ಹಾಗೂ ಆಂಧ್ರ ಪ್ರದೇಶಕ್ಕೆ ಗಜ ಚಂಡ ಮಾರುತ ಅಪ್ಪಳಿಸಲಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ತಮಿಳುನಾಡಿನ ರಾಮೇಶ್ವರದ ಶಾಲಾ, ಕಾಲೇಜುಗಳಿಗೆ ಗುರುವಾರ ನವೆಂಬರ್ 15ರಂದು ರಜೆ ಘೋಷಿಸಲಾಗಿದೆ.
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಗಜ ಚಂಡ ಮಾರುತ 150 ಕೆಎಂಪಿಎಚ್ ವೇಗದಲ್ಲಿ ತಮಿಳುನಾಡನ್ನು ಪ್ರವೇಶಿಸುತ್ತಿದೆ. ಹಿಂಗಾರಿನಲ್ಲಿ ಉತ್ತಮ ಮಳೆಯನ್ನು ನಿರೀಕ್ಷಿಸಿದ್ದ ತಮಿಳುನಾಡು ಇದೀಗ ಗಜ ಚಂಡ ಮಾರುತದಿಂದ ಭಯಪಡತ್ತಿದೆ. ಇನ್ಯಾವ ಅನನಾಹುತವನ್ನು ಸೃಷ್ಟಿಸಲಿದೆ ಎನ್ನುವ ಭಯ ಕಾಡುತ್ತಿದೆ.
ತಮಿಳುನಾಡು, ಪುದುಚೇರಿ, ಕೇರಳ, ರಾಯಲ್‌ಸೀಮಾ, ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಮುಂದಿನ 12 ಗಂಟೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ದೊರೆತ ಕಾರಣ ರಾಮೇಶ್ವರದಲ್ಲಿ ರಜೆ ಘೋಷಿಸಲಾಗಿದೆ.

ಅಂಡಮಾನ್ ನಿಕೋಬಾರ್ ಬಳಿ ಸೃಷ್ಟಿಯಾಗಿರುವ ಚಂಡಮಾರುತದ ಪರಿಣಾಮ ನಗರಕ್ಕೆ ಸ್ವಲ್ಪ ಮಟ್ಟಿಗೆ ತಟ್ಟಲಿದೆ. ಇದರಿಂದಾಗಿ ಅಲ್ಲಲ್ಲಿ ಮೂರು ದಿನ ಸಾಧಾರಣ ಮಳೆಯಾಗಬಹುದು ಎಂದು ಹವಮಾನ ಇಲಾಖೆ ಹೇಳಿದೆ.
ಹಿಂಗಾರು ದುರ್ಬಲವಾದ ಈ ಸಮಯದಲ್ಲಿ ಗಜ ಚಂಡ ಮಾರುತ ಆಗಮನವಾಗಿರುವುದರಿಂದ ನಗರದಲ್ಲಿ ಸಾಧಾರಣ ಮಳೆಯಾಗಬಹುದು ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸಮಿತಿ ಮಾಹಿತಿ ನೀಡಿದೆ.












Click it and Unblock the Notifications