ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮಾಡಿದ್ದನ್ನೇ ಈಗ ಮೋದಿ ಮಾಡುತ್ತಿದ್ದಾರೆ: ರಾಹುಲ್

ಚಂಡೀಗಢ, ಅಕ್ಟೋಬರ್ 05: ಬ್ರಿಟಿಷ್ ಈಸ್ಟ್‌ ಇಂಡಿಯಾ ಕಂಪನಿ ಮಾಡಿದ್ದನ್ನೇ ಇದೀಗ ಪ್ರಧಾನಿ ಮೋದಿ ದೇಶಕ್ಕೆ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಮೂರು ಕೃಷಿ ಮಸೂದೆಗಳ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಮೂರು ದಿನಗಳ 'ಖೇತಿ ಬಚಾವೊ' ಯಾತ್ರೆಯ ಎರಡನೇ ದಿನವಾದ ಇಂದು ಮಾತನಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಎನ್ ಡಿಎ ಸರ್ಕಾರವನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಹೋಲಿಕೆ ಮಾಡಿದ್ದಾರೆ.

ಬ್ರಿಟಿಷ್ ಸಂಸ್ಥೆಯ ರೀತಿಯಲ್ಲಿ ರೈತರ ಬೆನ್ನೆಲುಬು ಮುರಿಯುವಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಯಶಸ್ವಿಯಾದರೆ, ಇಡೀ ರಾಷ್ಟ್ರವು ಅಂಬಾನಿ ಮತ್ತು ಅದಾನಿಯಂತಹ ಕೈಗಾರಿಕೋದ್ಯಮಿಗಳಿಗೆ ಗುಲಾಮರಾಗುತ್ತಿದ್ದಾರೆ ಎಂದರು.

ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಿಲ್ಲ

ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಿಲ್ಲ

ಈ ಮಸೂದೆಗಳ ವಿರುದ್ಧದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ಹೇಳಿದ ರಾಹುಲ್ ಗಾಂಧಿ, ಪ್ರತಿಯೊಬ್ಬ ರೈತನು ಈ ಮಸೂದೆಗಳ ವಿರುದ್ಧ ಮತ್ತು ನಿಮ್ಮ ಪಕ್ಷದ ವಿರುದ್ಧ ಬೀದಿಗಿಳಿಯುತ್ತಾರೆ.ಕಾಂಗ್ರೆಸ್ ಎಲ್ಲಾ ರೈತರೊಂದಿಗೆ ನಿಂತಿದೆ ಮತ್ತು ಯಾವಾಗಲೂ ಅವರಿಗೆ ಬೆಂಬಲ ನೀಡಲಿದೆ ಎಂದು ಹೇಳಿದರು.

ರಾಹುಲ್ ಗಾಂಧಿ ನೀಡಿದ ಲೆಕ್ಕಾಚಾರವೇನು?

ರಾಹುಲ್ ಗಾಂಧಿ ನೀಡಿದ ಲೆಕ್ಕಾಚಾರವೇನು?

ಕಾರ್ಪೋರೇಟ್ ಆಡಳಿತದಲ್ಲಿ ಈಗ ಜನರು ಏನು 10 ರೂ.ಗೆ ಕೊಂಡುಕೊಳ್ಳುತ್ತಿದ್ದಾರೋ ಅದಕ್ಕೆ 50 ರೂ ಭರಿಸಬೇಕಾಗುತ್ತದೆ. ಹಣ ರೈತರು ಅಥವಾ ಕಾರ್ಮಿಕರಿಗೆ ಹೋಗಲ್ಲ, ಆದರೆ, ಕಾರ್ಪೋರೇಟರ್ ಮನೆಗಳ ಜೇಬುಗಳಿಗೆ ಹೋಗಲಿದೆ ಎಂದರು.
ದೇಶದ ಕೃಷಿ ವಲಯದ ಗೋಡೆ ಅನಿಸಿಕೊಂಡಿರುವ ಮಂಡಿ ಹಾಗೂ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಹಾಳು ಮಾಡಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಂಬಾನಿ, ಅದಾನಿ ಕಾರ್ಮಿಕರನ್ನು ಬಳಸಿಕೊಳ್ಳಲ್ಲ ಆದರೆ, ಯಂತ್ರಗಳ ಮೂಲಕ ಕೃಷಿ ಕ್ಷೇತ್ರದ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ.ಇದರಿಂದಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಬಂಡವಾಳಶಾಹಿ ಸ್ನೇಹಿತರಿಗೆ ಸಹಾಯ

ಬಂಡವಾಳಶಾಹಿ ಸ್ನೇಹಿತರಿಗೆ ಸಹಾಯ

ಕೋವಿಡ್-19 ಬಿಕ್ಕಟ್ಟನ್ನು ಸಹ ಬಂಡವಾಳಶಾಹಿ ಸ್ನೇಹಿತರಿಗೆ ಸಹಾಯ ಮಾಡಲು ಪ್ರಧಾನಿ ಮೋದಿ ಬಳಸಿಕೊಂಡಿದ್ದಾರೆ. ಅವರ ಸಾಲಗಳು, ತೆರಿಗೆಗಳನ್ನು ಮನ್ನಾ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಉದ್ಯೋಗ ಸೃಷ್ಟಿಸುವಲ್ಲಿ ಮೋದಿ ವಿಫಲ

ಉದ್ಯೋಗ ಸೃಷ್ಟಿಸುವಲ್ಲಿ ಮೋದಿ ವಿಫಲ

ಪ್ರಧಾನಿ ನರೇಂದ್ರ ಮೋದಿ ಜನರಿಗೆ ಉದ್ಯೋಗ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಉದ್ಯೋಗಗಳನ್ನು ಸೃಷ್ಟಿಸುವುದು ಅಂಬಾನಿ ಮತ್ತು ಅದಾನಿಯಲ್ಲ, ಸಣ್ಣ ಉದ್ಯಮಗಳು ಮತ್ತು ಎಂಎಸ್‌ಎಂಇಗಳು, ಮೋದಿ ಅವರ ನೋಟ್ ಅಮಾನ್ಯೀಕರಣ, ಜಿಎಸ್‌ಟಿ ಮುಂತಾದ ಕೆಟ್ಟ ಪರಿಕಲ್ಪನೆಗಳಿಂದ ಅವರು ಕೂಡಾ ಹಾಳಾಗುತ್ತಿದ್ದಾರೆ ಎಂದುರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+