• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಅಭಿನಂದನ್ ದೈಹಿಕ ಕ್ಷಮತೆ ಆಧಾರದಲ್ಲಿ ವೃತ್ತಿಗೆ ವಾಪಸ್'

|

ಕೊಯಮತ್ತೂರು (ತಮಿಳುನಾಡು), ಮಾರ್ಚ್ 4: ಚಿಕಿತ್ಸೆಯ ನಂತರ ಅಭಿನಂದನ್ ರ ದೈಹಿಕ ಕ್ಷಮತೆ ಆಧಾರದಲ್ಲಿ ಅವರು ಮತ್ತೆ ಯುದ್ಧ ವಿಮಾನ ಚಾಲನೆ ಮಾಡುತ್ತಾರೋ ಅಥವಾ ಇಲ್ಲವೋ ಎಂಬುದು ನಿರ್ಧಾರ ಆಗುತ್ತದೆ ಎಂದು ಭಾರತೀಯ ವಾಯು ಸೇನೆ ಮುಖ್ಯಸ್ಥ ಬೀರೇಂದರ್ ಸಿಂಗ್ ಧನೋವಾ ಸೋಮವಾರದಂದು ಹೇಳಿದ್ದಾರೆ.

ಹೆಣ ಎಣಿಸುವುದು ನಮ್ಮ ಕೆಲಸವಲ್ಲ, ಸರಕಾರದ್ದು : ಏರ್ ಚೀಫ್ ಮಾರ್ಷಲ್

ಸೂಲೂರು ವಾಯು ಸೇನೆ ಕೇಂದ್ರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಅಭಿನಂದನ್ ಅವರಿಗೆ ವಿವಿಧ ವೈದ್ಯಕೀಯ ಪರೀಕ್ಷೆಗಳು ಆದವು. ಆ ನಂತರ ಅವರಿಗೆ ಚಿಕಿತ್ಸೆ ಅಗತ್ಯ ಇದ್ದರೆ ಪಡೆಯುತ್ತಾರೆ. ಅವರು ವಿಮಾನ ಚಲಾಯಿಸುವ ಮಟ್ಟಿಗೆ ದೈಹಿಕವಾಗಿ ಸದೃಢವಾದರೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಎಂದಿದ್ದಾರೆ.

ಪಾಕಿಸ್ತಾನದಿಂದ ಹಿಂತಿರುಗಿದ ನಂತರ ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತು. ಅತಿ ಶೀಘ್ರದಲ್ಲಿ ತಮ್ಮ ಕರ್ತವ್ಯಕ್ಕೆ ಹಿಂತಿರುಗುವ ಬಗ್ಗೆ ಅವರು ಹಿರಿಯ ಅಧಿಕಾರಿಗಳ ಬಳಿ ಆಸಕ್ತಿ ಹೇಳಿಕೊಂಡಿದ್ದರು. ಫೆಬ್ರವರಿ ಇಪ್ಪತ್ತಾರನೇ ತಾರೀಕು ಭಾರತಈಯ ವಾಯು ಸೇನೆಯ ವಿಂಗ್ ಕಮ್ಯಾಂಡರ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಸೇನೆಗೆ ಸಿಕ್ಕಿಬಿದ್ದಿದ್ದರು. ಆ ನಂತರ ಅವರನ್ನು ಅಲ್ಲಿಂದ ಬಿಡುಗಡೆ ಮಾಡಲಾಗಿತ್ತು.

English summary
Indian Air Force chief Air Chief Marshal Birender Singh Dhanoa on Monday said medical fitness after treatment would decide whether wing commander Abhinandan Varthaman, who was caught and released by Pakistan, last week, would fly fighter aircraft again or not.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X