Get Updates
Get notified of breaking news, exclusive insights, and must-see stories!

Breaking; ರಾಜ್ಯಸಭೆ, ಕಾಂಗ್ರೆಸ್ ಶಾಸಕರು ರೆಸಾರ್ಟ್‌ನಿಂದ ವಾಪಸ್

ಚಂಡೀಗಢ್, ಜೂನ್ 10; ಹರ್ಯಾಣ ರಾಜ್ಯದ 2 ಸ್ಥಾನಗಳು ಸೇರಿದಂತೆ 16 ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಶುಕ್ರವಾರ ಚುನಾವಣೆ ನಡೆಯಲಿದೆ. ರಾಜಕೀಯ ಪಕ್ಷಗಳು ಅಂತಿಮ ಕ್ಷಣದ ಕಸರತ್ತಿನಲ್ಲಿ ತೊಡಗಿವೆ.

ಶುಕ್ರವಾರ ಬೆಳಗ್ಗೆ ಹರ್ಯಾಣದ ಕಾಂಗ್ರೆಸ್ ಶಾಸಕರು ನವದೆಹಲಿಯ ರೆಸಾರ್ಟ್‌ನಿಂದ ಚಂಡೀಗಢ್‌ಗೆ ಪ್ರಯಾಣ ಆರಂಭಿಸಿದರು. ಜೂನ್ 2ರಿಂದ ರಾಯ್‌ಪುರ್‌ನ ರೆಸಾರ್ಟ್‌ನಲ್ಲಿದ್ದ ಕಾಂಗ್ರೆಸ್ ಶಾಸಕರು ಗುರುವಾರ ದೆಹಲಿಗೆ ಆಗಮಿಸಿದ್ದರು.

ಹರ್ಯಾಣ ವಿಧಾನಸಭೆಯಿಂದ ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ನಡೆಯುವ ಚುನಾವಣೆಗೆ ಕಾಂಗ್ರೆಸ್‌ನಿಂದ ಅಜಯ್ ಮಾಕನ್, ಬಿಜೆಪಿಯಿಂದ ಕೃಷ್ಣ ಪನ್ವಾರ್ ಅಭ್ಯರ್ಥಿಗಳು. ಆದರೆ ಸ್ವತಂತ್ರ ಅಭ್ಯರ್ಥಿಯಾಗಿ ಕಾರ್ತೀಕೇಯ ಶರ್ಮಾ ಕಣಕ್ಕಿಳಿದಿದ್ದಾರೆ.

Rajya Sabha Election Haryana Congress MLAs Leaves Delhi

90 ಸದಸ್ಯ ಬಲದ ಹರ್ಯಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ 31, ಬಿಜೆಪಿ 40, ಜೆಜೆಪಿ 10 ಮತ್ತು ಪಕ್ಷೇತರರಾದ 7 ಶಾಸಕರು ಇದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನದ ಭೀತಿಯಿಂದ ಕಾಂಗ್ರೆಸ್ ತಮ್ಮ ಶಾಸಕರು, ಕೆಲವು ಪಕ್ಷೇತರ ಶಾಸಕರನ್ನು ರೆಸಾರ್ಟ್‌ಗೆ ಕರೆದುಕೊಂಡು ಹೋಗಿತ್ತು.

ಕೆಲವು ಪಕ್ಷೇತರ ಶಾಸಕರು ರಾಜ್ಯಸಭೆ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡುತ್ತೇವೆ ಎಂಬುದನ್ನು ಇನ್ನೂ ಖಚಿತಪಡಿಸಿಲ್ಲ. ಹರ್ಯಾಣದ 2 ಕ್ಷೇತ್ರಗಳಿಗೆ 3 ಅಭ್ಯರ್ಥಿಗಳು ಕಣದಲ್ಲಿದ್ದು, ಯಾರಿಗೆ ಗೆಲುವು ಸಿಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Rajya Sabha Election Haryana Congress MLAs Leaves Delhi

ಶುಕ್ರವಾರ 15 ರಾಜ್ಯಗಳ 57 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದೆ. 57 ಸ್ಥಾನಗಳ ಪೈಕಿ 11 ರಾಜ್ಯಗಳಿಂದ 41 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 16 ಸ್ಥಾನಗಳಿಗೆ ಮಾತ್ರ ಮತದಾನ ನಡೆಯಲಿದ್ದು, ಸಂಜೆ 5 ಗಂಟೆಯ ಬಳಿಕ ಮತ ಎಣಿಕೆ ಆರಂಭವಾಗಲಿದೆ.

ಕರ್ನಾಟಕದ 4 ಸ್ಥಾನಗಳಿಗೆ 6 ಅಭ್ಯರ್ಥಿಗಳು ಕಣದಲ್ಲಿದ್ದು ರಾಜ್ಯಸಭೆಗೆ ಹೋಗುವವರು ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಎರಡು ಮತ್ತು ಬಿಜೆಪಿ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೆಡಿಎಸ್ ಸಹ ಶಾಸಕರ ಬಲ ಇಲ್ಲದಿದ್ದರೂ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

Recommended Video

      Ganga River | ಗಂಗಾಜಲದ ವಿಶೇಷ ಗುಣಗಳು ಮತ್ತು ಅದರ ಪಾವಿತ್ರ್ಯತೆ ಬಗ್ಗೆ ನಿಮಗೆಷ್ಟು ಗೊತ್ತು? | OneIndia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+