• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೊಲದಲ್ಲಿ ಟ್ರ್ಯಾಕ್ಟರ್ ಚಲಾಯಿಸಿದ ರಾಹುಲ್ ಗಾಂಧಿ: ವೈರಲ್ ವಿಡಿಯೋ

|

ಲೂಧಿಯಾನ, ಮೇ 17: ಲೋಸಕಭೆ ಚುನಾವಣೆಯ ಏಳನೇ ಮತ್ತು ಕೊನೆಯ ಹಂತದ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ಪಂಜಾಬ್‌ನ ಲೂಧಿಯಾನದಲ್ಲಿ ಟ್ರ್ಯಾಕ್ಟರ್ ಓಡಿಸಿದ ವಿಡಿಯೋ ವೈರಲ್ ಆಗಿದೆ.

ಲೂಧಿಯಾನದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಹೊಲವೊಂದಕ್ಕೆ ತೆರಳಿದ ರಾಹುಲ್ ಗಾಂಧಿ ಟ್ರ್ಯಾಕ್ಟರ್ ಹತ್ತಿ ಅದನ್ನು ಸ್ಟಾರ್ಟ್ ಮಾಡಿದರು. ಕೂಡಲೇ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಲೂಧಿಯಾನದ ಪಕ್ಷದ ಅಭ್ಯರ್ಥಿ ರವನೀತ್ ಸಿಂಗ್ ಬಿಟ್ಟು ಮತ್ತು ಕಾಂಗ್ರೆಸ್ ನಾಯಕಿ ಆಶಾ ಕುಮಾರಿ ಕೂಡ ಟ್ರ್ಯಾಕ್ಟರ್ ಏರಿ ರಾಹುಲ್ ಅವರ ಅಕ್ಕಪಕ್ಕ ಕುಳಿತುಕೊಂಡರು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಹೊಲದಲ್ಲಿ ರಾಹುಲ್ ಟ್ರ್ಯಾಕ್ಟರ್ ಚಾಲನೆ ಮಾಡುವುದಕ್ಕೆ ಕಷ್ಟಪಡುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ, ನಗುಮೊಗದೊಂದಿಗೆ ಟ್ರ್ಯಾಕ್ಟರ್ ಮುಂದೋಡಿಸಿದ ರಾಹುಲ್, ಕೆಲ ಸಮಯ ಚಾಲನೆ ಮಾಡಿದರು. ಅವರ ಪಕ್ಕದಲ್ಲಿ ಕುಳಿತಿದ್ದ ಕಾಂಗ್ರೆಸ್ ಮುಖಂಡರು ರಾಹುಲ್ ಡ್ರೈವಿಂಗ್ ಅನ್ನು ಅನಂದಿಸಿದರು.

ಈ ವಿಡಿಯೋವನ್ನು ಅಮರಿಂದರ್ ಸಿಂಗ್ ಸೇರಿದಂತೆ ಕಾಂಗ್ರೆಸ್‌ನ ಅನೇಕ ಮುಖಂಡರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿ ಅವರ ಚಾಲನೆಯನ್ನು ಹೊಗಳುವ ಮೂಲಕ ದೇಶವನ್ನು ಕೂಡ ಅವರು ಹೀಗೆ ಚೆನ್ನಾಗಿ ಕೊಂಡೊಯ್ಯಲು ಸಮರ್ಥರಾಗಿದ್ದಾರೆ ಎಂದಿದ್ದಾರೆ.

ಮೋದಿಯನ್ನು ಅಣಕಿಸಿದ ರಾಹುಲ್ ಗಾಂಧಿಯ ತಪ್ಪು ತಿದ್ದಿದ ಆಕ್ಸ್‌ಫರ್ಡ್‌

ರಾಹುಲ್ ಗಾಂಧಿ ಅವರು ಇತ್ತೀಚೆಗೆ ಹೆಲಿಕಾಪ್ಟರ್ ಬಾಗಿಲನ್ನು ರಿಪೇರಿ ಮಾಡುವ ವಿಡಿಯೋ ವೈರಲ್ ಆಗಿತ್ತು. ಟ್ರ್ಯಾಕ್ಟರ್ ಚಾಲನೆ ಮಾಡುವ ರಾಹುಲ್ ಸರಳತೆ ಮತ್ತು ತಿಳಿವಳಿಕೆಯನ್ನು ಕಾಂಗ್ರೆಸ್ಸಿಗರು ಕೊಂಡಾಡಿದ್ದಾರೆ. ಆದರೆ, ಬಿಜೆಪಿ ಅಭಿಮಾನಿಗಳು ಈ ವಿಡಿಯೋವನ್ನು ಕೂಡ ರಾಹುಲ್ ಕಾಲೆಳೆಯಲು ಬಳಸಿಕೊಂಡಿದ್ದಾರೆ.

ಚಕ್ರ ರಾಹುಲ್‌ಗೆ ನೀಡಲು ಸಮಯ

ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಸ್ಟೀರಿಂಗ್ ವೀಲ್‌ಅನ್ನು ತಮ್ಮ ಕೈಗೆ ತೆಗೆದುಕೊಂಡಾಗ ಅದ್ಭುತ ಚಾಲಕನಾಗಿರುವುದು ಗೊತ್ತಾಗಿತ್ತು. ಆದರೆ, ಇಂದು ಅವರೊಂದಿಗಿನ ಆನಂದದಾಯಕ ಟ್ರ್ಯಾಕ್ಟರ್ ಪ್ರಯಾಣವು ಅವರು ಏನನ್ನು ಬೇಕಾದರೂ, ನಮ್ಮ ದೇಶದ ಎಲ್ಲವನ್ನೂ ಚಲಾಯಿಸುತ್ತಾರೆ ಎಂಬುದನ್ನು ತೋರಿಸಿದೆ. 2014ರಲ್ಲಿ ನರೇಂದ್ರ ಮೋದಿ ಅವರು ನಮ್ಮನ್ನು ಕರೆದೊಯ್ದ ಪ್ರಯಾಣಕ್ಕಿಂತಲೂ ಇದು ಉತ್ತಮ. ರಾಹುಲ್ ಕೈಗೆ ಗಾಲಿಯನ್ನು ಹಸ್ತಾಂತರಿಸುವ ಸಮಯ ಬಂದಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದರು.

ಮೋದಿ, ಸಿಂಗ್‌ರನ್ನು ಅಣಕಿಸಿದರು, ಈಗ ಇಡೀ ದೇಶ ಅವರನ್ನು ಅಣಕಿಸುತ್ತಿದೆ: ರಾಹುಲ್ ಗಾಂಧಿ

ಮಣ್ಣಿನ ಮಗ ರಾಹುಲ್!

ಪಂಜಾಬ್‌ನಲ್ಲಿ ಇಂದು ಮಣ್ಣಿನ ಮಗ ರಾಹುಲ್ ಗಾಂಧಿ ಟ್ರ್ಯಾಕ್ಟರ್ ಚಾಲನೆ ಮಾಡಿದರು. ಅವರಿಗೆ ನಮ್ಮ ಸಲಾಮ್. ಜೈ ಜವಾನ್, ಜೈ ಕಿಸಾನ್, ಜೈ ಹಿಂದೂಸ್ತಾನ್! ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿ ಫಿರಂಗಿ, ನಾನು AK 47: ಸಿಧು ಸಿಡಿಗುಂಡು!

ನಿರಂತರ ಕಲಿಕೆ

ಟ್ರ್ಯಾಕ್ಟರ್ ಚಾಲಕನಾಗುವ ಸವಾಲನ್ನು ರಾಹುಲ್ ಗಾಂಧಿ ಸ್ವೀಕರಿಸಿದ್ದಾರೆ. ಯಾವುದೇ ಹೊಸತನ್ನು ಕಲಿಯುವ ಅತೀವ ಬಯಕೆಯುಳ್ಳ ನಾಯಕನನ್ನು ನೋಡುವುದು ಖುಷಿ ನೀಡುತ್ತದೆ. ಜೀವ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ ಎಂದು ಕಾಂಗ್ರೆಸ್ ಬೆಂಬಲಿಸುವ ನ್ಯಾಯ್ ಫೌಂಡೇಷನ್ ಎಂಬ ಖಾತೆ ಟ್ವೀಟ್ ಮಾಡಿದೆ.

ಟ್ರ್ಯಾಕ್ಟರ್ ಚಲಾಯಿಸಿದ ರಾಹುಲ್

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಲೂಧಿಯಾನದಲ್ಲಿ ಟ್ರ್ಯಾಕ್ಟರ್ ಸವಾರಿ ಮಾಡಿದರು. 'ಈಗ ನ್ಯಾಯ ಸಿಕ್ಕಿದೆ' ಎಂದು ಹ್ಯಾಷ್‌ಟ್ಯಾಗ್‌ನೊಂದಿಗೆ ಕಾಂಗ್ರೆಸ್ ಟ್ವೀಟ್ ಮಾಡಿದೆ.

ಆಲೂಗಡ್ಡೆ ಬೆಳೆಯಲಿ

ಯಾವುದೇ ಸರ್ಕಾರದಲ್ಲಿ ಇರಲು ರಾಹುಲ್ ಗಾಂಧಿ ಅರ್ಹರಲ್ಲ ಎನ್ನುವುದು ಸ್ಪಷ್ಟವಾಗಿದೆ. ಈ ಕುಟುಂಬವನ್ನು ಶಾಶ್ವತವಾಗಿ ಅಧಿಕಾರದಿಂದ ಹೊರಗಿಡಬೇಕು. ಅವರು ಕ್ಯಾಪ್ಟರ್ ಜತೆಗೂಡಿ ಟ್ರ್ಯಾಕ್ಟರ್ ಚಾಲನೆ ಮಾಡಿ ಆಲೂಗಡ್ಡೆ ಬೆಳೆದು ಚಿನ್ನ ತಯಾರಿಸಲಿ ಎಂದು ಚೌಕಿದಾರ್ ಬಲ್ಬೀರ್ ಸಿಂಗ್ ಎಂಬುವವರು ವ್ಯಂಗ್ಯವಾಡಿದ್ದಾರೆ.

ಇವರನ್ನೇ ಪಿಎಂ ಮಾಡಿ!

ಅವರಿಗಿಂತ ಉತ್ತಮ ಚಾಲಕಿ ಇಲ್ಲಿದ್ದಾರೆ. ಯಾರಿಂದಲೂ ಅವರು ಪ್ರಚೋದನೆಗೆ ಒಳಗಾಗದೆ ಟ್ರ್ಯಾಕ್ಟರ್ ಅನ್ನು ಸ್ವತಂತ್ರವಾಗಿ ಆತ್ಮವಿಶ್ವಾಸದಿಂದ ಚಾಲನೆ ಮಾಡುತ್ತಿದ್ದಾರೆ. ನನ್ನ ಪ್ರಕಾರ ಕಾಂಗ್ರೆಸ್ ಪಕ್ಷ ಈಕೆಯನ್ನು ಪ್ರಧಾನಿ ಮಾಡಬೇಕು. ಅವರು ಉತ್ತಮ ಪ್ರಧಾನಿಯಾಗಬಲ್ಲರು ಎಂದು ಚೌಕಿದಾರ್ ನಾಗರಾಜು ಎಂಬುವವರು ಟ್ವೀಟ್ ಮಾಡಿದ್ದಾರೆ.

English summary
Lok Sabha elections 2019: Congress President Rahul Gandhi on Wednesday drives a tractor in Ludhiana of Punjab after he completing a election campaign for Party's Ludhiana candidate Ravneet Bittu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X