ಒಂದೇ ಬಾವಿಯಲ್ಲಿ ನಾಲ್ಕು ವಿದ್ಯಾರ್ಥಿನಿಯರ ಶವಗಳು ಪತ್ತೆ

Posted By:
Subscribe to Oneindia Kannada

ಚೆನ್ನೈ, ನವೆಂಬರ್ 25 : ಚೆನ್ನೈನಿಂದ 88 ಕಿಮೀ ದೂರದಲ್ಲಿರುವ ಪಣಪ್ಪಾಕಂ ಗ್ರಾಮದ ಬಾವಿಯೊಂದರಲ್ಲಿ ಶುಕ್ರವಾರ ನಾಲ್ಕು ವಿದ್ಯಾರ್ಥಿನಿಯರ ಶವಗಳು ಪತ್ತೆಯಾಗಿವೆ.

ಮೃತ ವಿದ್ಯಾರ್ಥಿಯರನ್ನು ದೀಪಾ, ಶಂಕರಿ, ಮೊನಿಷಾ ಹಾಗೂ ರೇವತಿ ಎಂದು ಗುರುತಿಸಲಾಗಿದೆ. ಈ ವಿದ್ಯಾರ್ಥಿನಿಯರು ಇತ್ತೀಚಿನ ಪರೀಕ್ಷೆಯೊಂದರಲ್ಲಿ ಫೇಲ್ ಆಗಿದ್ದರಿಂದ ಶಾಲೆಯಲ್ಲಿ ಶಿಕ್ಷಕರು ಬೈದಿದ್ದು, ಪೋಷಕರನ್ನು ಕರೆತರುವಂತೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಭಯಗೊಂಡು ಆತ್ಮಗಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.

4 Tamil Nadu Girls Found Dead In Well, Police Suspect Suicide Pact

ನಾಲ್ವರು ವಿದ್ಯಾರ್ಥಿನಿಯರು ಇಲ್ಲಿನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮೊದಲನೇ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಶುಕ್ರವಾರದಂದು ತರಗತಿಗೆ ಹಾಜರಾಗಿರಲಿಲ್ಲ.

ವಿದ್ಯಾರ್ಥಿನಿಯರು ಕಾಣೆಯಾದ ಹಿನ್ನೆಲೆಯಲ್ಲಿ ಪೋಷಕರು ಶುಕ್ರವಾರ ರಾತ್ರಿ ಎಲ್ಲಾ ಕಡೆ ಹುಡುಕಾಡಿದಾಗ ಬಾವಿಯ ಬಳಿ ವಿದ್ಯಾರ್ಥಿನಿಯರ ಸೈಕಲ್‍ ಗಳು ಪತ್ತೆಯಾಗಿವೆ. ಬಳಿಕ ಬಾವಿಯೊಳಗೆ ನೋಡಿದಾಗ ವೃತ ದೇಹಗಳು ತೇಲಾಡುತ್ತಿರುವುದು ಬೆಳಕಿಗೆ ಬಂದಿದೆ.

ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ 65 ಅಡಿ ಆಳದ ಬಾವಿಯಿಂದ ವಿದ್ಯಾರ್ಥಿನಿಯರ ಶವವನ್ನ ಹೊರತೆಗೆದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Four students of a government school in Tamil Nadu's Vellore were found dead in a well near their village Panapakkam, 88 kilometres from Chennai, on Friday. Police suspect it to be a case of suicide pact.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ