ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಎಂಕೆ ಚಿಹ್ನೆಯಿದ್ದ ಶರ್ಟ್ ಧರಿಸಿ ಮತದಾನ: ಉದಯನಿಧಿ ವಿರುದ್ಧ ದೂರು

|
Google Oneindia Kannada News

ಚೆನ್ನೈ, ಏಪ್ರಿಲ್ 6: ಪಕ್ಷದ ಚಿಹ್ನೆಯಿದ್ದ ಶರ್ಟ್ ಧರಿಸಿ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ವಿರುದ್ಧ ದೂರು ದಾಖಲಾಗಿದೆ.

ಎಐಎಡಿಎಂಕೆಯ ಬಾಬು ಮುರುಗವೇಲು ಎಂಬುವವರು ದೂರು ನೀಡಿದ್ದಾರೆ. ಅವರು ಪಕ್ಷದ ಚಿಹ್ನೆಯಿದ್ದ ಶರ್ಟ್ ಧರಿಸಿದ್ದಾರೆ ಇದು ಚುನಾವಣೆ ನೀತಿ ಸಂಹಿತೆಗೆ ವಿರುದ್ಧವಾದದ್ದು ಹಾಗಾಗಿ ಉದಯನಿಧಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಾಬು ಒತ್ತಾಯಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿ ಶಶಿಕಲಾ ಹೆಸರಿಲ್ಲ; ಚುನಾವಣಾಧಿಕಾರಿಗೆ ದೂರುಮತದಾರರ ಪಟ್ಟಿಯಲ್ಲಿ ಶಶಿಕಲಾ ಹೆಸರಿಲ್ಲ; ಚುನಾವಣಾಧಿಕಾರಿಗೆ ದೂರು

ಈ ಕುರಿತು ಪೋಲ್ ಪ್ಯಾನಲ್ ಹೇಳಿಕೆ ನೀಡಿದ್ದು, ಅವರು ಧರಿಸಿದ್ದ ಶರ್ಟ್ ಮೇಲಿದ್ದ ಚಿಹ್ನೆ ಡಿಎಂಕೆಯ ಪಕ್ಷದ ಚಿಹ್ನೆಯಲ್ಲಿ ಅದು ಡಿಎಂಕೆ ಯೂಥ್ ವಿಂಗ್ ಚಿಹ್ನೆ ಎಂದು ಹೇಳಿದ್ದಾರೆ.

AIADMK Files Complaint Against Udhayanidhi Stalin For Wearing DMK Logo While Casting Vote

ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಪುತ್ರನಾಗಿರುವ ಉದಯನಿಧಿ ಸ್ಟಾಲಿನ್ ಈ ಬಾರ ಚೆಪಾಕ್-ತಿರುವಳ್ಳಿಕೇನಿಯಿಂದ ಸ್ಪರ್ಧಿಸಿದ್ದಾರೆ. ತಮಿಳುನಾಡಿನಲ್ಲಿ ಇಂದು ಚುನಾವಣೆ ನಡೆಯುತ್ತಿದ್ದು, ಒಂದೇ ಹಂತದಲ್ಲಿ ಚುನಾವಣೆ ಪೂರ್ಣಗೊಳ್ಳಲಿದೆ.

ಈ ಮೊದಲು ಸ್ಟಾಲಿನ್‌ ಬೆಂಬಲಿಗರು ಗೂಗಲ್​ ಪೇ ಮೂಲಕ ಮತದಾರರಿಗೆ 5,000 ರೂ. ವಿತರಿಸುತ್ತಿದ್ದಾರೆ. ಪಶ್ಚಿಮ ತಿರುಚಿರಪಲ್ಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕೆ ಎನ್​ ನೆಹರೂ, ಚೆಪಾಕ್-ತಿರುವಳ್ಳಿಕೆಣಿ ಕ್ಷೇತ್ರದ ಅಭ್ಯರ್ಥಿ ಹಾಗೂ ಸ್ಟಾಲಿನ್ ಪುತ್ರ ಉದಯನಿಧಿ, ಇ ವಿ ವೇಲು (ತಿರುವಣ್ಣಾಮಲೈ) ಮತ್ತು ದುರೈ ಮುರುಗನ್ (ಕಟ್ಪಾಡಿ)-ಇವರುಗಳು ತಮ್ಮ ಬೆಂಬಲಿಗರಿಂದ ಒಬ್ಬೊಬ್ಬ ಮತದಾರರಿಗೆ 2,000 ರೂ. ಮತ್ತು 5,000 ರೂ.ಗಳವರೆಗೆ ಹಣ ವಿತರಿಸುತ್ತಿದ್ದಾರೆ ಎಂದು ಬಾಬು ಮುರುಗವೆಲ್ ಆರೋಪ ಮಾದ್ದರು.

ತಮಿಳುನಾಡಿನಲ್ಲಿ ನಾಳೆ ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ. ಡಿಎಂಕೆ-ಕಾಂಗ್ರೆಸ್-ಸಿಪಿಎಂ ಹಾಗೂ ಬಿಜೆಪಿ-ಎಐಎಡಿಎಂಕೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ. ಮೇ 2ರಂದು ಫಲಿತಾಂಶ ಹೊರ ಬೀಳಲಿದೆ .

English summary
With polling underway in Tamil Nadu, a complaint has been filed against Udhayanidhi Stalin for wearing a shirt with the DMK logo while going to cast his vote. The ruling AIADMK has accused Udhayanidhi Stalin of violating the code of conduct by openly sporting his party's logo at the poll booth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X