ಕಸ ಗುಡಿಸುವ ಕೆಲಸಕ್ಕೆ ಅರ್ಜಿ ಹಾಕಿದ್ದಾರೆ ಎಂಜಿನಿಯರ್, ಎಂಬಿಎ ಪದವೀಧರು

ಚೆನ್ನೈ, ಫೆಬ್ರವರಿ 06: ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾರಕಕ್ಕೆ ಏರಿದೆ ಎಂಬುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಕಸ ಗುಡಿಸುವ ಕೆಲಸಕ್ಕೆ ಎಂಜಿನಿಯರ್, ಎಂಬಿಎ ಪಧವೀಧರರು ಅರ್ಜಿ ಹಾಕಿದ್ದಾರೆ.

ಹೌದು, ತಮಿಳುನಾಡಿದ ವಿಧಾನಸಭೆಯಲ್ಲಿ 14 ಕಸ ಗುಡಿಸುವ ಕೆಲಸಕ್ಕೆ ಸರ್ಕಾರ ಅರ್ಜಿ ಆಹ್ವಾನಿಸಿತ್ತು. ಅದಕ್ಕೆ ಯಾವುದೇ ಶೈಕ್ಷಣಿಕ ಅರ್ಹತೆಯನ್ನು ಕೇಳಿರಲಿಲ್ಲ. ಆದರೆ ಅದರಕ್ಕೆ ಬರೋಬ್ಬರಿ 4607 ಅರ್ಜಿಗಳು ಬಂದಿವೆ. ಅರ್ಜಿ ಹಾಕಿರುವ ಬಹುತೇಕರು ಪದವೀಧರರು.

ಎಂಜಿನಿಯರ್‌ಗಳು, ಎಂಬಿಎ ಪದವೀಧರರು, ಸ್ನಾತಕೋತ್ತರ ಪದವೀಧರರು, ಸೇರಿ 4607 ಮಂದಿ ಅರ್ಜಿ ಹಾಕಿದ್ದಾರೆ. ಅದರಲ್ಲಿ 677 ಅರ್ಜಿಗಳನ್ನು ವಿವಿಧ ಕಾರಣಗಳಿಗಾಗಿ ತಿರಸ್ಕರಿಸಲಾಗಿದ್ದು, ಉಳಿದ ಅರ್ಜಿಗಳಿಗೆ ಸಂದರ್ಶನ ನಡೆಯಲಿದೆ.

 6007 applications for 14 sweeper job in Tamilnadu

ಕೆಲ ತಿಂಗಳ ಹಿಂದೆ ಮಹಾರಾಷ್ಟ್ರದಲ್ಲಿ ಸಹ ಇದೇ ರೀತಿಯ ಘಟನೆ ನಡೆದಿತ್ತು. 13 ವೇಯ್ಟರ್‌ ಕೆಲಸಕ್ಕೆ 7000 ಮಂದಿ ಅರ್ಜಿ ಹಾಕಿದ್ದರು. ಅದರಲ್ಲಿ ಸಹ ಎಂಜಿನಿಯರ್‌ಗಳು, ಸ್ನಾತಕೋತ್ತರ ಪದವೀಧರರು ಹಲವರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+