ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡಿ ದಾಳಿ: ನನ್ನ ಮೇಲಿನ ರಾಜಕೀಯ ಸೇಡು ಎಂದ ಪಂಜಾಬ್‌ ಸಿಎಂ

|
Google Oneindia Kannada News

ಚಂಡೀಗಢ, ಜನವರಿ 19: ಮರಳು ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ಸಂಬಂಧಿಕರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯದ ದಾಳಿಯನ್ನು ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ರಾಜಕೀಯ ಸೇಡು" ಎಂದು ಬಣ್ಣಿಸಿದ್ದಾರೆ. ಆದರೆ ಕಾಂಗ್ರೆಸ್ ನಾಯಕತ್ವವು ಪ್ರಧಾನಿ ಮೋದಿಯನ್ನು ದೇಶದ "ಏಕೈಕ ದಲಿತ ಸಿಎಂ" ಮೇಲೆ ಗುರಿಯಾಗಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಪಂಜಾಬ್ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ನವಜ್ಯೋತ್ ಸಿಂಗ್ ಸಿಧು ಈ ಬಗ್ಗೆ ಮಾತನಾಡಿ, 'ಈ ದಾಳಿಯು ಯಾರೊಬ್ಬರೂ ತಪ್ಪಿತಸ್ಥರು ಎಂದು ಅರ್ಥವಲ್ಲ,' ಎಂದು ಸಮರ್ಥಿಸಿಕೊಂಡಿದ್ದಾರೆ. ಇನ್ನು ಈ ಪಂಜಾಬ್‌ ಮಾದರಿಯನ್ನು ಉಲ್ಲೇಖ ಮಾಡಿದ ನವಜ್ಯೋತ್ ಸಿಂಗ್ ಸಿಧು ಯಾರೊಬ್ಬರೂ ತಪ್ಪಿತಸ್ಥರು ಎಂದರ್ಥವಲ್ಲ ಎಂದರು.

ಪಂಜಾಬ್ ಸಿಎಂ ಸೋದರಳಿಯ ಮನೆ ಮೇಲೆ ED ದಾಳಿ ಪಂಜಾಬ್ ಸಿಎಂ ಸೋದರಳಿಯ ಮನೆ ಮೇಲೆ ED ದಾಳಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಬಂಧಿಕರ ಮೇಲೆಯೂ ಇಡಿ ದಾಳಿಗಳು ನಡೆದಿದ್ದವು, ಈ ಘಟನೆಯನ್ನು ಹಾಗೂ ಮಮತಾ ಬ್ಯಾನರ್ಜಿ ಅವರ ಸಂಬಂಧಿಕರ ಮೇಲಿನ ಇಡಿ ದಾಳಿಯನ್ನು ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ಹೋಲಿಕೆ ಮಾಡಿದ್ದಾರೆ.

Raid Nothing but a Political Vendetta Against Me Says Punjab CM Charanjit Singh Channi

"ಈ ಇಡಿ ದಾಳಿಯು ನನ್ನ ವಿರುದ್ಧದ ರಾಜಕೀಯ ಸೇಡಿನ ಹೊರತು ಬೇರೇನೂ ಅಲ್ಲ. ಪಶ್ಚಿಮ ಬಂಗಾಳದ ಚುನಾವಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಂಬಂಧಿಕರ ಮೇಲೆ ಅದೇ ಮಾದರಿಯ ದಾಳಿ ನಡೆದಿದೆ," ಎಂದು ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ಹೇಳಿದರು.

"ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ"

"ಪಂಜಾಬ್‌ನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ, ಇಡಿ ಕಾರ್ಯಾಚರಣೆಗೆ ಇಳಿದಿದೆ. ಅವರು ಈಗ ನನ್ನನ್ನು ಮತ್ತು ನನ್ನ ಮಂತ್ರಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ," ಎಂದು ಕೂಡಾ ಚರಣ್‌ಜೀತ್ ಸಿಂಗ್ ಚನ್ನಿ ಟೀಕೆ ಮಾಡಿದ್ದಾರೆ.

ದಲಿತ ಸಿಎಂ ಮೇಲೆ ಕೇಂದ್ರದ ದಾಳಿ

ದೆಹಲಿಯಲ್ಲಿ, ಪಂಜಾಬ್‌ನ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಉಸ್ತುವಾರಿ ಹರೀಶ್ ಚೌಧರಿ ಮತ್ತು ವಕ್ತಾರ ರಣದೀಪ್ ಸುರ್ಜೆವಾಲಾ ಅವರು "ದಲಿತ ಸಿಎಂ" ಎಂಬುವುದನ್ನು ಪ್ರಸ್ತಾಪ ಮಾಡಿದ್ದಾರೆ. ಕೇಂದ್ರ ಸರ್ಕಾರವು ದಲಿತ ಸಿಎಂ ಚನ್ನಿ ಮತ್ತು ಪಂಜಾಬಿಯತ್ ಅನ್ನು ಗುರಿಯಾಗಿಸುತ್ತಿದೆ ಎಂದು ಆರೋಪಿಸಿದರು. ಆದರೆ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದಿದ್ದಾರೆ.

ಇನ್ನು ಈ ಸಂದರ್ಭದಲ್ಲೇ ಕಾಂಗ್ರೆಸ್‌ ನಾಯಕರುಗಳು ಬಿಜೆಪಿ ಎಎಪಿ ಜೊತೆಯಾಗಿದೆ ಎಂದು ಆರೋಪ ಮಾಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಈ ದಾಳಿಯ ಮೇಲೆ ಚನ್ನಿಯನ್ನು ಗುರಿಯಾಗಿಸಿಕೊಂಡಿದ್ದಾರೆ . ಬಿಜೆಪಿ-ಎಎಪಿ ಜೊತೆಯಾಗಿದೆ ಎಂದು ಆರೋಪ ಮಾಡಿದ್ದಾರೆ.

ವಕ್ತಾರ ರಣದೀಪ್ ಸುರ್ಜೆವಾಲಾ, "ನಿಮ್ಮ ಎಲ್ಲಾ ಸಮೀಕ್ಷೆಗಳು ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಚನ್ನಿ ಅತ್ಯಂತ ಜನಪ್ರಿಯವಾಗಿದ್ದಾರೆ ಎಂದು ತಿಳಿಸಿದೆ. ರೈತರ ಆಂದೋಲನದ ಸಮಯದಲ್ಲಿ ಪಂಜಾಬಿಗಳು ನಿಂದಿಸಲ್ಪಟ್ಟರು ಆದರೆ ಪಂಜಾಬಿಯತ್ ಬಲವಾಗಿ ನಿಂತಿದೆ. ಚನ್ನಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅಲ್ಲ. ಅವರು ಚರಂಜಿತ್ ಸಿಂಗ್ ಚನ್ನಿ ಎಂಬುದನ್ನು ಬಿಜೆಪಿ ಮರೆಯುತ್ತಿದೆ," ಎಂದು ಹೇಳಿದ್ದಾರೆ. ಹಾಗೆಯೇ "ಮೂಗು ತೋರಿಸುವ ಯತ್ನ ವಿಫಲವಾಗಿದೆ," ಎಂದು ಹೇಳಿದ್ದಾರೆ.

Recommended Video

ಅಬ್ಬಾ!ಏನ್ ಜಂಪ್ ಗುರೂ ಇದು..ಹೈ ಜಂಪ್ ನಲ್ಲಿ ಗೋಲ್ಡ್ ಮೆಡಲ್ ಫಿಕ್ಸ್ | Oneindia Kannada

"ಮರಳು ಗಣಿಗಾರಿಕೆಯ ಮೇಲೆ ಸಂಪೂರ್ಣ ಸರ್ಕಾರದ ನಿಯಂತ್ರಣವೊಂದೇ ಪರಿಹಾರವಾಗಿದೆ. ಪಂಜಾಬ್ ಮಾದರಿಯು ಪಂಜಾಬ್ ಸ್ಟೇಟ್ ಮೈನಿಂಗ್ ಕಾರ್ಪೊರೇಶನ್ ಅನ್ನು ಸ್ಥಾಪಿಸಲು ಗುತ್ತಿಗೆ ವ್ಯವಸ್ಥೆಯನ್ನು ರದ್ದುಗೊಳಿಸಲು ಮತ್ತು ನಿಗದಿತ ದರ, ತೂಕ ಮತ್ತು ದಿನಾಂಕಕ್ಕೆ ಮರಳನ್ನು ಮಾರಾಟ ಮಾಡಲು ಪ್ರತಿಪಾದಿಸುತ್ತದೆ," ಎಂದು ಪಂಜಾಬ್ ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ನವಜ್ಯೋತ್ ಸಿಂಗ್ ಸಿಧು ಹೇಳಿದ್ದಾರೆ. (ಒನ್‌ಇಂಡಿಯಾ ಸುದ್ದಿ)

English summary
Raid nothing but a political vendetta against me Says Punjab chief minister Charanjit Singh Channi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X