Get Updates
Get notified of breaking news, exclusive insights, and must-see stories!

ಪಂಜಾಬ್‌ ಚುನಾವಣೆ 2022: ಸಿಧು vs ಅಕಾಲಿದಳದ ಬಿಕ್ರಮ್

ಚಂಡೀಗಢ, ಜನವರಿ 26: ಡ್ರಗ್ಸ್ ಪ್ರಕರಣದಲ್ಲಿ ಶಿರೋಮಣಿ ಅಕಾಲಿದಳದ ನಾಯಕ ಬಿಕ್ರಮ್ ಮಜಿಥಿಯಾ ಬಂಧನಕ್ಕಾಗಿ ಭಾರೀ ಪಣತೊಟ್ಟಿದ್ದ ಕಾಂಗ್ರೆಸ್ ಪಂಜಾಬ್‌ನ ಮುಖ್ಯಸ್ಥ ನವಜೋತ್ ಸಿಂಗ್‌ ಸಿಧು ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅಕಾಲಿದಳದ ನಾಯಕ ಬಿಕ್ರಮ್ ಮಜಿಥಿಯಾರನ್ನೇ ಎದುರಿಸಲಿದ್ದಾರೆ. ರಾಜ್ಯ ಕಾಂಗ್ರೆಸ್ ಮುಖ್ಯಸ್ಥರು ಸ್ಪರ್ಧಿಸುತ್ತಿರುವ ಅಮೃತಸರ (ಪೂರ್ವ) ವಿಧಾನಸಭಾ ಕ್ಷೇತ್ರದಲ್ಲಿ ಬಿಕ್ರಮ್ ಮಜಿಥಿಯಾರನ್ನು ಕಣಕ್ಕೆ ಇಳಿಸುವುದಾಗಿ ಅಕಾಲಿದಳ ಇಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕಾಂಗ್ರೆಸ್ ಪಂಜಾಬ್‌ನ ಮುಖ್ಯಸ್ಥ ನವಜೋತ್ ಸಿಂಗ್‌ ಸಿಧು ಅಮೃತಸರ ಪೂರ್ವದ ಹಾಲಿ ಶಾಸಕರಾಗಿದ್ದಾರೆ. 2017ರ ವಿಧಾನಸಭೆ ಚುನಾವಣೆಯಲ್ಲಿ ನವಜೋತ್ ಸಿಂಗ್‌ ಸಿಧು ಈ ಕ್ಷೇತ್ರದಲ್ಲಿ ನಿರಾಯಾಸವಾಗಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಸಿಧು ವಿರುದ್ದ ಯಾವುದೇ ಪ್ರಮುಖ ಅಭ್ಯರ್ಥಿಗಳು ಚುನಾವಣೆಗೆ ಇಳಿಸಿರಲಿಲ್ಲ. ಆದರೆ ಈ ಬಾರಿ ಅಕಾಲಿದಳ ತನ್ನ ಪ್ರಮುಖ ನಾಯಕ ಬಿಕ್ರಮ್ ಮಜಿಥಿಯಾರನ್ನು ಈ ಕ್ಷೇತ್ರದಲ್ಲೇ ಕಣಕ್ಕೆ ಇಳಿಸಲು ನಿರ್ಧಾರ ಮಾಡಿದೆ.

ಬಿಕ್ರಮ್ ಮಜಿಥಿಯಾ ಸ್ಪರ್ಧಿಸುತ್ತಿರುವ ಎರಡನೇ ಸ್ಥಾನ ಇದಾಗಿದೆ. ಅವರು 2012 ಮತ್ತು 2017 ರ ವಿಧಾನಸಭೆ ಚುನಾವಣೆಗಳಲ್ಲಿ ಅಮೃತಸರದ ವಿಧಾನಸಭಾ ಕ್ಷೇತ್ರವಾದ ಮಜಿಥಿಯಾದಲ್ಲಿ ಸ್ಫರ್ಧಿಸಿ ಗೆಲುವು ಸಾಧಿಸಿದ್ದಾರೆ. ಈ ಮಜಿಥಿಯಾ ಕ್ಷೇತ್ರವು ಬಿಕ್ರಮ್ ಮಜಿಥಿಯಾರ "ಸುರಕ್ಷಿತ ಸ್ಥಾನ" ಎಂದು ಪರಿಗಣಿಸಲಾಗಿದೆ.

Punjab Poll: Navjot Sidhu Versus Akali Dals Bikram Majithia In Punjabs Amritsar East Seat

ಡಿಸೆಂಬರ್‌ನಲ್ಲಿ, 46 ವರ್ಷದ ಶಿರೋಮಣಿ ಅಕಾಲಿದಳದ ನಾಯಕ ಬಿಕ್ರಮ್ ಮಜಿಥಿಯಾರನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧನ ಮಾಡಲಾಗಿದೆ. ನಂತರ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ. ಸದ್ಯ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ. ಇನ್ನು ನವಜೋತ್ ಸಿಂಗ್‌ ಸಿಧು ಬಿಕ್ರಮ್ ಮಜಿಥಿಯಾರನ್ನು ಬಂಧನ ಮಾಡುವವರೆಗೆ ನಾನು ವಿಶ್ರಾಂತಿಯನ್ನು ಪಡೆಯಲಾರೆನು ಎಂದು ಘೋಷಣೆ ಮಾಡಿದ್ದರು. ಆದರೆ ಸಿಧುರ ಈ ಘೋಷಣೆಗೆ ಅಕಾಲಿದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪಕ್ಷದಿಂದ ಸಿಧು ವಿರುದ್ದಬಿಕ್ರಮ್ ಮಜಿಥಿಯಾರನ್ನು ನಿಲ್ಲಿಸಲಾಗಿದೆ.

ಉನ್ನತ ಮಟ್ಟದ ಸ್ಪರ್ಧೆಗೆ ಸಾಕ್ಷಿಯಾಗುವ ಏಕೈಕ ಸ್ಥಾನ

2017 ರ ಚುನಾವಣೆಗಿಂತ ಭಿನ್ನವಾಗಿ, ರಾಜ್ಯದಲ್ಲಿ ಉನ್ನತ ಮಟ್ಟದ ಸ್ಪರ್ಧೆಗೆ ಸಾಕ್ಷಿಯಾಗುವ ಏಕೈಕ ಸ್ಥಾನ ಇದಾಗಿದೆ. ಈ ನಡುವೆ ಸಿಧು ಅವರ ಇನ್ನೊಂದು ದೊಡ್ಡ ಎದುರಾಳಿಯಾದ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಪಂಜಾಬ್ ಲೋಕ ಕಾಂಗ್ರೆಸ್ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪಟಿಯಾಲ ನಗರದಿಂದ ಸ್ಪರ್ಧಿಸುತ್ತಿದ್ದಾರೆ. 2017 ರಲ್ಲಿ, ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ತಮ್ಮ ಹಿಂದಿನ ಪ್ರಕಾಶ್ ಸಿಂಗ್ ಬಾದಲ್ ವಿರುದ್ಧ ತಮ್ಮ ಪ್ರಬಲವಾದ ಲಂಬಿ ಕ್ಷೇತ್ರದಿಂದ ಸ್ಪರ್ಧಿಸಿ ವಿಫಲರಾಗಿದ್ದರು. ಫಜಿಲ್ಕಾ ಜಿಲ್ಲೆಯ ಜಲಾಲಾಬಾದ್ ಕ್ಷೇತ್ರದಿಂದ ಎಎಪಿಯ ಭಗವಂತ್ ಮಾನ್ ಮತ್ತು ಕಾಂಗ್ರೆಸ್‌ನ ರವನೀತ್ ಬಿಟ್ಟು ವಿರುದ್ಧವೂ ಸುಖ್ಬೀರ್ ಬಾದಲ್ ಯಶಸ್ವಿಯಾಗಿ ಸ್ಪರ್ಧಿಸಿದ್ದರು.

ಶಿರೋಮಣಿ ಅಕಾಲಿದಳದ ಪ್ರಧಾನ ಕಾರ್ಯದರ್ಶಿಯಾಗಿರುವ ಬಿಕ್ರಮ್ ಸಿಂಗ್ ಮಜಿಥಿಯಾ ಅವರು ಪಕ್ಷದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಅವರ ಸೋದರ ಮಾವ ಮತ್ತು ಮಾಜಿ ಕೇಂದ್ರ ಸಚಿವ ಹರ್ಸಿಮ್ರತ್ ಕೌರ್ ಬಾದಲ್ ಅವರ ಸಹೋದರ. 2007-2017ರ ಅವಧಿಯಲ್ಲಿ ಪಂಜಾಬ್ ಕ್ಯಾಬಿನೆಟ್‌ನಲ್ಲಿ ಕಂದಾಯ, ಪುನರ್ವಸತಿ ಮತ್ತು ವಿಪತ್ತು ನಿರ್ವಹಣೆ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವರಾಗಿದ್ದರು.

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಪಂಜಾಬ್‌ನ 117 ವಿಧಾನಸಭೆ ಕ್ಷೇತ್ರಗಳಿಗೆ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಪಂಚ ರಾಜ್ಯಗಳಲ್ಲಿ ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. (ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+