ಪಂಜಾಬ್ ಚುನಾವಣೆ: ಮಾಜಿ ಸೇನಾ ಮುಖ್ಯಸ್ಥ ಜೆಜೆ ಸಿಂಗ್ ಬಿಜೆಪಿ ಸೇರ್ಪಡೆ
ಚಂಡೀಗಢ, ಜನವರಿ 19: ಪಂಜಾಬ್ ವಿಧಾನಸಭಾ ಚುನಾವಣೆಗೆ ಇನ್ನು ಒಂದು ತಿಂಗಳು ಕೂಡಾ ಇಲ್ಲ. ಈ ನಡುವೆ ಮಾಜಿ ಸೇನಾ ಮುಖ್ಯಸ್ಥ ಜನರಲ್ ಜೋಗಿಂದರ್ ಜಸ್ವಂತ್ ಸಿಂಗ್ ಮಂಗಳವಾರ ಪಂಜಾಬ್‌ನಲ್ಲಿ ಬಿಜೆಪಿಗೆ ಸೇರಿಸದ್ದಾರೆ. ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸೇರಿದಂತೆ ಪಕ್ಷದ ನಾಯಕತ್ವದ ಸಮ್ಮುಖದಲ್ಲಿ ಸೇರ್ಪಡೆಗೊಂಡಿದ್ದಾರೆ.
ಮಾಜಿ ಸೇನಾ ಮುಖ್ಯಸ್ಥ ಜನರಲ್ ಜೋಗಿಂದರ್ ಜಸ್ವಂತ್ ಸಿಂಗ್ ಅವರನ್ನು ಶೇಖಾವತ್ ಮತ್ತು ಪಂಜಾಬ್ ಬಿಜೆಪಿ ಮುಖ್ಯಸ್ಥ ಅಶ್ವನಿ ಶರ್ಮಾ ಸಿಂಗ್ ಪಕ್ಷಕ್ಕೆ ಸ್ವಾಗತಿಸಿದರು. ಈ ಹಿಂದೆ ಜನರಲ್ ವಿಕೆ ಸಿಂಗ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಈಗ ಜನರಲ್ ಜೆಜೆ ಸಿಂಗ್ ಬಿಜೆಪಿಗೆ ಸೇರ್ಪಡೆಯಾದ ಪಕ್ಷದ ಎರಡನೇ ಸೇನಾ ಮುಖ್ಯಸ್ಥರಾಗಿದ್ದಾರೆ.
ಪಂಜಾಬ್ ಎಎಪಿ ಸಿಎಂ ಅಭ್ಯರ್ಥಿ ಭಗವಂತ್ ಮನ್ ಯಾರು?
ಮಾಜಿ ಸೇನಾ ಮುಖ್ಯಸ್ಥರು 2018 ರಲ್ಲಿ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ತೊರೆದಿದ್ದರು. ಜನರಲ್ ಜೆಜೆ ಸಿಂಗ್ ಅವರು 2017 ರಲ್ಲಿ ಎಸ್‌ಎಡಿಗೆ ಸೇರಿದ್ದರು ಮತ್ತು ಆ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಪಟಿಯಾಲದಿಂದ ಆಗಿನ ಕಾಂಗ್ರೆಸ್ ನಾಯಕ ಅಮರಿಂದರ್ ಸಿಂಗ್ ವಿರುದ್ಧ ಸ್ಪರ್ಧಿಸಿ ವಿಫಲರಾಗಿದ್ದರು. ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದ ಜೆಜೆ ಸಿಂಗ್, 2005ರಲ್ಲಿ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡ ಮೊದಲ ಸಿಖ್ ವ್ಯಕ್ತಿ ಆಗಿದ್ದಾರೆ. ಅಕಾಲಿದಳದ ಶಾಸಕ ಶರಣಜಿತ್ ಧಿಲ್ಲೋನ್ ಅವರ ಸಹೋದರ ಅಜ್ಮೀರ್ ಸಿಂಗ್ ಮತ್ತು ಮಾಜಿ ಡಿಜಿಪಿ, ಸಿಆರ್‌ಪಿಎಫ್, ಜಮ್ಮು ಮತ್ತು ಕಾಶ್ಮೀರ ಐಜಿಯಾಗಿ ಸೇವೆ ಸಲ್ಲಿಸಿದ ಎಸ್ ಎಸ್ ಸಂಧು ಕೂಡಾ ಮಂಗಳವಾರ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.
ಬಿಜೆಪಿ ಮೈತ್ರಿಕೂಟದ ಸೀಟು ಹಂಚಿಕೆ ಹೇಗೆ?
ಬಿಜೆಪಿಯು ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಲೋಕ ಕಾಂಗ್ರೆಸ್ ಮತ್ತು ರಾಜ್ಯಸಭಾ ಸಂಸದ ಸುಖದೇವ್ ಸಿಂಗ್ ಧಿಂಡ್ಸಾ ನೇತೃತ್ವದ ಶಿರೋಮಣಿ ಅಕಾಲಿದಳ ಜೊತೆ ಮೈತ್ರಿ ಮಾಡಿಕೊಂಡು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ. ಇನ್ನು ಸೀಟು ಹಂಚಿಕೆ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, "ಬಹುತೇಕ ಅಂತಿಮಗೊಳಿಸಲಾಗಿದೆ," ಎಂದು ತಿಳಿಸಿದ್ದಾರೆ.
ಎಎಪಿಯ ಪಂಜಾಬ್ ಘಟಕದ ಅಧ್ಯಕ್ಷ ಭಗವಂತ್ ಮನ್‌ರನ್ನು ಆಮ್ ಆದ್ಮಿ ಪಕ್ಷ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಬಗ್ಗೆಯೂ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಪ್ರತಿಕ್ರಿಯೆ ನೀಡಿದ್ದು, "ಇದು ಯಾವುದೇ ಪಕ್ಷದ ಆಂತರಿಕ ವಿಷಯವಾಗಿದ್ದರೂ, ಸಂಸತ್ತಿಗೆ ಹಾಜರಾಗುವಾಗ ಭಗವಂತ್ ಮನ್ ಅಮಲೇರಿದ ಸ್ಥಿತಿಯಲ್ಲಿ ಇದ್ದರು," ಎಂಬುವುದನ್ನು ಪ್ರಸ್ತಾಪ ಮಾಡಿದ್ದಾರೆ. "ಪಂಜಾಬ್ ಇಂದು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ಡ್ರಗ್ಸ್ ಹಾವಳಿ," ಎಂದು ಕೂಡಾ ಹೇಳಿದರು.
ಪಂಜಾಬ್ ಚುನಾವಣಾ ಸಮೀಕ್ಷೆ: ಎಎಪಿ-ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ
"ಭಗವಂತ್ ಮನ್ ಮದ್ಯಪಾನ ಮಾಡಿರುವ ವಿಡಿಯೋವನ್ನು ಮಾಧ್ಯಮಗಳು ಈ ಹಿಂದೆ ತೋರಿಸಿದ್ದು, ಆ ವ್ಯಕ್ತಿ ಮುಖ್ಯಮಂತ್ರಿ ಆದರೆ ಪಂಜಾಬ್‌ನ ಯುವಕರಿಗೆ ನಾವು ಯಾವ ರೀತಿಯ ಉದಾಹರಣೆ ನೀಡಲು ಪ್ರಯತ್ನಿಸುತ್ತಿದ್ದೇವೆ ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕು," ಎಂದು ಗಜೇಂದ್ರ ಸಿಂಗ್ ಶೇಖಾವತ್ ಆರೋಪ ಮಾಡಿದರು. ಹಾಗೆಯೇ, "ನಿಮ್ಮ ಮೂಲಕ (ಮಾಧ್ಯಮ), ನಾನು ಈ ಪ್ರಶ್ನೆಗಳನ್ನು ಅರವಿಂದ್ ಕೇಜ್ರಿವಾಲ್‌ಗೆ ಕೇಳಲು ಬಯಸುತ್ತೇನೆ," ಎಂದಿದ್ದಾರೆ.
ಬರ್ನಾಲಾದಲ್ಲಿ 2019ರ ರ್‍ಯಾಲಿಯಲ್ಲಿ ಕೇಜ್ರಿವಾಲ್ ಮತ್ತು ಅವರ ತಾಯಿಯ ಸಮ್ಮುಖದಲ್ಲಿ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮದ್ಯವನ್ನು ತ್ಯಜಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಹಾಗೆಯೇ, ತನ್ನ ರಾಜಕೀಯ ಪ್ರತಿಸ್ಪರ್ಧಿಗಳು ತನ್ನನ್ನು "ಹುಟ್ಟು ಕುಡುಕ" ಎಂದು ಬಿಂಬಿಸುವ ಮೂಲಕ ಮಾನಹಾನಿ ಮಾಡಿದ್ದಾರೆ ಎಂದು ಭಗವಂತ್ ಮನ್ ಆರೋಪ ಮಾಡಿದ್ದಾರೆ. ಇನ್ನು ಮಂಗಳವಾರ ಟಿವಿ ಸಂದರ್ಶನದಲ್ಲಿ ಮತ್ತೆ ಈ ಆರೋಪ ಮಾಡಿದ್ದಾರೆ. (ಒನ್‌ಇಂಡಿಯಾ ಸುದ್ದಿ)