ಎಐಎಡಿಎಂಕೆ ಮುಖ್ಯಸ್ಥೆ ಶಶಿಕಲಾ ನಟರಾಜನ್ ವ್ಯಕ್ತಿಚಿತ್ರ

Posted By:
Subscribe to Oneindia Kannada

ಚೆನ್ನೈ, ಫೆಬ್ರವರಿ 06: ವಿವೇಕಾನಂದನ್ ಕೃಷ್ಣವೇಣಿ ಶಶಿಕಲಾ ಅಲಿಯಾಸ್ ಶಶಿಕಲಾ ನಟರಾಜನ್ ಅವರು ತಮಿಳನಾಡಿನ ನಿಯೋಜಿತ ಮುಖ್ಯಮಂತ್ರಿಯಾಗಿದ್ದಾರೆ. ಶಾಸಕಾಂಗ ಪಕ್ಷದ ನಾಯಕಿ, ಎಐಎಡಿಎಂಕೆ ಅಧಿನಾಯಕಿ ಶಶಿಕಲಾ ಅವರ ವೃತ್ತಿ ಬದುಕಿನ ಹಿನ್ನೋಟ ಇಲ್ಲಿದೆ...

ದಿವಂಗತ ಜೆ ಜಯಲಲಿತಾ ಅವರ ಹೆಸರು ಹೇಳಿದ ತಕ್ಷಣಕ್ಕೆ ನೆನಪಾಗುವ ಹೆಸರು ಶಶಿಕಲಾ ನಟರಾಜನ್. ರಾಜಕೀಯದಲ್ಲಿ ಯಾರನ್ನು ನಂಬದ ಪರಿಸ್ಥಿತಿ ಇವರಿಬ್ಬರು ಗಳಸ್ಯ-ಕಂಠಸ್ಯ ಎಂಬಂತೆ ಸುಖ ದುಃಖದಲ್ಲಿ ಭಾಗಿಯಾದವರು. ಈಗ ಜೆ ಜಯಲಲಿತಾ ಅವರು ಕಾಲವಾದ ಮೇಲೆ ಅವರ ಕನಸನ್ನು ನನಸು ಮಾಡಲು ಶಶಿಕಲಾ ಅವರು ಬೃಹತ್ ಹೆಜ್ಜೆ ಇಡುತ್ತಿದ್ದಾರೆ.

61 ವರ್ಷ ವಯಸ್ಸಿನ ಶಶಿಕಲಾ ಅವರಿಗೆ ಯಾವುದೇ ರಾಜಕೀಯ ಹಿನ್ನಲೆಯಿಲ್ಲ. ಅಧಿಕೃತವಾಗಿ ಪಕ್ಷದ ಅಧಿಪತ್ಯ ಪಡೆದು ಒಂದು ತಿಂಗಳು ಕಳೆದಿರಬಹುದು ಅಷ್ಟೇ. ಆದರೆ, ಈಗ ಮುಖ್ಯಮಂತ್ರಿಯಾಗಿ ರಾಜ್ಯಭಾರ ನಡೆಸಲು ಸಿದ್ಧರಾಗಿದ್ದಾರೆ ತಮಿಳರ ಪಾಲಿನ 'ಚಿನ್ನಮ್ಮ'. ಶಶಿಕಲಾ ಬದುಕಿನ ಪ್ರಮುಖ ಅಂಶಗಳು ಮುಂದಿವೆ..

ಕೌಟುಂಬಿಕ ಹಿನ್ನಲೆ

ಕೌಟುಂಬಿಕ ಹಿನ್ನಲೆ

1957ರಲ್ಲಿ ತಿರುತಿರೈಪೂಂಡಿಯಲ್ಲಿ ಜನನ, ತಂದೆ ವಿವೇಕಾನಂದನ್ ಮುದಲಿಯಾರ್ ಹಾಗೂ ತಾಯಿ ಕೃಷ್ಣವೇಣಿ. ತಿರುವರುರ್ ಜಿಲ್ಲೆಯ ತಿರುತಿರೈಪೂಂಡಿಯಿಂದ ಕುಟುಂಬ ಮನ್ನಾರ್ ಗುಡಿಗೆ ಬಂದು ನೆಲೆಸಿತು. ತಮಿಳುನಾಡು ಸರ್ಕಾರದಲ್ಲಿ PRO ಅಧಿಕಾರಿಯಾಗಿದ್ದ ಎಂ ನಟರಾಜನ್ ರನ್ನು ವರಿಸೈದರು. ಇಬ್ಬರ ಮದುವೆಗೆ ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಸಾಕ್ಷಿಯಾಗಿದ್ರು.

ರಾಜಕೀಯಕ್ಕೆ ಸೇರಲು ಪತಿಯೇ ಪ್ರೇರಣೆ

ರಾಜಕೀಯಕ್ಕೆ ಸೇರಲು ಪತಿಯೇ ಪ್ರೇರಣೆ

ಎಂಜಿ ರಾಮಚಂದ್ರನ್ ಅವರು ಸಿಎಂ ಆಗಿದ್ದ ಕಾಲದಲ್ಲಿ ಕಡಲೂರಿನ ಜಿಲ್ಲಾಧಿಕಾರಿಯಾಗಿ ವಿಎಸ್ ಚಂದ್ರಲೇಖ ಕಾರ್ಯನಿರ್ವಹಿಸುತ್ತಿದ್ದರು. ಡಿಸಿ ಚಂದ್ರಲೇಖ ನೆರವಿನಿಂದ 1980ರಲ್ಲಿ ಪಕ್ಷದ ನಂಟು ಬೆಳೆಸಲು ನೆರವು ಕೋರಿದರು. ಆಗ ಪಕ್ಷದ ಕಾರ್ಯದರ್ಶಿಯಾಗಿದ್ದ ಜಯಲಲಿತಾ ಜತೆ ಶಶಿಕಲಾ ಅವರ ಸ್ನೇಹ ಬೆಳೆಯಿತು.

ಜಯಾ ಗೆಳತಿಯಾಗಿ ಗುರುತಿಸಿಕೊಂಡ್ರು

ಜಯಾ ಗೆಳತಿಯಾಗಿ ಗುರುತಿಸಿಕೊಂಡ್ರು

ಪಕ್ಷದ ಕಾರ್ಯ ಚಟುವಟಿಕೆಗಳನ್ನು ಚಿತ್ರೀಕರಿಸಲು ಬಂದ ಶಶಿಕಲಾ ಅವರು ನಂತರ ಜಯಾ ಅವರ ಆಪ್ತ ಸಖಿಯಾಗಿಬಿಟ್ಟರು. ಈಕೆ ನನ್ನ ಸೋದರಿ ಎಂದು ಜಯಾ ಬಹಿರಂಗವಾಗಿ ಘೋಷಿಸಿದರು. ಇಬ್ಬರು ಸುಖ ದುಃಖ, ಹಗರಣಗಳಲ್ಲೂ ಪಾಲುದಾರರು, ಸಂಬಂಧ ಬೆಳೆಸಿದರು. ಶಶಿಕಲಾ ಅವರ ಸಂಬಂಧಿ ಸುಧಾಕರನ್ ರನ್ನು ಮಗನಾಗಿ ಜಯಲಲಿತಾ ದತ್ತು ಪಡೆದರು.

ಮತ್ತೆ ಪಕ್ಷಕ್ಕೆ ಎಂಟ್ರಿ

ಮತ್ತೆ ಪಕ್ಷಕ್ಕೆ ಎಂಟ್ರಿ

2011ರ ಡಿಸೆಂಬರ್ 9ರಂದು ಪಕ್ಷದ ನಿಯಮ ಪಾಲಿಸದ ಹಿನ್ನಲೆಯಲ್ಲಿ ಪಕ್ಷದಿಂದ ಹೊರಹಾಕಲಾಯಿತು. ಶಶಿಕಲಾ ನಟರಾಜನ್, ಟಿಟಿ ವಿ ದಿನಕರನ್, ಎಲ್ಲರನ್ನು ಹೊರಹಾಕಲಾಯಿತು. ನಂತರ ಕ್ಷಮಾಪಣೆ ಪತ್ರ ಪಡೆದು ಪಕ್ಷದೊಳಗೆ ಸೇರಿಸಿಕೊಳ್ಳಲಾಯಿತು.


ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
AIADMK General Secretary Sasikala Natarajan Profile: VK Sasikala elected legislature party leader, paving the way for her to become the Chief Minister of Tamil Nadu.
Please Wait while comments are loading...