ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನು ಸೂದ್ ಸಹೋದರಿಗೆ ಸ್ಥಾನ: ಪಂಜಾಬ್ ಕಾಂಗ್ರೆಸ್ ಶಾಸಕ ಬಿಜೆಪಿಗೆ ಸೇರ್ಪಡೆ

|
Google Oneindia Kannada News

ಚಂಡೀಗಢ ಜನವರಿ 16: ತಮ್ಮ ಸ್ಥಾನವನ್ನು ಬಾಲಿವುಡ್ ನಟ ಸೋನು ಸೂದ್ ಸಹೋದರಿ ಮಾಳವಿಕಾ ಸೂದ್‌ಗೆ ನೀಡಿದ್ದರಿಂದ ಅಸಮಧಾನಗೊಂಡ ಪಂಜಾಬ್‌ನ ಮೊಗಾದ ಕಾಂಗ್ರೆಸ್ ಶಾಸಕ ಹರ್ಜೋತ್ ಕಮಲ್ ಶನಿವಾರ ಬಿಜೆಪಿ ಸೇರಿದ್ದಾರೆ. ರಾಜ್ಯ ಚುನಾವಣೆಗೆ ಕೆಲವೇ ವಾರಗಳಿರುವಾಗ ಹರ್ಜೋತ್ ಕಮಲ್ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷ ಸೇರಿದ್ದಾರೆ. ಶನಿವಾರ ಕಮಲ್ ಚಂಡೀಗಢದ ಬಿಜೆಪಿ ಕಚೇರಿಗೆ ತೆರಳಿದ್ದು ಬಿಜೆಪಿ ನಾಯಕರು ಅವರನ್ನು ಸ್ವಾಗತಿಸಿರುವುದು ತಿಳಿದು ಬಂದಿದೆ.

ಈ ಬಗ್ಗೆ ಮಾತನಾಡಿದ ಅವರು, ''ನಟ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್‌ಗೆ ನನ್ನ ಸ್ಥಾನವನ್ನು ನೀಡಿದ್ದರಿಂದ ನನಗೆ ಅವಮಾನವಾಗಿದೆ. ನನಗೆ ಚುನಾವಣಾ ಟಿಕೆಟ್ ನಿರಾಕರಿಸಲಾಗಿದೆ. ಅದರಿಂದ ನನಗೆ ಅವಮಾನವಾಗಿದೆ ಎಂದು ಬಿಜೆಪಿ ಸೇರಿದ ನಂತರ ಕಮಲ್ ಹೇಳಿದ್ದಾರೆ. ಬೇರೆ ಕಡೆಯಿಂದ ಸ್ಪರ್ಧಿಸುವಂತೆ ಪಕ್ಷದ ನಾಯಕತ್ವ ಕೇಳಿಕೊಂಡಿದ್ದು, ತಮಗಿದು ಕಾಂಗ್ರೆಸ್‌ ಮಾಡಿದ ದೊಡ್ಡ ಅವಮಾನ ಎಂದು ಭಾವಿಸಿ ಪಕ್ಷ ತೊರೆದಿರುವುದಾಗಿ'' ಹೇಳಿಕೊಂಡಿದ್ದಾರೆ.

ನಟ ಸೋನು ಸೂದ್ ಸಹೋದರಿ ಪಂಜಾಬ್ ಚುನಾವಣೆಗೆ ಸ್ಪರ್ಧೆ
ಮೊಗಕ್ಕೆ ಭೇಟಿ ನೀಡಿದಾಗಲೂ, ಸಿದ್ದು ಸಾಹಬ್ ನನ್ನ ಸ್ಥಳಕ್ಕೆ ಭೇಟಿ ನೀಡಲಿಲ್ಲ ಆದರೆ ನೇರವಾಗಿ ಸೂದ್ (ಮಾಳವಿಕಾ ಸೂದ್) ಮನೆಗೆ ಹೋಗಿದ್ದರು ಎಂದು ಕಮಲ್ ಹೇಳಿದರು. ನಟ ಹಾಗೂ ಪರೋಪಕಾರಿ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಸೋಮವಾರ ಮೊಗಾದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡುವುದಕ್ಕೆ ನನ್ನ ಅಭ್ಯಂತರವಿಲ್ಲ. ಸೋನು ಸೂದ್ ಅವರೇ ಸ್ಪರ್ಧಿಸಬಹುದು. ಕಾಂಗ್ರೆಸ್ ನನಗೆ ಮೊಗದಿಂದ ಟಿಕೆಟ್ ನೀಡದಿರುವುದು ಸಮಸ್ಯೆಯಾಗಿದೆ. ಮಾಳವಿಕಾ ಸೂದ್ ನನ್ನ ಸಹೋದರಿ ಇದ್ದಂತೆ ಆದರೆ ಅವರಿಗೆ ಯಾವುದೇ ರಾಜಕೀಯ ಅರ್ಹತೆ ಇಲ್ಲ. ಅವರು ಸೋನು ಸೂದ್ ಅವರ ಸಹೋದರಿ ಎಂಬುದು ಹೊರತುಪಡಿಸಿ ಅವರಿಗೆ ರಾಜಕೀಯದಲ್ಲಿ ಅನುಭವವಿಲ್ಲ ಎಂದು ಕಮಲ್ ಹೇಳಿದರು.

Sonu Sood’s Sister Position: Punjab Congress MLA Joins BJP
ನನ್ನ ಪ್ರಕಾರ ಕಾಂಗ್ರೆಸ್ ಪಕ್ಷಕ್ಕೆ ಅವರ ಕೊಡುಗೆ ಏನೂ ಇಲ್ಲ. ನಾನು ಪಕ್ಷ ಸೇರುವ ಮುನ್ನ ಯುವ ಕಾಂಗ್ರೆಸ್ ಕಾರ್ಯಕರ್ತನಾಗಿದ್ದೆನು. 21 ವರ್ಷ ಕಾಂಗ್ರೆಸ್ ಜೊತೆ ಕಳೆದಿದ್ದೇನೆ. ಮೊಗದಲ್ಲಿ ಕಾಂಗ್ರೆಸ್ ರಹಿತ ಕ್ಷೇತ್ರವಾಗಿದ್ದು, ಎಸ್ಎಡಿ (ಶಿರೋಮಣಿ ಅಕಾಲಿದಳ) ಅಲೆಯನ್ನು ಮುರಿದು ಮೊಗದಲ್ಲಿ ಕಾಂಗ್ರೆಸ್ ಸ್ಥಾಪನೆಗೆ ಶ್ರಮಿಸಿದ್ದೇನೆ ಎಂದರು.

ಮಾಳವಿಕಾ ಸೂದ್ ಅವರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆಯೇ ಎಂಬ ಪ್ರಶ್ನೆಗೆ, ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರು ಈ ವಾರದ ಆರಂಭದ ಪತ್ರಿಕಾಗೋಷ್ಠಿಯಲ್ಲಿ, ಈ ಬಗ್ಗೆ ಹೇಳಲು ಏನೂ ಉಳಿದಿಲ್ಲ ಎಂದು ಉತ್ತರಿಸಿದರು. ಇದು ಅವರು ಪಕ್ಷದ ಆಯ್ಕೆಯಾಗಿದೆ ಎಂದು ಹೇಳಿದರು. ಸೇರ್ಪಡೆಯ ಘೋಷಣೆಗೆ ಗೈರುಹಾಜರಾದ ಕಮಲ್ ಕುರಿತ ಪ್ರಶ್ನೆಗೆ ಉತ್ತರಿಸಿದ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ಶಾಸಕರು ತಮ್ಮ ವೈಯಕ್ತಿಕ ಸ್ನೇಹಿತ ಎಂದು ಹೇಳಿದರು.

ಪಂಜಾಬ್ ವಿಧಾನಸಭಾ ಚುನಾವಣೆ

ಪಂಜಾಬ್ ವಿಧಾನಸಭಾ ಚುನಾವಣೆ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಹೊರಬೀಳಲಿದೆ. ಈಗಾಗಲೇ ಒಂಬತ್ತು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಬಿಜೆಪಿ ಮತ್ತು ಎಎಪಿಯಿಂದ ಪ್ರಬಲ ಸವಾಲುಗಳನ್ನು ನಿರೀಕ್ಷಿಸಲಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ತಾನು ಸಂಪೂರ್ಣವಾಗಿ ಆಳುವ ಕೆಲವೇ ಕೆಲವು ರಾಜ್ಯಗಳಲ್ಲಿ ಒಂದರಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ.

ನಟ ಸೋನು ಸೂದ್‌ರ ಸಹೋದರಿ ಮಾಳವಿಕಾ ಸೂದ್‌ ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಲು ಜನವರಿ 10ರಂದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಕೊರೊನಾ ವೈರಸ್‌ ಸಂದರ್ಭದಲ್ಲಿ ತಾನು ಮಾಡಿದ ಸಮಾಜ ಸೇವೆ ಮೂಲಕವೇ ಹೆಸರುವಾಸಿಯಾದ ನಟ ಸೋನು ಸೂದ್‌, ತಮ್ಮ ಸಹೋದರಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಇನ್ನು ಕಾಂಗ್ರೆಸ್‌ನ ಪಂಜಾಬ್ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ಚುನಾವಣೆಗೆ ಮುಂಚಿತವಾಗಿ ನಡೆದ ಈ ಬೆಳವಣಿಗೆಯನ್ನು "ಗೇಮ್ ಚೇಂಜರ್" ಎಂದು ಬಣ್ಣಿಸಿದ್ದಾರೆ.

ಇನ್ನು ತಾನು ಕಾಂಗ್ರೆಸ್‌ ಸೇರ್ಪಡೆ ಆಗಿರುವ ಬಗ್ಗೆ ಮಾತನಾಡಿದ ಮಾಳವಿಕಾ ಸೂದ್, "ಜನಸೇವೆಗಾಗಿ ತನ್ನನ್ನು ತಾನು ಅರ್ಪಿಸಿಕೊಳ್ಳಲು ರಾಜಕೀಯ ಧುಮುಕಿದ್ದೇನೆ," ಎಂದು ತಿಳಿಸಿದ್ದಾರೆ. ಮಾಳವಿಕಾ ಸೂದ್ ರಾಜ್ಯದ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. "ಸೋನು ಸೂದ್ ಮಾನವೀಯತೆ ಮತ್ತು ದಯೆಯಿಂದ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದ್ದಾರೆ. ಇಂದು ಆ ಕುಟುಂಬದ ಸದಸ್ಯರೊಬ್ಬರು ನಮ್ಮೊಂದಿಗೆ ಸೇರುತ್ತಿದ್ದಾರೆ. ಆಕೆ ವಿದ್ಯಾವಂತ ಮಹಿಳೆ," ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ. ಇನ್ನು "ಪಕ್ಷದ ಮುಖ್ಯಸ್ಥರು ಮತ್ತು ಮುಖ್ಯಮಂತ್ರಿ ಇಬ್ಬರೂ ಯಾರೊಬ್ಬರ ಮನೆಗೆ ಗೌರವವನ್ನು ನೀಡಲು ಹೋಗಿದ್ದು ಬಹಳ ಅಪರೂಪ. ಅದಕ್ಕೆ ಇವರು ಅರ್ಹರಾಗಿದ್ದಾರೆ," ಎಂದು ಕೂಡಾ ಸಿದ್ಧು ಹೇಳಿದ್ದಾರೆ.

English summary
Harjot Kamal, the Congress MLA from Punjab's Moga who was said to be unhappy that his seat was given to actor Sonu Sood's sister Malvika Sood just weeks ahead of the state elections, joined the BJP on Saturday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X