ಪಂಜಾಬ್ ಚುನಾವಣೆ: ಫೆ.14, 16, 17ರಂದು ಪ್ರಧಾನಿ ಮೋದಿ ರ್‍ಯಾಲಿ
ಚಂಡೀಗಢ, ಫೆಬ್ರವರಿ 09: ಪಂಜಾಬ್‌ನಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಪ್ರಚಾರಕ್ಕೆ ಮತ್ತಷ್ಟು ಉತ್ತೇಜನ ನೀಡಲು, ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 14, 16 ಮತ್ತು 17 ರಂದು ಪಂಜಾಬ್‌ನಲ್ಲಿ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪಂಜಾಬ್ ರಾಜ್ಯದಲ್ಲಿ ಮಾಲ್ವಾ, ದೋಬಾ ಮತ್ತು ಮಾಝಾ ಮೂರು ಪ್ರದೇಶಗಳನ್ನು ಒಳಗೊಂಡ ಮೂರು ಸಾರ್ವಜನಿಕ ರ್‍ಯಾಲಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ.
ಜಲಂಧರ್, ಕಪುರ್ತಲಾ ಮತ್ತು ಬಟಿಂಡಾದ 27 ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ನಡೆಯಲಿರುವ ವರ್ಚುವಲ್ ರ್‍ಯಾಲಿಯನ್ನು ರದ್ದುಗೊಳಿಸಿದ ಬಿಜೆಪಿ, ಪ್ರಧಾನಿ ಮೋದಿ ಫೆಬ್ರವರಿ 14 ರಂದು ಜಲಂಧರ್‌ನಲ್ಲಿ ಚುನಾವಣಾ ರ್‍ಯಾಲಿಯನ್ನು ನಡೆಸಲಿದ್ದಾರೆ ಎಂದು ಹೇಳಿದೇ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ವರ್ಚುವಲ್ ರ್‍ಯಾಲಿ ಸರಣಿಯನ್ನು ಆರಂಭ ಮಾಡಿದ್ದಾರೆ.
ಲೂಧಿಯಾನ ಮತ್ತು ಫಿರೋಜ್‌ಪುರ ಕ್ಷೇತ್ರಗಳಿಗೆ ಮಂಗಳವಾರ ಪ್ರಧಾನಿ ಮೋದಿ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಬುಧವಾರದಂದು ಮುಂದಿನ ವರ್ಚುವಲ್ ರ್‍ಯಾಲಿಗಳಿಗೆ ವ್ಯವಸ್ಥೆ ಮಾಡಿದ್ದರಿಂದ, ಈಗ ಪ್ರಧಾನಿ ಮೋದಿ ಪಂಜಾಬ್‌ನಲ್ಲಿ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಘೋಷಣೆ ಮಾಡಿದೆ. ಈ ರ್‍ಯಾಲಿಯು ಪಿಎಪಿ ಮೈದಾನದಲ್ಲಿ ನಡೆಯಲಿದೆ ಎಂದು ಮಾಹಿತಿ ಲಭ್ಯವಾಗಿದೆ.

ವರ್ಚುವಲ್ ರ್‍ಯಾಲಿಯಲ್ಲಿ ಪ್ರಭಾವ ಕಡಿಮೆ!
2017ರಲ್ಲಿಯೂ ಪಕ್ಷವು ಈ ಸ್ಥಳವನ್ನು ಆಯ್ಕೆ ಮಾಡಿತ್ತು ಮತ್ತು ಈ ಬಾರಿಯೂ ಅದೇ ಸ್ಥಳದಲ್ಲಿ ರ್‍ಯಾಲಿಯನ್ನು ನಡೆಸುವ ಸಾಧ್ಯತೆ ಎಂದು ಬಿಜೆಪಿಯ ಮಾಜಿ ಸಚಿವ ಮನೋರಂಜನ್ ಕಾಲಿಯಾ ಹೇಳಿದ್ದಾರೆ. ವರ್ಚುವಲ್ ರ್‍ಯಾಲಿಯ ಪ್ರಭಾವ ಹೆಚ್ಚಿಲ್ಲ ಮತ್ತು ಮತದಾರರನ್ನು ಪಕ್ಷದ ಪರವಾಗಿ ಒಲಿಸಿಕೊಳ್ಳುವಲ್ಲಿ ಈ ವರ್ಚುವಲ್ ರ್‍ಯಾಲಿ ವಿಫಲವಾಗಿದೆ ಎಂದು ಭಾವಿಸಿದ ಹಿನ್ನೆಲೆ ಈಗ ಭೌತಿಕ ರ್‍ಯಾಲಿಯನ್ನು ನಡೆಸಲು ನಿರ್ಧರಿಸಲಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನವರಿ 5 ರಂದು ಫಿರೋಜ್‌ಪುರದಲ್ಲಿ ರ್‍ಯಾಲಿಗಾಗಿ ಪಂಜಾಬ್‌ಗೆ ಬಂದಿದ್ದರು. ಭದ್ರತಾ ಲೋಪ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಫಿರೋಜ್‌ಪುರದಲ್ಲಿ ಸಮಾವೇಶ ರದ್ದು ಮಾಡಿದ್ದಾರೆ ಎಂದು ಗೃಹ ಸಚಿವಾಲಯ ಹೇಳಿದೆ.
ಹುಸೇನಿವಾಲಾದಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಸುಮಾರು 30-ಕಿಮೀ ದೂರದಲ್ಲಿ, ಪ್ರಧಾನ ಮಂತ್ರಿಯ ಬೆಂಗಾವಲು ಪಡೆ ಫ್ಲೈಓವರ್ ಅನ್ನು ತಲುಪಿದಾಗ, ಕೆಲವು ಪ್ರತಿಭಟನಾಕಾರರು ರಸ್ತೆಯನ್ನು ನಿರ್ಬಂಧಿಸಿರುವುದು ಕಂಡುಬಂದಿದೆ. ಪ್ರಧಾನಿ 15-20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಲುಕಿಕೊಂಡರು. ಇದು ಪ್ರಧಾನಿಯವರ ಭದ್ರತೆಯಲ್ಲಿ ದೊಡ್ಡ ಲೋಪವಾಗಿದೆ ಎಂದು ಆರೋಪ ಮಾಡಲಾಗಿದೆ. ಈ ವಿಚಾರ ಭಾರೀ ರಾಜಕೀಯ ಕದನಕ್ಕೆ ಕಾರಣವಾಗಿದೆ. ಸದ್ಯ ಈ ವಿಚಾರ ಸುಪ್ರೀಂ ಕೋರ್ಟ್ ವಿಚಾರಣೆಗೊಳಪಟ್ಟಿದೆ.
ಎಲ್ಲಿ, ಯಾವಾಗ ಪ್ರಧಾನಿ ಮೋದಿ ರ್‍ಯಾಲಿ ಭಾಷಣ?
"ಪ್ರಧಾನಿ ಮೋದಿ ಫೆಬ್ರವರಿ 16 ರಂದು ಪಠಾಣ್‌ಕೋಟ್‌ನಲ್ಲಿ ಎರಡನೇ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೂರನೆಯದು ಫೆಬ್ರವರಿ 17 ರಂದು ಅಬೋಹರ್‌ನಲ್ಲಿ ನಡೆಯಲಿದೆ," ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಶರ್ಮಾ ಹೇಳಿದ್ದಾರೆ. "ಪ್ರಧಾನಿಯವರ ರ್‍ಯಾಲಿಗಳು ರಾಜ್ಯದಲ್ಲಿನ ರಾಜಕೀಯ ವಾತಾವರಣವನ್ನು ಬದಲಾಯಿಸುತ್ತವೆ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲಾ ಎನ್‌ಡಿಎ ಅಭ್ಯರ್ಥಿಗಳ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುತ್ತವೆ," ಎಂದು ಕೂಡಾ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭಾಷ್ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 20 ನಿಮಿಷಗಳ ಕಾಲ ಸಿಲುಕಿಕೊಂಡಿದ್ದ ಭದ್ರತಾ ಲೋಪದ ತನಿಖೆಯನ್ನು ನಿವೃತ್ತ ನ್ಯಾಯಮೂರ್ತಿ ಮಲ್ಹೋತ್ರಾ ಅವರ ನೇತೃತ್ವದಲ್ಲಿ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಹೇಳಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಪಂಜಾಬ್ ಪೊಲೀಸರು ವಿಚಾರಣೆಯ ಭಾಗವಾಗಲಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications