ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಎಐಎಡಿಎಂಕೆ ನಾಯಕತ್ವ; ಪನ್ನೀರ್ ಸೆಲ್ವಂ ಪರ ಹೈಕೋರ್ಟ್ ತೀರ್ಪು

|
Google Oneindia Kannada News

ಚೆನ್ನೈ, ಆಗಸ್ಟ್ 17: ''ಎಐಎಡಿಎಂಕೆ ನಾಯಕತ್ವದ ಕಿತ್ತಾಟದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಇ ಪಳನಿಸ್ವಾಮಿ ಅವರನ್ನು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿರುವುದು ಸಿಂಧುವಾಗಿಲ್ಲ'' ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.

ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಎಐಎಡಿಎಂಕೆ ಜುಲೈ 11 ರಂದು ಆಯ್ಕೆ ಮಾಡಿತ್ತು. ಎಐಎಡಿಎಂಕೆ ನಡೆಸಿದ ಸಾಮಾನ್ಯ ಮಂಡಳಿ ಸಭೆಯನ್ನು ಮದ್ರಾಸ್ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.

ಎಐಡಿಎಎಂಕೆ ಪಕ್ಷದ ಮೇಲೆ ಪಳನಿಸ್ವಾಮಿ ಹಿಡಿತ: ಪನ್ನೀರ್‌ ಸೆಲ್ವಂ ಉಚ್ಛಾಟನೆಎಐಡಿಎಎಂಕೆ ಪಕ್ಷದ ಮೇಲೆ ಪಳನಿಸ್ವಾಮಿ ಹಿಡಿತ: ಪನ್ನೀರ್‌ ಸೆಲ್ವಂ ಉಚ್ಛಾಟನೆ

ಇ ಪಳನಿಸ್ವಾಮಿ ಅವರನ್ನು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದನ್ನು, ಎಐಎಡಿಎಂಕೆ ಜನರಲ್ ಕೌನ್ಸಿಲ್ ಸಭೆಯನ್ನು ಕರೆಯುವಲ್ಲಿ ಕಾನೂನುಬದ್ಧತೆ ಮತ್ತು ಬೈಲಾಗಳ ಉಲ್ಲಂಘನೆಯನ್ನು ಓ ಪನ್ನೀರ್ ಸೆಲ್ವಂ ಪ್ರಶ್ನಿಸಿದ್ದರು.

AIADMK Power conflict: Major Court Setback For E Palaniswami

ಈಗ ಓ ಪನ್ನೀರಸೆಲ್ವಂ ಪರವಾಗಿ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದ್ದು, ಜೂನ್ 23 ರ ಹಿಂದಿನ ಯಥಾಸ್ಥಿತಿಯನ್ನು ಕಾಪಾಡುವಂತೆ ತಿಳಿಸಿದೆ. ಜೊತೆಗೆ ಎಐಎಡಿಎಂಕೆಯ ಹೊಸ ಜನರಲ್ ಕೌನ್ಸಿಲ್ ಸಭೆಯನ್ನು ನಡೆಸಲು ಸಹ ಆದೇಶಿಸಿದೆ.

ಮದ್ರಾಸ್ ಹೈಕೋರ್ಟ್ ಆದೇಶದ ಬೆನ್ನಲ್ಲೇ ಚೆನ್ನೈನಲ್ಲಿರುವ ಓ ಪನ್ನೀರಸೆಲ್ವಂ ಅವರ ನಿವಾಸದ ಹೊರಗೆ ಅಭಿಮಾನಿಗಳು ಮತ್ತು ಬೆಂಬಲಿಗರು ಸಂಭ್ರಮಾಚರಣೆ ನಡೆಸಿದ್ದಾರೆ.

ಎಐಡಿಎಂಕೆ ಪಕ್ಷದ ಎಲ್ಲಾ ಹುದ್ದೆಗಳಿಂದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಅವರನ್ನು ಜುಲೈ 11 ಉಚ್ಛಾಟನೆ ಮಾಡಲಾಗಿತ್ತು. ಎಡಪ್ಪಾಡಿ ಪಳನಿಸ್ವಾಮಿ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಮೇಲೆ ಹಿಡಿತ ಸಾಧಿಸಿದ ನಂತರ ಈ ನಿರ್ಣಯ ಕೈಗೊಳ್ಳಲಾಗಿತ್ತು.

AIADMK Power conflict: Major Court Setback For E Palaniswami

2017ರಲ್ಲಿ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ನಿಧನದ ನಂತರ ಪಕ್ಷದ ಮೇಲೆ ಹಿಡಿತ ಸಾಧಿಸಲು, ಅವರ ಉತ್ತರಾಧಿಕಾರಿ ಎಂದು ಬಿಂಬಿಸಿಕೊಳ್ಳಲು ಇ ಪಳನಿಸ್ವಾಮಿ ಮತ್ತು ಒ ಪನ್ನೀರ್ ಸೆಲ್ವಂ ನಡುವೆ ತಿಕ್ಕಾಟ ಆರಂಭವಾಗಿತ್ತು. ಜಯಲಲಿತಾ ಮರಣದ ನಂತರ ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿದ್ದರು, ನಂತರ ಪಳನಿಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಮೇ 2021ರಲ್ಲಿ ನಡೆದ ಚುನಾವಣೆಯಲ್ಲಿ ಎಐಡಿಎಂಕೆ ಅಧಿಕಾರ ಕಳೆದುಕೊಂಡಿದೆ.

Recommended Video

ಮೆಟ್ರೋ ರೈಲಿನಲ್ಲಿ ಸೀಟ್ ಬಿಡ್ಲಿಲ್ಲ ಅಂತ ಮಹಿಳೆಯರ ಕಿತ್ತಾಟದ ವಿಡಿಯೋ ವೈರಲ್ | Oneindia Kannada

English summary
AIADMK Power conflict: Madras High Court orders Palaniswami's appointment as the party's general secretary is not valid. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X