• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀದೇವಿ ಸತ್ತಾಗ ಸಾಂಗ್ಸ್ ಹಾಕಿದ್ರಿ, ಸನ್ನಿ ಸತ್ತಾಗ ಏನ್ಮಾಡ್ತೀರಾ?

By Mahesh
|
Google Oneindia Kannada News

Recommended Video

   Array

   ಬೆಂಗಳೂರು, ಫೆಬ್ರವರಿ 28: ಸೂಪರ್ ಸ್ಟಾರ್ ಶ್ರೀದೇವಿ ಸಾವಿನ ಸುದ್ದಿಯನ್ನು ಸರಿಯಾಗಿ ಪ್ರಸಾರ ಮಾಡುವಲ್ಲಿ ಭಾರತೀಯ ಮಾಧ್ಯಮಗಳು ಸೋತು ಸಾರ್ವಜನಿಕವಾಗಿ ಛೀಮಾರಿ ಹಾಕಿಸಿಕೊಂಡಿದ್ದರ ಬಗ್ಗೆ ಓದಿರಬಹುದು. ಸಾವಿನಲ್ಲೂ ಕ್ರೆಡಿಟ್ ಪಡೆಯಲು ಯತ್ನಿಸಿದ ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಹೇಳಿದ್ದು ನಿಮಗೆ ಗೊತ್ತಿದೆ. ಈಗ ನಟಿ ಕಸ್ತೂರಿಯ ಸರದಿ.

   ಕನ್ನಡದಲ್ಲಿ ಜಾಣ, ತುತ್ತಾ ಮುತ್ತಾ, ಹಬ್ಬ ಚಿತ್ರಗಳಲ್ಲಿ ನಟಿಸಿದ್ದ ತಮಿಳು ನಟಿ ಕಸ್ತೂರಿ ಅವರು ಮಾಡಿದ ಟ್ವೀಟ್ ಚರ್ಚೆಗೊಳಲಾಗುತ್ತಿದ್ದು, ಭಾರಿ ಪ್ರತಿಕ್ರಿಯೆ ಕಂಡು ಬಂದಿದೆ. ಶ್ರೀದೇವಿ ಸತ್ತಾಗ ಅವರು ನಟಿಸಿದ ಚಿತ್ರಗಳ ಸಾಂಗ್ಸ್ ಹಾಕಿದ ಮಾಧ್ಯಮಗಳು, ಮುಂದೊಂದು ದಿನ ಸನ್ನಿ ಲಿಯೋನ್ ಸತ್ತಾಗ ಏನ್ಮಾಡುತ್ತವೇ? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

   ಶ್ರೀದೇವಿಯನ್ನು ಮತ್ತೆ ಮತ್ತೆ ಸಾಯಿಸುತ್ತಿರುವ ಮಾಧ್ಯಮಕ್ಕೆ ಛೀಮಾರಿ! ಶ್ರೀದೇವಿಯನ್ನು ಮತ್ತೆ ಮತ್ತೆ ಸಾಯಿಸುತ್ತಿರುವ ಮಾಧ್ಯಮಕ್ಕೆ ಛೀಮಾರಿ!

   ಕಳೆದ ನಲವತ್ತೈದು ವರ್ಷಗಳಿಂದ ಐದು ಭಾಷೆಗಳಲ್ಲಿ ನಟಿಸಿದ 245 ಚಿತ್ರಗಳ ಬಗ್ಗೆ ಮಾತನಾಡುವ ಬದಲು ಆಕೆಯ ಸಾವಿನ್ನು ವಿವಾದವನ್ನಾಗಿ ಮಾರ್ಪಡಿಸಲು ಮಾಧ್ಯಮಗಳು ಉತ್ಸುಕತೆ ತೋರುತ್ತಿರುವುದು ಸರಿಯೇ ಎಂದು ಸಾಮಾನ್ಯ ಜನರೂ ಪ್ರಶ್ನಿಸುತ್ತಿದ್ದಾರೆ.

   ಶ್ರೀದೇವಿಯವರ ಸಾವಿನ ಬಗ್ಗೆ ಚರ್ಚಿಸುತ್ತಾ, ಮಾಧ್ಯಮಗಳು ತಮ್ಮ ಘನತೆ ಕಳೆದುಕೊಂಡಿವೆ ಎಂದು ಈಗಾಗಲೇ ಅನೇಕ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕಸ್ತೂರಿ ಮಾಡಿದ ಟ್ವೀಟ್ ಹಾಗೂ ಅದಕ್ಕೆ ಬಂದಿರುವ ಪ್ರತಿಕ್ರಿಯೆಗಳು ಮುಂದಿವೆ...

   ಶ್ರೀ ಸತ್ತಾಗ ಸಾಂಗ್ಸ್ ಓಕೆ, ಸನ್ನಿ ಸತ್ತಾಗ ಏನ್ಮಾಡ್ತೀರಾ?

   ಶ್ರೀ ಸತ್ತಾಗ ಸಾಂಗ್ಸ್ ಓಕೆ, ಸನ್ನಿ ಸತ್ತಾಗ ಏನ್ಮಾಡ್ತೀರಾ?

   ಎಲ್ಲಾ ಸುದ್ದಿ ವಾಹಿನಿಗಳು ಶ್ರೀದೇವಿ ಸತ್ತಾಗ ಅವರ ಸಾಂಗ್ಸ್ ಹಾಗೂ ವಿಡಿಯೋ ಕ್ಲಿಪಿಂಗ್ಸ್ ಹಾಕುತ್ತಿವೆ. ಮುಂದೊಂದು ದಿನ ಸನ್ನಿ ಲಿಯೋನ್ ಅವರು ಏನಾಗಬಹುದು ಎಂದು ಕಸ್ತೂರಿ ಅವರು ವಿಡಂಬನೆ ಮಾಡಿದ್ದರು. ಆದರೆ, ಅವರ ಹಾಸ್ಯ ಅರ್ಥವಾಗದ ಅನೇಕ ಮಂದಿ ಕಸ್ತೂರಿ ವಿರುದ್ಧ ತಿರುಗಿ ಬಿದ್ದಿದ್ದು, ಟ್ವೀಟ್ ಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

   ಮಹಿಳಾ ಸಂಘಟನೆ, ಸ್ತ್ರೀವಾದಿಗಳಿಗೆ ಸವಾಲು

   ಇದೇ ರೀತಿ ಒಬ್ಬ ಪುರುಷ ಸೆಲೆಬ್ರಿಟಿ ಏನಾದರೂ ಟ್ವೀಟ್ ಮಾಡಿದ್ದರೆ, ನಿಮ್ಮಗಳ ಪ್ರತಿಕ್ರಿಯೆ ಹೇಗಿರುತ್ತಿತ್ತು. ಮಹಿಳಾ ಸಂಘಟನೆಗಳೇ, ಸ್ತ್ರೀವಾಗಿಗಳಿಗೆ ಸವಾಲು ಹಾಕಿದ್ದಾರೆ.

   ನಾನು ಕಾಪಿ ಹಾಗೂ ಪೇಸ್ಟ್ ಮಾಡಿದೆ ಅಷ್ಟೇ

   ನಾನು ಕಾಪಿ ಹಾಗೂ ಪೇಸ್ಟ್ ಮಾಡಿದೆ ಅಷ್ಟೇ, ಹಾಸ್ಯ ಅರ್ಥ ಮಾಡಿಕೊಳ್ಳದವರಿಗೆ ನಾನೇನು ಪ್ರತಿಕ್ರಿಯಿಸಬೇಕಾಗಿಲ್ಲ ಎಂದಿದ್ದಾರೆ.

   ಕಸ್ತೂರಿ ಹೇಳಿದ್ದು ಮಾಧ್ಯಮಗಳ ಬಗ್ಗೆ

   ಕಸ್ತೂರಿ ಹೇಳಿದ್ದು ಮಾಧ್ಯಮಗಳ ಬಗ್ಗೆ, ಅವರ ಟ್ವೀಟ್ ಅರ್ಥ ಮಾಡಿಕೊಳ್ಳಲು ಆಗದಿದ್ದರೆ ಸುಮ್ಮನಿರಿ ಎಂದು ಕೆಲವು ಮಂದಿ ಬೆಂಬಲಿಸಿದ್ದಾರೆ.

   ಪ್ರತಿ ಟ್ವೀಟ್ ಗೂ ಉತ್ತರಿಸಿದ ಕಸ್ತೂರಿ

   ಪ್ರತಿ ಟ್ವೀಟ್ ಗೂ ಉತ್ತರಿಸಿದ ಕಸ್ತೂರಿ, ಅವರು ಸನ್ನಿಯನ್ನು ಬರೀ ಕವರ್ ಮಾಡುವುದಿಲ್ಲ ಬರೀ ಅನ್ ಕವರ್ ಮಾಡುತ್ತಾರೆ ಎಂದು ಕುಹಕವಾಡಿದ್ದಾರೆ.

   ಸನ್ನಿ ಕಥೆ ಇರಲಿ, ನಿಮ್ಮ ಸರದಿ ಬಂದಾಗ

   ಸನ್ನಿ ಲಿಯೋನ್ ಕಥೆ ಬಗ್ಗೆ ಏಕೆ ಯೋಚಿಸುತ್ತೀರಿ, ನಿಮ್ಮ ಸರದಿ ಬಂದಾಗ ಏನು ಮಾಡಬಹುದು ಯೋಚಿಸಿ, ಇದೆಲ್ಲ ಚಿತ್ರಗಳು ಹೊರಬರಬಹುದು, ಡಿಲೀಟ್ ಮಾಡಿ. ಮೊದಲು ಗೌರವಯುತವಾಗಿ ವರ್ತಿಸಿ, ನಿಮ್ಮ ಹಾಸ್ಯಕ್ಕೆ ಇದು ಸಮಯವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ಅಗಲಿದ ಶ್ರೀದೇವಿಯವರು ಸರಕಾರಿ ಗೌರವಕ್ಕೆ ಅರ್ಹರಾ?ಅಗಲಿದ ಶ್ರೀದೇವಿಯವರು ಸರಕಾರಿ ಗೌರವಕ್ಕೆ ಅರ್ಹರಾ?

   ಶ್ರೀದೇವಿಯನ್ನು ಬೀಳ್ಕೊಡಲು ಸಾಲುಸಾಲಾಗಿ ಬಂದ ತಾರಾ ಬಳಗಶ್ರೀದೇವಿಯನ್ನು ಬೀಳ್ಕೊಡಲು ಸಾಲುಸಾಲಾಗಿ ಬಂದ ತಾರಾ ಬಳಗ

   English summary
   Actress Kasthuri tweeted that, 'All the news channels are showing songs and clips of Late Sridevi Wondering what will happen when Sunny Leone expires someday'. Here are the reaction to her tweet.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X